ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ಸಂಸ್ಥೆ ಅಂದ್ರೆ ನಮ್ಮ ಬೆಸ್ಕಾಂ!

ಒಂದೇ ಒಂದು ಹನಿ ಧರೆಗೆ ಮುತ್ತಿಕ್ಕುತ್ತಿದ್ದಂತೆಯೇ ಪವರ್ ಗೆ ಕತ್ತರಿ ಹಾಕುವ ಬೆಸ್ಕಾಂ ಅನ್ನು ಶಪಿಸಿಕೊಳ್ಳುವ ನೂರಾರು ಜನರ ನಡುವಲ್ಲೇ, ಆ ನೆಪದಲ್ಲಾದರೂ ಕ್ಯಾಂಡಲ್ ಲೈಟ್ ಡಿನ್ನರ್ ಭಾಗ್ಯ ದೊರಕುತ್ತಲ್ಲ ಎಂದು ಹಿರಿಹಿಗ್ಗುವ ಜನರೂ ಇದ್ದಾರೆ.

ಬೆಂಗಳೂರು, ಮೇ 24: ಸಂಜೆಯಾಗುತ್ತಲೇ ಕವಿಯುವ ಕಾರ್ಮೋಡ, ಸುಯ್ಯಂತ ಬೀಸೋ ಗಾಳಿ, ಮನೆಸೇರಿಕೊಂಡರೆ ಸಾಕು ಅನ್ನಿಸುವಂಥ ವಿಲಕ್ಷಣ ವಾತಾವರಣ... ಲಗುಬಗೆಯಿಂದ ಮನೆಗೆ ಓಡಿ, ಬಿಸಿ-ಬಿಸಿ ಬಜ್ಜಿ-ಬೋಂಡಾ ತಿಂತಾ, ಟೀವಿ ನೋಡೋಣಂತ ಕೂತ್ರೆ, ಹೊರಗೆ ಬೀಳೋಕೆ ಶುರು ಮಳೆ ಹನಿ! ಆಗಷ್ಟೇ ಒಂದು ಹನಿ ಬಿತ್ತು ನೋಡಿ, ಥಟ್ಟಂತ ಹೋಗುತ್ತೆ ಕರೆಂಟು!

ಪವರ್ ಬ್ಯಾಕ್ ಅಪ್ ಇಲ್ಲದವರ ಮನೆಯಲ್ಲಿ ಆವತ್ತು ಕ್ಯಾಂಡಲ್ ಲೈಟ್ ಡಿನ್ನರ್ ಗ್ಯಾರಂಟಿ! ಪ್ರತಿದಿನ ಡೈನಿಂಗ್ ಟೇಬಲ್ ಹತ್ತಿರವೂ ಸುಳಿಯದೆ, ಟೀವಿ ಮುಂದೆ ಸೋಫಾದಲ್ಲಿ ಕೂತೋ, ರೂಮಿನಲ್ಲಿ ಕಂಪ್ಯೂಟರ್ ಮುಂದೇ ಕೂತೋ ಊಟ ಮಾಡುವವರು ಆವತ್ತು ಹಳೇ ಗಂಡನ ಪಾದವೇ ಗತಿ ಅಂತ ಡೈನಿಂಗ್ ಟೇಬಲ್ಲಿಗೆ ಬರಲೇಬೇಕು, ಕ್ಯಾಂಡಲ್ ಲೈಟ್ ಡಿನ್ನರ್ ಮಾಡಲೇಬೇಕು![ಬೆಂಗಳೂರಿನಲ್ಲಿ ಮಳೆ: ಬಿಬಿಎಂಪಿ ಅಧಿಕಾರಿಗಳ ರಜೆಗೆ ಬಿತ್ತು ಕತ್ತರಿ!]

BESCOM the most romantic organisation in the world!

ಮುನಿಸುಕೊಂಡ ಪತಿ-ಪತ್ನಿಯರನ್ನು ಒಂದುಗೂಡಿಸುವ ಈ ಕ್ಯಾಂಡಲ್ ಲೈಟ್ ಡಿನ್ನರ್ ಭಾಗ್ಯ ಕಲ್ಪಿಸುವ ಬೆಸ್ಕಾಂ ಅನ್ನು ರೋಮ್ಯಾಂಟಿಕ್ ಸಂಸ್ಥೆ ಅನ್ನದೆ ಇರೋದಕ್ಕಾಗುತ್ತದೆಯೇ?! ವಿದ್ಯುತ್ ವ್ಯತ್ಯಯವೆಂಬ ಗಂಭೀರ ಸಮಸ್ಯೆಯ ನಡುವಲ್ಲೂ ಹಾಸ್ಯ ಪ್ರಜ್ಞೆ, ಸೌಂದರ್ಯ ಪ್ರಜ್ಞೆಯನ್ನು ಮೆರೆವ ಬೆಸ್ಕಾಂ ಗೆ ಹ್ಯಾಟ್ಸ್ ಆಫ್ ಹೇಳಲೇಬೇಕು!

ಮುಂಗಾರು ಆರಂಭವಾಗುತ್ತಿದ್ದಂತೆಯೇ ಉದ್ಯಾನ ನಗರಿಯಲ್ಲೂ ಶುರುವಾಗುತ್ತೆ ವಿದ್ಯುತ್ ಸಮಸ್ಯೆ. ಆದರೆ ದುಬಾರಿ ಹೊಟೇಲ್ ಗಳಲ್ಲಿ ಸಾವಿರಾರು ರೂಪಾಯಿ ತೆತ್ತು ಕ್ಯಾಂಡಲ್ ಲೈಟ್ ಡಿನ್ನರ್ ಗೆ ಹೋಗುವ ಕಷ್ಟ ಮಳೆಗಾಲದಲ್ಲಂತೂ ಬೆಂಗಳೂರಿಗರಿಗಿಲ್ಲ. ಯಾಕಂದ್ರೆ ಆ ಭಾಗ್ಯ ಮನೆಯಲ್ಲೇ ಸಿಕ್ಕುತ್ತೆ!

ಹಳ್ಳಿಗಳಂತೆ ವಾರಗಟ್ಟಲೆ ಪವರ್ ಇಲ್ಲದೆ ಪರಿತಪಿಸುವ ಸನ್ನಿವೇಶ ಇಲ್ಲಿ ಸೃಷ್ಟಿಯಾಗದಿದ್ದರೂ, ವಿದ್ಯುತ್ ತಂತಿಯ ಮೇಲೆ ಮರದ ಟೊಂಗೆ ಬಿದ್ದೋ, ಇನ್ನೇನೋ ಸಮಸ್ಯೆಯಾಗಿಯೋ ಪವರ್ ಇಲ್ಲವೆಂದರೆ ಮನೆಯ ಡೈನಿಂಗ್ ಟೇಬಲ್ ಮೇಲೆ ಉರಿವ ಮಿಣುಕು ಮೊಂಬತ್ತಿಯ ಬೆಳಕಲ್ಲೇ ನೂರಾರು ರೋಮ್ಯಾಂಟಿಕ್ ಸನ್ನಿವೇಶಗಳು ನಿರ್ಮಾಣವಾಗುತ್ತದೆ.

BESCOM the most romantic organisation in the world!

ಆಗಲೋ, ಈಗಲೋ ಮುಗಿದುಹೋಗುವಂತಿರುವ ಮೊಬೈಲ್ ನ ಬ್ಯಾಟರಿಯ ಕ್ಷೀಣಸ್ವರವೂ, 'ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ...' ಹಾಡನ್ನು ಗುನುಗುತ್ತಿರುತ್ತದೆ.[ಬೆಂಗಳೂರಲ್ಲಿ ಭಾರೀ ಗಾಳಿ ಸಹಿತ ಮಳೆ, ವಿದ್ಯುತ್ ವ್ಯತ್ಯಯ]

ಒಂದೇ ಒಂದು ಹನಿ ಧರೆಗೆ ಮುತ್ತಿಕ್ಕುತ್ತಿದ್ದಂತೆಯೇ ಪವರ್ ಗೆ ಕತ್ತರಿ ಹಾಕುವ ಬೆಸ್ಕಾಂ ಅನ್ನು ಶಪಿಸಿಕೊಳ್ಳುವ ನೂರಾರು ಜನರ ನಡುವಲ್ಲೇ, ಆ ನೆಪದಲ್ಲಾದರೂ ಕ್ಯಾಂಡಲ್ ಲೈಟ್ ಡಿನ್ನರ್ ಭಾಗ್ಯ ದೊರಕುತ್ತಲ್ಲ ಎಂದು ಹಿರಿಹಿಗ್ಗುವ ಜನರೂ ಇದ್ದಾರೆ. ಅಂಥವರೆಲ್ಲರ ಪಾಲಿಗೆ ನಮ್ಮ ಬೆಸ್ಕಾಂ ನಿಜಕ್ಕೂ ರೊಮ್ಯಾಂಟಿಕ್ ಸಂಸ್ಥೆಯೇ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+