Get Updates
Get notified of breaking news, exclusive insights, and must-see stories!

ಬಿಗ್ ಬಜಾರ್‌ ನಲ್ಲಿ ಐದು ದಿನಗಳ ರಿಯಾಯಿತಿ ಮಾರಾಟ

ಬೆಂಗಳೂರು, ಜನವರಿ 22: ಬಿಗ್ ಬಜಾರ್‌ ಸಂಸ್ಥೆ ತನ್ನ 12ನೇ ವರ್ಷಾಚರಣೆ ಅಂಗವಾಗಿ 5 ದಿನಗಳ ಉಳಿತಾಯ ಮೇಳವನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಜನವರಿ 24ರಿಂದ 28ರವರೆಗೆ ಈ ರಿಯಾಯಿತಿ ದರದಲ್ಲಿ ಮಾರಾಟ ಜಾರಿಯಲ್ಲಿರಲಿದೆ.

ಈ ಅವಧಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಾಮಗ್ರಿಗಳನ್ನು ಖರೀದಿಸಬಹುದು. ಎಲೆಕ್ಟ್ರಾನಿಕ್‌ ವಸ್ತುಗಳು, ಆಹಾರ ಪದಾರ್ಥಗಳು, ಬಟ್ಟೆ, ಮೊಬೈಲ್ ಸೇರಿದಂತೆ ಅನೇಕ ಸರಕುಗಳ ಮೇಲೆ ವಿಶೇಷ ರಿಯಾಯಿತಿ ಇದೆ.

Big Bazaar’s 12th ‘Sabse Saste 5 Din’ is back from Jan 24

ಇ-ವ್ಯಾಲೆಟ್ ಬಳಸಿ 2,500 ರು ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಖರೀದಿಸಿದರೆ 500 ರು, 5,000 ರು ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿದರೆ 1,000 ರು ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ ಎಂದು ಬಿಗ್ ಬಜಾರ್ ಸಂಸ್ಥೆ ಸಿಇಒ ಸದಾಶಿವ್ ನಾಯಕ್ ಹೇಳಿದ್ದಾರೆ.

ಫ್ಯೂಚರ್ ಗ್ರೂಪಿನ ಕಿಶೋರ್ ಬಿಯಾನಿ ಅವರು 2001 ರಲ್ಲಿ ಸ್ಥಾಪಿಸಿದ ಬಿಗ್ ಬಜಾರ್, ಭಾರತದ ಅತಿ ಹಳೆಯ ಮತ್ತು ಅತಿ ದೊಡ್ಡ ಹೈಪರ್ಮಾರ್ಕೆಟ್ಸ್ ಸರಪಳಿಯಾಗಿದೆ. ದೇಶದಾದ್ಯಂತ 120 ನಗರಗಳು ಮತ್ತು 250+ ಪಟ್ಟಣಗಳಲ್ಲಿ ಅಂಗಡಿಗಳನ್ನು ಹೊಂದಿದೆ.ಭಾರತೀಯ ಚಿಲ್ಲರೆ ವ್ಯಾಪಾರ ಮತ್ತು ಫ್ಯಾಷನ್ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಾಮುಖ್ಯತೆ ಪಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+