ಭಾರತ್ ಬಂದ್:ಎಂದಿನಂತೆ ಮೆಟ್ರೋ ಸಂಚಾರ
ಬೆಂಗಳೂರು, ಸೆಪ್ಟೆಂಬರ್ 10: ದೇಶಾದ್ಯಂತ ಭಾರತ್ ಬಂದ್ ಗೆ ಕರೆ ನೀಡಲಾಗಿದೆ, ಬೆಂಗಳೂರಲ್ಲಿ ಎಲ್ಲಾ ಸಾರಿಗೆಗಳು ಸಂಚಾರವನ್ನು ಸ್ಥಗಿತಗೊಂಡಿದೆ, ನಮ್ಮ ಮೆಟ್ರೋ ಎಂದಿನಂತೆ ಸಂಚರಿಸುತ್ತಿದೆ.
ತೈಲ ಬೆಲೆ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ ಇದೆರಡೂ ಕಾರಣಗಳಿಗಾಗಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ನಮ್ಮ ಮೆಟ್ರೋ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದಿನಂತೆ ಸಂಚರಿಸುತ್ತಿದೆ ಎಂದು ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯುಎ ವಸಂತರಾವ್ ಟ್ವೀಟ್ ಮಾಡಿದ್ದಾರೆ.
Trains are operating as per schedule No incidents reported from any stations as at 8-45 am. We will continue to operate as per schedule today unless advised otherwise by our security/Police
— Namma Metro CPRO (@uavasanthrao) September 10, 2018
ಬೆಂಗಳೂರಿನಲ್ಲಿ ಬೆಳಗ್ಗೆ 6ರಿಂದ ಪ್ರತಿಭಟನೆಗಳು ಆರಂಭವಾಗಿದೆ, ಅಂಗಡಿ ಮುಗ್ಗಟ್ಟುಗಳನ್ನು ಕಾರ್ಯಕರ್ತರು ಮುಚ್ಚಿಸುತ್ತಿದ್ದಾರೆ, ಸರ್ಕಾರಿ ಬಸ್‌ಗಳ ಸಂಚಾರ ಸಂಪೂರ್ಣ ನಿಂಯಿದೆ, ಜತೆಗೆ ಓಲಾ, ಊಬರ್ ಟ್ಯಾಕ್ಸಿಗಳು ಕೂಡ ಸಂಚರಿಸುತ್ತಿಲ್ಲ, ಆಟೋಗಳು ಸುಲಿಗೆಗೆ ನಿಂತಿವೆ ಅವರು ಕೇಳಿಷ್ಟು ಹಣವನ್ನು ನೀಡಿದರೆ ಮಾತ್ರ ಹೇಳಿದಲ್ಲಿಗೆ ಬರುತ್ತೇವೆ ಎಂದು ಮಾತಿಗೆ ಮಾತು ಬೆಳೆಸುತ್ತಿದ್ದಾರೆ. ಸಾಕಷ್ಟು ಕಚೇರಿಗಳಿಗೆ ರಜೆ ಘೋಷಿಸಿಲ್ಲ ಹೀಗಾಗಿ ಕಚೇರಿಗಳಿಗೆ ತೆರಳಲೇ ಬೇಕಾಗಿದೆ.

ಹೇಗಪ್ಪಾ ಹೋಗೋದು ಎಂದು ಬೇಸರ ಮಾಡಬೇಡಿ ನಮ್ಮ ಮೆಟ್ರೋ ಎಂದಿನಿಂತೆ ಬೆಳಗ್ಗೆ 5ರಿಂದಲೇ ಸಂಚಾರವನ್ನು ಆರಂಭಿಸಿದೆ. ಬೆಳಗ್ಗೆ 10ಗಂಟೆಯವರೆಗೂ ಯಾವುದೇ ತೊಂದರೆ ಉಂಟಾಗಿಲ್ಲ, ಪೊಲೀಸರ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ, ಒಂದೊಮ್ಮೆ ಅಹಿತಕರ ಘಟನೆಗಳು ನಡೆದಲ್ಲಿ ಪೊಲೀಸರ ಸಲಹೆ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications