Bengaluru Power Cut: ನಾಗರಿಕರೇ ಗಮನಿಸಿ ಅಕ್ಟೋಬರ್ 23ರವರೆಗೆ ಈ ಏರಿಯಾಗಳಲ್ಲಿ ವಿದ್ಯುತ್ ಕಡಿತ
ಬೆಂಗಳೂರು, ಅಕ್ಟೋಬರ್ 20: ಬೆಂಗಳೂರಿನಲ್ಲಿ ಮಳೆ ಸಮಸ್ಯೆಯಿಂದ ಮುಕ್ತಿ ಸಿಕ್ಕಿತೆನ್ನುವಷ್ಟರಲ್ಲಿ ದಿನೇ ದಿನೇ ವಿದ್ಯುತ್ ಕಡಿತದ ಸಮಸ್ಯೆ ಹೆಚ್ಚಾಗುತ್ತಿದೆ. ಶನಿವಾರವಷ್ಟೇ ಇಡೀ ದಿನ ವಿದ್ಯುತ್ ಇರಲಿಲ್ಲ. ಇದೀಗ ಇದೇ ಭಾನುವಾರದಿಂದ ಬುಧವಾರ (ಅಕ್ಟೋಬರ್ 23ರವರೆಗೆ) ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ನಿಯಮಿತ ( BESCOM-Power cut) ಮಾಹಿತಿನೀಡಿದೆ.
ಬೆಂಗಳೂರಿನಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 66/11ಕೆ.ವಿ ಟೆಲಿಕಾಂ ವಿದ್ಯುತ್ ಉಪ ಕೇಂದ್ರದಲ್ಲಿ , 11ಕೆ,ವಿ ಬ್ಯಾಂಕ್-2 ನ ಬ್ರೇಕರ್‌ಗಳನ್ನು ಬದಲಿಸುವ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂಬಂಧ ಇಂದಿನಿಂದ (ಅಕ್ಟೋಬರ್ 20 ರಿಂದ 23) ಬುಧವಾರವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.

ಒಟ್ಟು ನಾಲ್ಕು ದಿನಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಹಾಗಾದರೆ ನಗರದಲ್ಲಿ ವಿದ್ಯುತ್ ಕಡಿತಗೊಳ್ಳಲಿರುವ ನಿಮ್ಮ ಏರಿಯಾಗಳ ಮಾಹಿತಿ ಇಲ್ಲಿದೆ ನೋಡಿ.
ಬಿನ್ನಿ ಪೇಟ್, ಪಾದರಾಯನಪುರ, ಜೆ.ಜೆ.ಆರ್ ನಗರ, ಗೋಪಾಲನ್ ಮಾಲ್, ಓಬಳೇಶ್ ಕಾಲೋನಿ, ರೋಸ್ ಗಾರ್ಡನ್, ರಾಯಪುರ, ಮೈಸೂರು ರಸ್ತೆ 1ನೇ, 2ನೇ, 3ನೇ ಅಡ್ಡ ರಸ್ತೆಗಳು, ಮೋಮಿಂಪುರ, ಜನತಾ ಕಾಲೋನಿ, ಹೊಸಹಳ್ಳಿ ಮುಖ್ಯರಸ್ತೆ, , ಶಾಮಣ್ಣ ಗಾರ್ಡನ್, ರಫತ್ ನಗರ, ರಂಗನಾಥ್ ಕಾಲೋನಿ, ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಹೂವಿನ ಉದ್ಯಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಕಾಟನ್ ಪೆಟ್, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಗೋಪಾಲನ್ ವಸತಿ ಸಮುಚ್ಚಯ, ಭುವನೇಶ್ವರಿ ನಗರ, , ಹೊಸ ಪೊಲೀಸ್ ಕ್ವಾಟ್ರಸ್, ಎಸ್‌ಡಿ ಮಠ, ಸುಲ್ತಾನ್ ಪೇಟೆ, ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಪೊಲೀಸ್ ರಸ್ತೆ, ಮರಿಯಪ್ಪ ಎ. ಕೆಪಿಎಸ್ ಮಠ, ಗಂಗಪ್ಪ ಗಾರ್ಡನ್, ಪ್ರೆಸ್ಟೀಜ್ ವುಡ್ಸ್ ಅಪಾರ್ಟ್ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಲೋಡ್ ಶೆಡ್ಡಿಂಗ್ ಬಗ್ಗೆ ಕಾಂಗ್ರೆಸ್ ಶಾಸಕ ಕಿಡಿ
ರೈತರ ಪರವಾದ ಯೋಜನೆಗಳು ರಾಜ್ಯದಲ್ಲಿ ಬರುತ್ತಿಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಅವರು ಸ್ವಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಮಾತನಾಡಿದ್ದಾರೆ. ರೈತರು ಇದ್ದರೆ ದೇಶ, ಮೊದಲು ರೈತನ್ನು ಉಳಿಸುವ ಕೆಲಸ ಮಾಡಿ ಎಂದು ಆಕ್ರೋಶ ಹೊರ ಹಾಕಿದ್ದರು.
ಇದರ ಬೆನ್ನಲ್ಲೆ ಕಳೆದ ವಾರ ಲೋಡ್ ಶೆಡ್ಡಿಂಗ್ ಬಗ್ಗೆ ಮಾತನಾಡಿದ್ದರು. ಮುಂಗಾರು ಕೈಕೊಟ್ಟ ಬಳಿಕ ರಾಜ್ಯ ಸರ್ಕಾರ 236 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ. ಇದಾದ ಬಳಿಕ ಬಿತ್ತನೆ ಮಾಡಿರುವ ರೈತರಿಗೆ ನೀರು ಹಾಯಿಸಲು ಕರೆಂಟ್ ಸಿಗಲಿಲ್ಲ. ಲೋಡ್ ಶೆಡ್ಡಿಂಗ್ ಮಾಡಲಾಯಿತು. ಇದೀಗ ನಷ್ಟದಲ್ಲಿದ್ದಾರೆ. ಹಿಂಗಾರು ಮಳೆ ರೈತರು ತೊಂದರೆಗೀಡಾಗಿದ್ದಾರೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.
ರೈತರಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ತ್ರಿಫೇಸ್ ವಿದ್ಯುತ್ ಸೌಲಭ್ಯ ಕಲ್ಪಿಸಿ ಎಂದು ಅವರು ರೈತರ ಪರ ಧ್ವನಿ ಎತ್ತಿದ್ದಾರೆ..












Click it and Unblock the Notifications