'ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಕಂಡೆಕ್ಟರ್, ಕುಮಾರಸ್ವಾಮಿ ಡ್ರೈವರ್‌'

Recommended Video

      ಸಿದ್ದರಾಮಯ್ಯ ಹಾಗು ಎಚ್ ಡಿ ಕುಮಾರಸ್ವಾಮಿಗೆ ಲೇವಡಿ ಮಾಡಿದ ಬಿಜೆಪಿ ನಾಯಕ

      ಬೆಂಗಳೂರು, ಜುಲೈ 04: 'ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಕಂಡಕ್ಟರ್, ಕುಮಾರಸ್ವಾಮಿ ಡ್ರೈವರ್‌', ಸಿದ್ದರಾಮಯ್ಯ ಸೀಟಿ ಊದದೇ ಇದ್ದರೆ ಸರ್ಕಾರ ಮುಂದೆ ಹೋಗಲ್ಲ ಎಂದು ಬಣ್ಣಿಸಿದ್ದು ಬಿಜೆಪಿಯ ಆಯನೂರು ಮಂಜುನಾಥ.

      ವಿಧಾನಪರಿಷತ್‌ ನಲ್ಲಿ ನಡೆದ ಸ್ವಾರಸ್ಯಕರ ಚರ್ಚೆಯಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಅವರು ಪ್ರಸ್ತುತ ಸರ್ಕಾರವನ್ನು ಬಣ್ಣಿಸಿದ್ದು ಮೇಲ್ಕಂಡ ರೀತಿಯಲ್ಲಿ. ಮಂಜುನಾಥ್ ಅವರ ಮಾತಿಗೆ ಸದನದಲ್ಲಿ ನಗು.

       BJP Ayanur Manjunath funny speech in legislative council

      ನಮ್ಮ ಕಡೆ ಬಸ್ಸಿನ ಚಾಲಕ ಬಸ್ಸು ಸ್ಟಾರ್ಟ್ ಮಾಡಿಕೊಂಡು ಕಂಡಕ್ಟರ್ ಸೀಟಿಗೆ ಕಾಯುತ್ತಾ ನಿಂತಿರುತ್ತಾನೆ, ಇದರಿಂದ ಡೀಸೆಲ್ ವ್ಯರ್ಥವಾಗುತ್ತದೆ, ಮೈತ್ರಿ ಸರ್ಕಾರದ ಸ್ಥಿತಿಯೂ ಇದೆ. ಕುಮಾರಸ್ವಾಮಿ ಸಿದ್ದರಾಮಯ್ಯರ ಆಜ್ಞೆಗೆ ಕಾಯಬೇಕು ಇದರಿಂದ ಕೆಲಸಗಳು ನಿಧಾನ ಆಗುತ್ತಿವೆ ಎಂದು ಅವರು ಕುಟುಕಿದರು.

      ವಿಧಾನಸಭೆ ಯಲ್ಲಿ ಕುಮಾರಸ್ವಾಮಿ ಹಿಂದಿನ ಕುರ್ಚಿಯಲ್ಲೇ ಸಿದ್ದರಾಮಯ್ಯ ಕುರುತ್ತಾರೆ. ಕುಮಾರಸ್ವಾಮಿ ಪ್ರತಿಯೊಂದಕ್ಕೂ ಹಿಂದೆ ತಿರುಗಿ ಗ್ರೀನ್ ಸಿಗ್ನಲ್ ಪಡೆಯಬೇಕು ಎಂದು ಅವರು ಛೇಡಿಸಿದರು.

      ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಜೆಡಿಎಸ್‌ನ ಶರವಣ, ನಮ್ಮದು ಡಬಲ್ ಎಂಜಿನ್ ವಾಹನ ಬಹಳ ಗಟ್ಟಿ ಇದೆ ಎಂದರು. ಇದಕ್ಕೂ ಟಾಂಗ್ ನೀಡಿದ ಮಂಜುನಾಥ ಗಾಡಿಗೆ ಡಬಲ್ ಎಂಜಿನ್ ಇರಲಿ ಬಾಡಿಗೆ ಬೇಡ ಎಂದು ಮತ್ತೆ ಛೇಡಿಸಿದರು.

      ರೈತರ ಸಾಲದ ಜೊತೆಗೆ ಶಿಕ್ಷಣದ ಸಾಲವನ್ನೂ ಮನ್ನಾ ಮಾಡಬೇಕು ಅದೇನು ದೊಡ್ಡ ಹೊರೆಯೂ ಆಗಲಾರದು ಎಂದು ಆಯನೂರು ಮಂಜುನಾಥ ಒತ್ತಾಯಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+