Get Updates
Get notified of breaking news, exclusive insights, and must-see stories!

ವೈಟ್‌ಕ್ಯಾಟಗರಿ ಪಟ್ಟಿಗೆ 'ಜೈವಿಕ ಇಂಧನ': ಇದು ಮಾಲಿನ್ಯಕಾರವಲ್ಲ...!

ಬೆಂಗಳೂರು, ಮೇ 01: ಬೆಂಗಳೂರಿನಂತಹ ನಗರಗಳನ್ನು ಒಳಗೊಂಡು ರಾಜ್ಯದಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಜೈವಿಕ ಇಂಧನ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಜೈವಿಕ ಇಂಧನವು ಮಾಲಿನ್ಯಕಾರಕವಲ್ಲ ಎಂದಿರುವ ಜೈವಿಕ್ ಇಂಧನ ಮಂಡಳಿಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸಹಕಾರದಲ್ಲಿ ಅದನ್ನು ವೈಟ್ಕ ಕ್ಯಾಟಗರಿ ಪಟ್ಟಿಗೆ ಸೇರಿಸಲು ಕ್ರಮವಹಿಸಿದೆ.

ಪರಿಸರ ಸ್ನೇಹಿಯಾಗಿರುವ ಜೈವಿಕ ಇಂಧನವನ್ನು "ಮಾಲಿನ್ಯಕಾರಕವಲ್ಲ ಇಂಧನದ ಗುಂಪಿಗೆ" (ವೈಟ್‌ಕ್ಯಾಟಗರಿ) ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್‌.ಈ. ಸುಧೀಂದ್ರ ಹೇಳಿದರು.

Biofuels to Be Added to Karnataka s Non-Polluting Fuel List Biofuel Board says

ನಗರದಲ್ಲಿ ಬುಧವಾರ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವತಿಯಿಂದ "ಜೈವಿಕ ಇಂಧನ ನೀತಿ ನಿರೂಪಣೆಯಲ್ಲಿನ ಬದಲಾವಣೆ ಹಾಗೂ ನಿಲುವುಗಳ'' ಕುರಿತು ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಸಂವಾದದ ವೇಳೆ ಜೈವಿಕ ಇಂಧನವನ್ನು ರಾಜ್ಯದಲ್ಲಿ ಮಾಲಿನ್ಯಕಾರಕವಲ್ಲದ ಇಂಧನ (ವೈಟ್‌ ಕ್ಯಾಟಗರಿ)ಗೆ ಸೇರ್ಪಡೆ ಮಾಡುವ ಕುರಿತು ಸಂವಾದಕರೊಬ್ಬರು ಪ್ರಸ್ತಾಪಿಸಿದರು.

Take a Poll

ಜೈವಿಕ ಇಂಧನ ಬಳಕೆ ಹೆಚ್ಚಾಗಲಿ..

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗಾಗಲೇ ಎಲ್ಲಾ ಮಾದರಿಯ ಜೈವಿಕ ಇಂಧವನ್ನು ಮಾಲಿನ್ಯಕಾರಕವಲ್ಲದ ಇಂಧನದ ಗುಂಪಿಗೆ ಸೇರಿಸಿದೆ. ಕರ್ನಾಟಕದಲ್ಲೂ ಈ ಕೆಲಸ ಆಗಬೇಕು ಎಂದು ಪ್ರಸ್ತಾಪಿಸಿದರು. ಪ್ರಸ್ತುತದಲ್ಲಿ ಜೈವಿಕ ಇಂಧನ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿಸಬೇಕು ಎಂಬುದು ಅನಿವಾರ್ಯ. ಆದ್ದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನೂ ಸಂವಾದನಕ್ಕೆ ಆಹ್ವಾನಿಸಿ, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆವು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

ಉತ್ಪಾದನಾ ಘಟಕ ಸ್ಥಾಪನೆ, ಹೂಡಿಕೆಗೆ ವಿಫುಲ ಅವಕಾಶ

ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕ ಆರಂಭಕ್ಕೆ ವಿಫುಲ ಅವಕಾಶಗಳಿವೆ. ಅದಕ್ಕಾಗಿ ಹೂಡಿಕೆದಾರರು ಮುಂದೆ ಬರಬೇಕು. ನಮ್ಮಲ್ಲಿ ಮೂಲಸೌಕರ್ಯ, ತೆರಿಗೆ ಪದ್ಧತಿ, ಕಚ್ಛಾವಸ್ತುಗಳ ಲಭ್ಯತೆ, ನೇಪಿಯರ್ ಗ್ರಾಸ್, ಕೃಷಿ ತ್ಯಾಜ್ಯ ಸೇರಿದಂತೆ ಜೈವಿಕ ಇಂಧನ ಉತ್ಪಾದನೆಗೆ ಸಾಕಷ್ಟು ಪೂರಕ ವಾತಾವರಣವಿದೆ. ಹೂಡಿಕೆದಾರರಿಗೆ ರಾಜ್ಯ ಸೂಕ್ತ ಸ್ಥಳವಾಗಿದೆ ಎಂದು ಹೇಳಿದರು.

ಕ್ರಿಯಾಶೀಲ ಮಹಿಳಾ ಉದ್ಯಮಿಗಳೂ ಕೂಡ ಜೈವಿಕ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು, ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ತಮ್ಮ ಪಾತ್ರದ ಪ್ರಾಮುಖ್ಯತೆ ಎತ್ತಿ ಹಿಡಿದಿದ್ದಾರೆ. ಈ ಕ್ಷೇತ್ರವು ಮಹಿಳೆಯರು ಸಬಲೀಕರಣಗೊಳ್ಳಲು ಉತ್ತಮ ವೇದಿಕೆಯಾಗಲಿದೆ ಎಂದು ಅವರು ಆಹ್ವಾನಿಸಿದರು.

ಸಂವಾದದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಂಡಳಿಯು ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಎಲ್ಲಾ ವಿಭಾಗಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವಂತೆ ಮಾಡಲು ಕಟಿಬದ್ಧವಾಗಿದ್ದು ಎಲ್ಲಾ ಕೈಗಾರಿಕಾ ಪ್ರತಿನಿಧಿಗಳು ನೀಡಿರುವ ಸಲಹೆಗಳನ್ನು ಕ್ರೂಢೀಕರಿಸಿ ಉದ್ದೇಶಿತ ಜೈವಿಕ ಇಂಧನ ನೀತಿಯಲ್ಲಿ ಅಳವಡಿಸಿಕೊಳ್ಳಲು ಶ್ರಮಿಸುವುದಾಗಿ ಭರವಸೆ ನೀಡಿದರು.

ಇಂದಿನ ಕಾರ್ಯಕ್ರಮವು ಯಶಸ್ವಿಯಾಗಿ ಆಯೋಜನೆಯಾಗಿದೆ. ಇದೇ ಸಂದರ್ಭದಲ್ಲಿ ಶುಭ ಕೋರುವ ವಿಶ್ವವಿದ್ಯಾನಿಲಯಗಳ ಜೊತೆ ಜೈವಿಕ ಇಂಧನ ಕ್ಷೇತ್ರದಲ್ಲಿ ಕೈಜೋಡಿಸಲು ಶೀಘ್ರದಲ್ಲಿಯೇ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧತೆ ನಡೆದಿದ್ದು ಮುಂಬರುವ ದಿನಗಳಲ್ಲಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳು, ಕೃಷಿ ವಿಶ್ವವಿದ್ಯಾಲಯಗಳು, ತಾಂತ್ರಿಕ ಸಂಸ್ಥೆಗಳು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಿರತರಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳು ಪ್ರಧಾನ ಪಾತ್ರ ವಹಿಸಲಿದೆ. ಜೈವಿಕ ಇಂಧನ ಕ್ಷೇತ್ರದಲ್ಲಿ ಕೆಲವೇ ತಿಂಗಳಗಳಲ್ಲಿ ಮಹತ್ತರ ಬದಲಾವಣೆಯನ್ನು ತರಲು ಮುನ್ನುಡಿ ಬರೆದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಂಡಳಿಯ ಲೋಹಿತ್ ಬಿ.ಆರ್. ತಾಂತ್ರಿಕ ಅಧಿಕಾರಿಗಳು, ಯೋಜನಾ ಸಲಹೆಗಾರರಾದ ಡಾ. ದಯಾನಂದ ಜಿ ಎನ್, ಅಧ್ಯಕ್ಷರ ಸಲಹೆಗಾರರಾದ, ನಿಮೇನ್ ದೀಪ್ ಸಿಂಗ್, ತಾಂತ್ರಿಕ ಸಲಹೆಗಾರರಾದ ಪ್ರಸಾದ್, ರಾಜೀವ್, ಸುಜಯ್ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+