ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರ್ಮಿಕ ವಿಭಜನೆ: ಕಿರಣ್ ಮಜುಂದಾರ್ ಶಾ ಟ್ವೀಟ್‌ಗೆ ಬಿಜೆಪಿ ತಿರುಗೇಟು

|
Google Oneindia Kannada News

ಬೆಂಗಳೂರು, ಏಪ್ರಿಲ್ 1: ''ಕರ್ನಾಟಕದಲ್ಲಿ ಎಲ್ಲರನ್ನು ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ಪಾಲಿಸಲಾಗುತ್ತಿದೆ. ನಾವು ಕೋಮು ಆಧಾರಿತ ಬಹಿಷ್ಕಾರಕ್ಕೆ ಅವಕಾಶ ಕಲ್ಪಿಸಬಾರದು, ಐಟಿ-ಬಿಟಿ ಕ್ಷೇತ್ರದಲ್ಲಿ ಕೋಮುವಾದಕ್ಕೆ ಅವಕಾಶ ಕಲ್ಪಿಸಿದರೆ ನಮ್ಮ ಜಾಗತಿಕ ನಾಯಕತ್ವವನ್ನೇ ನಾಶಪಡಿಸಬಹುದು'' ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಕಿರಣ್ ಅವರ ಟ್ವೀಟ್‌ಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿನ ಹಿಜಾಬ್ ಪ್ರಕರಣ, ಹಿಂದು ದೇಗುಲಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್ ನಿಷೇಧ ಮುಂತಾದ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಿರಣ್, ಇಂಥ ಧಾರ್ಮಿಕ ವಿಭಜನೆ ತಡೆಯುವಂತೆ ಸಿಎಂ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಎಲ್ಲರೂ ಸಂಯಯದಿಂದ ವರ್ತಿಸಬೇಕು ಎಂದಿದ್ದಾರೆ.

ಕರ್ನಾಟಕದಲ್ಲಿ ಕೋಮುವಾದಿ ಬಹಿಷ್ಕಾರ: ಕಿರಣ್ ಮಜುಂದಾರ್ ಶಾ ಟ್ವೀಟ್ಕರ್ನಾಟಕದಲ್ಲಿ ಕೋಮುವಾದಿ ಬಹಿಷ್ಕಾರ: ಕಿರಣ್ ಮಜುಂದಾರ್ ಶಾ ಟ್ವೀಟ್

ಈ ನಡುವೆ ಕಿರಣ್ ಅವರ ಟ್ವೀಟ್ ವಿರುದ್ಧ ಅನೇಕರು ಪ್ರತಿಕ್ರಿಯಿಸಿದ್ದು, ಆಯ್ದ ಘಟನಾವಳಿಗಳಿಗೆ ಮಾತ್ರ ನೀವು ಸ್ಪಂದಿಸುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಕಿರಣ್ ವಾದಕ್ಕೆ ಪೂರಕವಾಗಿ ಟ್ವೀಟ್ ಮಾಡಿದ ಸಾರ್ವಜನಿಕರೊಬ್ಬರು, ರಾಜ್ಯದಲ್ಲಿ ಕೋಮು ಸಾಮರಸ್ಯ ಹದಗೆಡದಂತೆ ತಡೆಯುವಲ್ಲಿಸಿಎಂ ವಿಫಲವಾಗಿದ್ದಾರೆ, ಕರ್ನಾಟಕದ ಘನತೆ ಕುಸಿಯಲಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ಮಜುಂದಾರ್, ''ಬೊಮ್ಮಾಯಿ ಪ್ರಗತಿಪರ ನಾಯಕ ಅವರು ಈ ವಿವಾದವನ್ನು ಶಾಂಯುತವಾಗಿ ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆ'' ಎಂದಿದ್ದಾರೆ.

 BJP leader Amit Malviya responed to Kiran Mazumdar Shaws religious divide tweet

"ಕಿರಣ್ ಶಾ ಅವರಂತಹವರು ತಮ್ಮ ವೈಯಕ್ತಿಕ, ರಾಜಕೀಯ ಬಣ್ಣದ ಅಭಿಪ್ರಾಯವನ್ನು ಹೇರುವುದನ್ನು ನೋಡುವುದು ದುರದೃಷ್ಟಕರ ಮತ್ತು ಐಟಿಬಿಟಿ ವಲಯದಲ್ಲಿ ಭಾರತದ ನಾಯಕತ್ವದೊಂದಿಗೆ ಅದನ್ನು ಸಂಯೋಜಿಸುವುದು ದುರದೃಷ್ಟಕರವಾಗಿದೆ. ರಾಹುಲ್ ಬಜಾಜ್ ಒಮ್ಮೆ ಗುಜರಾತ್‌ಗೆ ಇದೇ ರೀತಿಯದ್ದನ್ನು ಹೇಳಿದ್ದರು, ಇದು ಇಂದು ಪ್ರಮುಖ ವಾಹನ ಉತ್ಪಾದನಾ ಕೇಂದ್ರವಾಗಿದೆ. ..," ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಬರೆದಿದ್ದಾರೆ.

"ಕರ್ನಾಟಕದಲ್ಲಿನ ಧಾರ್ಮಿಕ ವಿಭಜನೆಯ ಬಗ್ಗೆ ಕಿರಣ್ ಶಾ ಎಚ್ಚೆತ್ತುಕೊಳ್ಳುವುದನ್ನು ನೋಡಲು ಸಂತೋಷವಾಗಿದೆ. ಶಿಕ್ಷಣದ ಮೇಲೆ ಅಲ್ಪಸಂಖ್ಯಾತರು ಹಿಜಾಬ್‌ಗೆ ಆದ್ಯತೆ ನೀಡಲು ಪ್ರಯತ್ನಿಸಿದಾಗ ಅವರು ಮಾತನಾಡಿದ್ದಾರೆಯೇ ಅಥವಾ ಹಿಂದೂ ಸಂಸ್ಥೆಗಳಿಂದ ಹಿಂದೂಯೇತರರನ್ನು ಹೊರತುಪಡಿಸುವ ನಿಯಮಗಳನ್ನು ಕಾಂಗ್ರೆಸ್ ರೂಪಿಸಿದೆ. ಅವರು ತಮ್ಮ ಪ್ರಣಾಳಿಕೆಯನ್ನು ರಚಿಸಲು ಕಾಂಗ್ರೆಸ್‌ಗೆ ಸಹಾಯ ಮಾಡಿದರು. ವಿವರಿಸುತ್ತಾರೆಯೇ? " ಎಂದು ಅವರು ಟ್ವೀಟ್ ಮಾಡಿದ್ದಾರೆ.

Recommended Video

ಲೇಟ್ ಆಗಿ ಬಂದ್ರು ಲೇಟೆಸ್ಟ್ ಆಗಿ ಪರ್ಫಾರ್ಮ್ ಮಾಡ್ತಾರೆ ಡಿಕೆ | Dk next level | Oneindia Kannada

ಹಲಾಲ್‌ ಕಟ್ ವಿರುದ್ಧ ರೂಪಿಸಿರುವ ಜಟ್ಕಾ ಕಟ್ ಅಭಿಯಾನ, ಸಂಘಟನೆಗಳು ದೇವಾಲಯಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಹೇರಿರುವುದು ಮುಂತಾದ ವಿವಾದಗಳ ಬಗ್ಗೆ ಟ್ವೀಟ್ ಮಾಡಿರುವ ಕಿರಣ್ ಮಜುಂದಾರ್ ಶಾ ಅವರು, ಇದು 'ಕೋಮುವಾದಿ ಬಹಿಷ್ಕಾರ' ಎಂದು ಹರಿಹಾಯ್ದಿದ್ದಾರೆ. ಈ ಟ್ವೀಟ್ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಇನ್ನೂ ಮುಂದುವರೆದಿದೆ.

English summary
Biocon chief Kiran Mazumdar Shaw has urged Chief Minister Basavaraj Bommai to "resolve the growing religious divide" in the state, warning that if the tech sector becomes communal it will "destroy" India's global leadership in it. BJP leader Amit Malviya responed to her tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X