IT Raid: ವಿವಿಧೆಡೆ ನಡೆದ ಐಟಿ ದಾಳಿ ಪ್ರಕರಣ CBIಗೆ ವಹಿಸಿ: ಬಿಜೆಪಿ ಒತ್ತಾಯ

ಬೆಂಗಳೂರು, ಅಕ್ಟೋಬರ್ 17: ಕರ್ನಾಟಕ, ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ನಗದು ಪತ್ತೆಯಾಗಿದೆ. ಇಷ್ಟೊಂದು ಹಣ ಪತ್ತೆ ಕುರಿತು ಕೇಂದ್ರ ತನಿಖಾ ದಳ (CBI) ದಿಂದ ತನಿಖೆ ನಡೆಸಬೇಕು ಎಂದು ಕರ್ನಾಟಕ ಬಿಜೆಪಿ ಆಗ್ರಹಿಸಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ವಿರುದ್ಧ ಭ್ರಷ್ಟಾಚಾರ ಬಗ್ಗೆ ಆರೋಪಿಸಿ ಕರ್ನಾಟಕ ಬಿಜೆಪಿ ಮಂಗಳವಾರ ಪ್ರತಿಭಟನೆ ನಡೆಸಿತು.ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿರುವ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿತು.

BJP Demands To Make CBI Probe Case of IT Raid and Seized 94 Crore

ಕರ್ನಾಟಕ, ತೆಲಂಗಾಣದಲ್ಲಿ ಸರ್ಕಾರಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ನಿವಾಸ, ಕಚೇರಿಗಳ ಮೇಲೆ ಮೇಲೆ ದಾಳಿ ನಡೆದಿದೆ. ಕರ್ನಾಟಕ ಬೆಂಳೂರಿನ ಒಬ್ಬರ ಮನೆಯಲ್ಲಿಯೇ ಸುಮಾರು 42 ಕೋಟಿ ನಗದು ಪತ್ತೆಯಾಗಿದೆ.

ಅಪಾರ ಪ್ರಮಾಣದ ನಗದು, ಚಿನ್ನಾಭರಣ ವಶ

ಒಟ್ಟಾರೆ ವಿವಿಧೆಡೆ ನಡೆಸಿದ ದಾಳಿಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 94 ಕೋಟಿ ರೂ. ನಗದು ಹಣ ಹಾಗೂ 8 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. 30 ಐಷಾರಾಮಿ ವಿದೇಶಿ ವಾಚ್‌ಗಳು ಜಪ್ತಿಗಮಾಡಲಾಗಿದೆ. ಈ ಕುರಿತು ಕೇಂದ್ರ ನೇರ ತೆರಿಗೆಗಳ ಮಂಡಳಿಯೇ ಅಧಿಕೃತ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಐಟಿ ಅಧಿಕಾರಿಗಳು ಗುತ್ತಿಗೆದಾರ ಮತ್ತು ಅವರ ಪುತ್ರನಿಂದ ಸುಮಾರು ₹42 ಕೋಟಿ ನಗದು ವಶಪಡಿಸಿಕೊಂಡಿದ್ದರ ಬಗ್ಗೆ ಐಟಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಈ ಸಂಬಂಧ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು. ಎಟಿಎಂ ಸರ್ಕಾರ ಎಂಬ ಫಲಕ ಹಿಡಿದ ಆಕ್ರೋಶ ಹೊರ ಹಾಕಿದರು.

BJP Demands To Make CBI Probe Case of IT Raid and Seized 94 Crore

ಬೇರೆ ರಾಜ್ಯಗಳಲ್ಲಿ ಲೂಟಿಯ ಹಣ ಬಳಕೆ?

ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರ ನೇತೃತ್ವ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರು, ಕಾಂಗ್ರೆಸ್ ಸರ್ಕಾರವು ತಾನು ಲೂಟಿ ಹೊಡೆದ, ಸಂಗ್ರಹಿಸಿದ ಹಣದಲ್ಲಿ ಚುನಾವಣೆಗೆ ಒಳಪಡುವ ರಾಜ್ಯಗಳಿಗೆ ಕಳುಹಿಸುವ ಅಜೆಂಡಾ ಹೊಂದಿದೆ ಎಂದು ಅವರು ಆರೋಪಿಸಿದರು.

ಸದ್ಯ ಕರ್ನಾಟಕದಲ್ಲಿ ಆಗುತ್ತಿರುವಷ್ಟು ಹಣದ ಲೂಟಿ ದೇಶದಲ್ಲಿ ಎಲ್ಲಿಯೂ ನಡೆದಿಲ್ಲ. ಗುತ್ತಿಗೆದಾರರಿಗೆ ಬಾಕಿ ಇರುವ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ ಈಗ ನೋಡಿದರೆ ಅವರ ಬಿಲ್‌ಗಳ ಬಾಕಿ ಹಣ ನೀಡದೇ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಅವರು ಆರೊಪಿಸಿದರು.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕರ್ನಾಟಕವು ಎಟಿಎಂ ಇದ್ದಂತೆ ಎಂದು ಡಿವಿ ಸದಾನಂದಗೌಡರು ಟೀಕಿಸಿದರು. ಆದಾಯ ತೆರಿಗೆ ಇಲಾಖೆಯಿಂದ ತನಿಖೆ ನಡೆಸಿದರೆ ಸಾಲದು. ಇಷ್ಟೊಂದು ಹಣ ಜಮೆ, ಲೂಟಿ ಹಿಂದೆ ಕಾಣದ ಕೈಗಳ ಕೈವಾಡವನ್ನೂ ಬಯಲಿಗೆಳೆಯಬೇಕು. ಲೂಟಿಯ ಹಿಂದೆ ಬಿದ್ದಿರುವವರನ್ನು ಬಯಲಿಗೆಳೆಯಲು ಸಿಬಿಐ ತನಿಖೆಗೆ ಆದೇಶಿಸಬೇಕು ಅವರು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+