ಬೆಂಗಳೂರಿನಲ್ಲಿ ಎಲ್ಲಿ ಪ್ರಾಪರ್ಟಿ ಖರೀದಿ ಮಾಡುವುದು ಬೆಸ್ಟ್ ? Bengaluru Property
Bengaluru Property ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಇದೀಗ ಬೆಂಗಳೂರು ನಗರ ಅಥವಾ ಬೆಂಗಳೂರು ಹೊರ ವಲಯದಲ್ಲಿ ಯಾವ ಭಾಗದಲ್ಲಿ ಭೂಮಿ ಖರೀದಿ ಮಾಡಬೇಕು ಮತ್ತು ಪ್ರಾಪರ್ಟಿ ಖರೀದಿ ಮಾಡಿದರೆ ಉತ್ತಮ ಎನ್ನುವ ವಿಚಾರ ಚರ್ಚೆ ಆಗುತ್ತಿದೆ. ಬೆಂಗಳೂರಿನ ದಂಪತಿಯೊಬ್ಬರು ನಗರದ ಹೊರವಲಯದಲ್ಲಿ ಅಪಾರ್ಟ್‌ಮೆಂಟ್ ಹುಡುಕುವ ಬಗ್ಗೆ ಸೋಷಿಯಲ್ ಮೀಡಿಯಾ ರೆಡ್ಡಿಟ್ ಪೋಸ್ಟ್ ಮಾಡಿದ್ದು. ಇದು ಭಾರೀ ಸ್ವಾರಸ್ಯಕರ ಚರ್ಚೆಗೆ ವೇದಿಕೆ ಕಲ್ಪಿಸಿದೆ.
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಿನದಿಂದಕ್ಕೆ ಬೂಸ್ಟ್ ಆಗುತ್ತಿದೆ. ಆದರೆ ಭೂಮಿ ಮತ್ತು ಪ್ರಾಪರ್ಟಿ ಬೆಲೆಯು ಏಕಾಏಕಿ ₹1.5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆ ತಲುಪಿರುವ ಹಿನ್ನೆಲೆಯಲ್ಲಿ ಜನ ಬೆಂಗಳೂರಿನಿಂದ ಹೊರ ಭಾಗದಲ್ಲಿ ಹಾಗೂ ಬೆಂಗಳೂರಿನ ಹೊರ ವಲಯದಲ್ಲಿ ಭೂಮಿ, ಪ್ರಾಪರ್ಟಿ ಹುಡುಕುವುದಕ್ಕೆ ಮತ್ತು ಖರೀದಿ ಮಾಡುವುದಕ್ಕೆ ಮುಂದಾಗಿದ್ದಾರೆ. ನಗರ ಕೇಂದ್ರ ಪ್ರದೇಶಗಳಲ್ಲಿನ ಹಳೆಯ ಮನೆಗಳು ಹೊಸ ಉಪನಗರ ಯೋಜನೆಗಳಿಗಿಂತ ಉತ್ತಮ ದೀರ್ಘಕಾಲೀನ ಮೌಲ್ಯವನ್ನು ನೀಡಲಿದೆಯೇ ಎಂದು ಜನ ಚರ್ಚೆ ಮಾಡುತ್ತಿದ್ದಾರೆ.

ನನ್ನ ಪತಿ (36) ಮತ್ತು ನಾನು (32) ಬೆಂಗಳೂರಿನ ಮಹದೇವಪುರದಲ್ಲಿ ವಾಸಿಸುತ್ತಿದ್ದೇವೆ ಮತ್ತು ಕೆಲಸ ಮಾಡುತ್ತೇವೆ. ಐಟಿ ವಲಯದಲ್ಲಿ ಅಲ್ಲ. ಕೈಯಲ್ಲಿ ತಿಂಗಳಿಗೆ ಒಟ್ಟು 5 ಲಕ್ಷ ಆದಾಯ ಮತ್ತು ಮಾಸಿಕ ವೆಚ್ಚಗಳು ಸರಿಸುಮಾರು 1.5 ಲಕ್ಷ. ನಾವು ಬೆಂಗಳೂರಿನ ಹೊರವಲಯದಲ್ಲಿರುವ ಒಂದು ಫ್ಲಾಟ್ ನಿರ್ಮಾಣ ಜಾಗಕ್ಕೆ ಭೇಟಿ ನೀಡಿದ್ದೇವೆ ಏಕೆಂದರೆ ಅದು ಹೊಸದು, ಕ್ಯಾಟ್ ಎ ಬಿಲ್ಡರ್ ಮತ್ತು ನಮ್ಮ ಬಜೆಟ್‌ನಲ್ಲಿ ಸ್ವಲ್ಪಮಟ್ಟಿಗೆ ಇದೆ ಎಂದು ಅನಿಸುತ್ತದೆ ಎಂದು ರೆಡಿಟರ್‌ನಲ್ಲಿ ದಂಪತಿ ಪೋಸ್ಟ್ ಮಾಡಿದ್ದಾರೆ.
ಮುಂದುವರಿದು ಈ ಭಾಗದಲ್ಲಿ ರಸ್ತೆಗಳು ತುಂಬಾ ಕೆಟ್ಟದಾಗಿವೆ. ಎಲ್ಲೆಡೆ ಗುಂಡಿಗಳಿವೆ, ರಸ್ತೆಗಳು, ಹೆದ್ದಾರಿ ಕೂಡ ಬದಿಗಳಲ್ಲಿ ಕಸದಿಂದ ತುಂಬಿದ್ದು, ದಾರಿಯಲ್ಲಿ ರೈಲ್ವೆ ಕ್ರಾಸಿಂಗ್ ಇತ್ತು. ಬೆಲೆಗೆ ತಕ್ಕ ಜಾಗವಾಗಿ ಏನು ಕಾಣಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.
ಮಹದೇವಪುರದಲ್ಲಿ ವಾಸಿಸುತ್ತಿರುವ ಈ ದಂಪತಿಯು ಈ ಭಾಗದಲ್ಲಿ ಹಾಗೂ ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿಯೊಂದು ಯೋಜನೆಯೂ ಕೈಗೆಟುಕುವಂತಿಲ್ಲ ಅಥವಾ ಕಳಪೆ ಸಂಪರ್ಕ ಹೊಂದಿದೆ ಎಂದಿದ್ದಾರೆ. ತಮ್ಮ ಮನೆಯಿಂದ ಸುಮಾರು 17 ಕಿಮೀ ದೂರದಲ್ಲಿರುವ ಹೊಸಕೋಟೆಯಲ್ಲಿ ಹೊಸ ಯೋಜನೆಗೆ ಭೇಟಿ ನೀಡಿದ್ದು, ಮೂಲಸೌಕರ್ಯ ಹಾಗೂ ತುಂಬಾ ದೂರ ಎಂದಿದ್ದಾರೆ.
ಪ್ರತಿ ಚದರ ಅಡಿಗೆ ಸುಮಾರು ₹10,000 ಬೆಲೆಯ 1,200 ಚದರ ಅಡಿಯಲ್ಲಿ 2029 ರಲ್ಲಿ ಸ್ವಾಧೀನದಲ್ಲಿ ಸುಮಾರು ₹1.5-1.6 ಕೋಟಿ ವೆಚ್ಚವಾಗುತ್ತದೆ ಎಂದು ಲೆಕ್ಕಹಾಕಲಾಗುತ್ತದೆ. ಮುಂದಿನ 20 ವರ್ಷಗಳ ಕಾಲ EMI ಗಳಲ್ಲಿ ₹2 ಕೋಟಿಗಿಂತ ಹೆಚ್ಚಿನ ಫ್ಲಾಟ್‌ಗಳನ್ನು ಖರೀದಿಸುವ ಬಗ್ಗೆ ಹೇಳಲಾಗಿದೆ.
ಬೆಂಗಳೂರಿನಲ್ಲಿ ಆಸ್ತಿ ಖರೀದಿ ಸುಲಭವಲ್ಲ
ಇನ್ನು ಬೆಂಗಳೂರಿನಲ್ಲಿ ಆಸ್ತಿ ಮತ್ತು ಪ್ರಾಪರ್ಟಿ ಖರೀದಿ ಮಾಡುವುದು ಸುಲಭವಲ್ಲ. ಅದರಲ್ಲೂ ನಮ್ಮ ಬಜೆಟ್‌ನಲ್ಲಿ ಮನೆ, ಪ್ರಾಪರ್ಟಿ ಹುಡುಕುವುದು ಸುಲಭವಲ್ಲ ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications