• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಗಮ ಮಂಡಳಿ, ಪ್ರಾಧಿಕಾರ ಹುದ್ದೆ ರದ್ದು: ಅಕ್ರಮಕ್ಕೆ ಮುಂದಾದ ಬಿಜೆಪಿ

|
Google Oneindia Kannada News

ಬೆಂಗಳೂರು ಜುಲೈ 13: ರಾಜ್ಯ ಮಟ್ಟದ ನಿಗಮ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ರದ್ದುಗೊಳಿಸಿರುವ ಬಿಜೆಪಿಯು ಹಣ ಪಡೆದು ಹುದ್ದೆಗಳನ್ನು ಹಂಚುತ್ತಿದೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಅಕ್ರಮ ಎಸಗಲು ಭಾರೀ ಹಣ ಸಂಗ್ರಹಿಸುತ್ತಿದೆ ಎಂದು ಆಮ್‌ ಆದ್ಮಿ ಪಕ್ಷ ಆರೋಪಿಸಿದೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಅವರು, ರಾಜ್ಯ ಸರ್ಕಾರವು ಸುಮಾರು 52 ನಿಗಮ ಮಂಡಳಿಗಳು, ಪ್ರಾಧಿಕಾರಿಗಳ ಅಧ್ಯಕ್ಷರನ್ನು ವಜಾ ಮಾಡಿರುವುದರ ಹಿಂದೆ ಭಾರೀ ಅಕ್ರಮ ಅಡಗಿದೆ ಎಂದು ದೂರಿದರು.

ಈದ್ಗಾ ಮೈದಾನ ವಿವಾದಕ್ಕೆ ಬಿಬಿಎಂಪಿಯೇ ಕಾರಣ ಎಂದ ಎಎಪಿ! ಈದ್ಗಾ ಮೈದಾನ ವಿವಾದಕ್ಕೆ ಬಿಬಿಎಂಪಿಯೇ ಕಾರಣ ಎಂದ ಎಎಪಿ!

ಬಿಜೆಪಿಯ 40% ಸರ್ಕಾರವು ಇದರಲ್ಲೂ ದುಡ್ಡು ಹೊಡೆಯುತ್ತಿದ್ದು, ಹೆಚ್ಚು ಹಣ ನೀಡಿದವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡುತ್ತಿದೆ. ಮುಂಬರುವ ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಭಾರಿ ಅಕ್ರಮ ಎಸಗಲು ಈಗಿನಿಂದಲೇ ಹುನ್ನಾ ನಡೆಸಿದೆ. ಅಕ್ರಮ ನಡೆಸಲು ಹಲವು ಮಾರ್ಗಗಳಿಂದ ಹಣ ಸಂಗ್ರಹಿಸುತ್ತಿದೆ. ಅದರ ಭಾಗವಾಗೇ ಸದ್ಯ ರಾಜ್ಯ ಮಟ್ಟದ ನಿಗಮ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ರದ್ದುಗೊಳಿಸಿದೆ ಎಂದು ಹೇಳಿದರು.

40% ಸರ್ಕಾರ ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಎಸಗುವವರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳಲ್ಲೇ ಉಳಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ಅನೇಕರು ತಮ್ಮ ಸ್ಥಾನಗಳ ಮೂಲಕ ನಿಗಮಗಳಲ್ಲಿ ಅಕ್ರಮ ಎಸಗಿದ್ದಾರೆ ಎಂದು ಅವರು ಆರೋಪಿಸಿದರು.

ನಿಗಮಗಳಲ್ಲಿ ಅಕ್ರಮ ಎಸಗಲಾಗಿದೆ: ರುದ್ರೇಶ್‌ ಅಧ್ಯಕ್ಷತೆಯ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಬಿವೃದ್ಧಿ ನಿಯಮಿತ (ಕೆಆರ್ ಐಡಿಎಲ್) ನಲ್ಲಿ ಅವ್ಯಾಹತವಾಗಿ ಅಕ್ರಮ ನಡೆಯುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಅಧ್ಯಕ್ಷ ಚಂದ್ರಪ್ಪರವರು ನಿಗಮವನ್ನು ಅಧೋಗತಿಗೆ ತಂದಿದ್ದಾರೆ. ಕೆಎಸ್ಆರ್‌ಟಿಸಿಯ ಬಹುತೇಕ ಬಸ್‌ಗಳು ಡಿಪೋದಲ್ಲೇ ನಿಂತಿರುವುದು ಇದಕ್ಕೆ ನಿದರ್ಶನ.

BJP has ready to illegal by canceling the post of corporation board and authority

ಸರ್ಕಾರದ ನಡೆ ಖಂಡನೀಯ: ಇನ್ನು ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಟಿಡಿಸಿ) ನಿರ್ವಹಣೆಯಲ್ಲಿ ಕಾಪು ಸಿದ್ದಲಿಂಗಸ್ವಾಮಿ ಸಂಪೂರ್ಣ ವಿಫಲರಾಗಿದ್ದಾರೆ. ಇವರೆಲ್ಲರನ್ನು ವಜಾ ಮಾಡದೇ ಉಳಿಸಿಕೊಳ್ಳಲಾಗಿದೆ. ಅಕ್ರಮ ಎಸಗುವವರನ್ನು ವಜಾ ಗೊಳಿಸದೇ ಉಳಿಸಿಕೊಂಡಿರುವ ಸರ್ಕಾರ ನಡೆ ಖಂಡನೀಯ. ಅಕ್ರಮ ಎಸಗುವವರಿಂದ ಹಣ ಮಾಡಲು ಬಿಜೆಪಿ ಹೊರಟಂತಿದೆ ಎಂದು ಜಗದೀಶ್ ವಿ. ಸದಂ ಕಿಡಿ ಕಾರಿದರು.

English summary
The Karnataka Government has abolished the posts of chairman and vice-chairman of corporation board, authorities and is distributing the posts by getting money, The Aam Aadmi Party has alleged on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X