ದೆಹಲಿಯಂತೆ ಬೆಂಗಳೂರಿನಲ್ಲೂ ಅಮಾನವೀಯ ಘಟನೆ: ಸ್ಕೂಟರ್‌ಗೆ ಜೋತುಬಿದ್ದ ಚಾಲಕನ ಎಳೆದೊಯ್ದ ಸವಾರ
ದೆಹಲಿ ಅಂಜಲಿ ಸಿಂಗ್ ಪ್ರಕರಣದಂತೆ ಮತ್ತೊಂದು ಘಟನೆ ನಡೆದಿದ್ದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ. ಮಾಗಡಿ ರಸ್ತೆಯ ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಸ್ಕೂಟರ್‌ಗೆ ಜೋತುಬಿದ್ದ ವ್ಯಕ್ತಿಯೊಬ್ಬರನ್ನು ದ್ವಿಚಕ್ರ ವಾಹನ ಸವಾರ ರಸ್ತೆಯಲ್ಲೇ ಎಳೆದೊಯ್ದಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವ್ಯಕ್ತಿಯನ್ನು ಎಳೆದೊಯ್ದ ವಾಹನ ಸವಾರರನನ್ನು ವಶಕ್ಕೆ ಪಡೆದ ಗೋವಿಂದರಾಜನಗರ ಪೊಲೀಸರು ವಿಚಾರಣೆ ನಡೆಸಿದ್ದಾರೆ.
#Horrible incident in #Bengaluru:
— Rakesh Prakash (@rakeshprakash1) January 17, 2023
A scooterist rides on the wrong side, hits a car & tries to escape on Magadi Road. When car driver tries to stop him, the rogue rider drags him along.#Breaking@NammaBengaluroo @WFRising @BLRrocKS @namma_BTM @TOIBengaluru @NammaKarnataka_ pic.twitter.com/CmpnXcieEV
ಮಾಗಡಿ ರಸ್ತೆಯಲ್ಲಿ ರಾಂಗ್ ಸೈಡ್ ನಲ್ಲಿ ಸ್ಕೂಟರ್ ಸವಾರನೊಬ್ಬ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ. ಕಾರ್ ಡ್ರೈವರ್ ಅವನನ್ನು ತಡೆಯಲು ಪ್ರಯತ್ನಿಸಿದಾಗ, ರಾಕ್ಷಸ ಸವಾರ ಅವನನ್ನು ಎಳೆದುಕೊಂಡು ಹೋಗುತ್ತಾನೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ಅಂಜಲಿ ಸಿಂಗ್ ಸ್ಕೂಟಿಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಐವರಿರುವ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದು ಆಕೆ ದೇಹವನ್ನು ಕೆಲ ಕಿಲೋ ಮೀಟರ್‌ವರೆಗೂ ಎಳೆದೊಯ್ದಿತ್ತು. ಕಾರಿಗೆ ದೇಹ ಸಿಕ್ಕಿಕೊಂಡಿರುವುದನ್ನು ಗಮನಿಸಿಯೂ ಯುವಕರ ಗುಂಪು ಆಕೆಯ ದೇಹ ಕೆಳಗೆ ಬೀಳಿಸಲೂ ಅದೇ ಪ್ರದೇಶದಲ್ಲಿ ಹಲವಾರು ಬಾರಿ ಯ್ಯೂಟರ್ನ್ ತೆಗೆದುಕೊಂಡಿತ್ತು. ಪ್ರತ್ಯಕ್ಷದರ್ಶಿಯೊಬ್ಬರು ಕಾರನ್ನು ಹಿಂಬಾಲಿಸಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲು ಕರೆ ಮಾಡಿದ್ದಾರೆ. ಆದರೆ ಈ ವೇಳೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಲಾಗಿದೆ. ಇದರಿಂದ ವೃತ್ತಿಯಲ್ಲಿದ್ದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.

20 ವರ್ಷದ ಯುವತಿಯನ್ನು ಐವರು ಕುಡುಕರ ಕಾರು ಡಿಕ್ಕಿ ಹೊಡೆದು 13 ಕಿಮೀ ಎಳೆದೊಯ್ಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳಿಂದ ಬಂದ ಅನೇಕ ಕರೆಗಳನ್ನು ನಿರ್ಲಕ್ಷಿಸಿದ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಜೊತೆಗೆ ಸದ್ಯ ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.












Click it and Unblock the Notifications