BESCOM: ಇಂದಿನಿಂದ ಮುಂದಿನ 3 ದಿನಗಳ ಕಾಲ ಬೆಸ್ಕಾಂ ಆನ್‌ಲೈನ್ ಸೇವೆ ಸ್ಥಗಿತ-ಕಾರಣ ಏನು?
BESCOM: ವಿದ್ಯುತ್‌ಗೆ ಸಂಬಂಧಿತ ಕಾಮಗಾರಿ ನಡೆಯುವಂತಹ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯನ್ನು ಸ್ಥಗಿಸಗೊಳಿಸಲಾಗುತ್ತಿತ್ತು. ಇದೀಗ ಇಂದಿನಿಂದ ಅಂದರೆ ಅಕ್ಟೋಬರ್ 4ರಿಂದ ಮೂರು ದಿನಗಳ ಕಾಲ ಬೆಸ್ಕಾಂ ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಉನ್ನತೀಕರಿಸುವ ಹಿನ್ನೆಲೆ ಅಕ್ಟೋಬರ್ 4ರಿಂದ ಮೂರು ದಿನಗಳವರೆಗೆ ತನ್ನ ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ. ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 7ರ ಬೆಳಗ್ಗೆ 6ರವರೆಗೆ ಗ್ರಾಹಕ ಪೋರ್ಟಲ್ ಪ್ರವೇಶಿಸಲಾಗುವುದಿಲ್ಲ. ಆನ್‌ಲೈನ್ ಬಿಲ್ ಪಾವತಿಗಳನ್ನು ಅಕ್ಟೋಬರ್ 4ರಂದು ರಾತ್ರಿ 9ರಿಂದ ಅಕ್ಟೋಬರ್ 5 ರಂದು ಬೆಳಗ್ಗೆ 11ರವರೆಗೆ ನಿಷ್ಕ್ರಿಯಗೊಳಿಸಲಾಗುತ್ತದೆ.

ಈ ನಿಗದಿತ ಅಲಭ್ಯತೆಯು IPDS IT ಹಂತ-2 ಯೋಜನೆಯ ಪ್ರಮುಖ ಅಂಶವಾಗಿರುವ RAPDRP IT ಅಪ್ಲಿಕೇಶನ್‌ಗಳಿಗೆ ಅಪ್‌ಗ್ರೇಡ್ ಭಾಗ ಆಗಿದೆ. ಇದು ಐಟಿ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಬೆಸ್ಕಾಂನ ಕಾರ್ಯಾಚರಣಾ ಪ್ರದೇಶಗಳಲ್ಲಿ ಸೇವೆಯ ವಿತರಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಈ ವ್ಯವಸ್ಥೆಯ ಉನ್ನತೀಕರಣದಿಂದ ಹೊಸ ಸಂಪರ್ಕ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆ, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ RAPDRP ಅಪ್ಲಿಕೇಶನ್ ಲಭ್ಯವಿರುವುದಿಲ್ಲ.
ಜೊತೆಗೆ ಬೆಸ್ಕಾಂ ಕ್ಯಾಶ್ ಕೌಂಟರ್ ಪಾವತಿ, ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿ ಇನ್ನಿತರ ಸೇವೆಗಳಿಗಾಗಿ ಗ್ರಾಹಕ ಪೋರ್ಟಲ್ ಕಾರ್ಯನಿರ್ವಹಿಸುವುದಿಲ್ಲ. RAPDRP ಸೇವೆ ಇಲ್ಲದ ಹಿನ್ನೆಲೆ ಮೊಬೈಲ್ ಅಪ್ಲಿಕೇಷನ್ ಕೂಡ ಸ್ಥಗಿತಗೊಳ್ಳಲಿದೆ. ಇನ್ನು ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಿ ಅಥವಾ ಬೆಸ್ಕಾಂ ವೆಬ್‌ಸೈಟ್‌ಗೆ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: 66/11ಕೆ.ವಿ ಕಂಠೀರವ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುವ ಹಿನ್ನೆಲೆ ಸೆಪ್ಟೆಂಬರ್ 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಇಲ್ಲಿದೆ ನೀಡಲಾದ ಸ್ಥಳಗಳಲ್ಲಿ ವಿದ್ಯುತ್ ಆಗಲಿದ ಎಂದು ತಿಳಿಸಿತ್ತು.
ಕಬ್ಬನ್‌ಪೇಟೆ 5ನೇ ಕ್ರಾಸ್, 6ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, ಚೌಲಗಲ್ಲಿ, ಎ.ಬಿ.ಸಿ.ಡಿ. ಗಲ್ಲಿ, ಆರ್.ಬಿ.ಐ., ನೃಪತುಂಗ ರಸ್ತೆ, ಯು.ವಿ.ಸಿ.ಇ. ಅಗ್ರಿಕಲ್ಚರ್ ಆಫೀಸ್, ಸರ್ಕಾರಿ ಕಲಾ ಕಾಲೇಜು, ಮಾರ್ಥಾಸ್ ಹಾಸ್ಪಿಟಲ್, ಸುಂಕಲ್‌ಪೇಟೆ, ನಗರತ್ ಪೇಟೆ ಮುಖ್ಯರಸ್ತೆ, ಕೆ.ಎ.ಎಸ್. ಲೇನ್, 'ಸಿ' ಲೇನ್, 'ಎ'ಲೇನ್, 'ಡಿ' ಲೇನ್, ಪಿ.ಆರ್.ಎಸ್.ಲೇನ್, 13ನೇ ಕ್ರಾಸ್, 14ನೇ, 15ನೇ ಕ್ರಾಸ್ ಕಬ್ಬನ್‌ಪೇಟೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದ ಎಂದು ತಿಳಿಸಿತ್ತು.
ಕೆ.ಜಿ.ರಸ್ತೆ ಭಾಗ, ಓಟಿಸಿ ರಸ್ತೆ, ಶಾರದಾ ಥಿಯೇಟರ್ ಹಿಂಭಾಗ, ಎಸ್.ಪಿ ರಸ್ತೆ, ಎಸ್.ಜೆ.ಪಿ ರಸ್ತೆ, ಧರ್ಮರಾಯಸ್ವಾಮಿ ದೇವಸ್ಥಾನದ ರಸ್ತೆ, ಆದರ್ಶ ಶಾಂಗ್ರಿಲ್ಲ ಮತ್ತು ಯು.ಬಿ ಸಿಟಿ ಮತ್ತು ವಿಟ್ಟಲ್ ಮಲ್ಯ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಲ್ಲಿ ವಿದ್ಯುತ್ ವ್ಯತ್ಯಯ ಆಗಲಿದ ಎಂದು ತಿಳಿಸಿತ್ತು.
ಮಧ್ಯಾಹ್ನ 3:30ರ ವರೆಗೆ ವಿದ್ಯುತ್ ವ್ಯತ್ಯಯ: 220/66/11ಕೆವಿ ಎಸ್‌ಆರ್‌ಎಸ್ ಪೀಣ್ಯ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಪೀಣ್ಯ ವಿಭಾಗದ ಎನ್4, ಎನ್5. ಎನ್7 ಉಪ ವಿಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 9:30 ರಿಂದ ಮಧ್ಯಾಹ್ನ 3:30ರ ವರೆಗೆವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಪೀಣ್ಯ 10ನೇ ಮುಖ್ಯರಸ್ತೆ, 11ನೇ ಮುಖ್ಯರಸ್ತೆ, ಉಡುಪಿ ಹೋಟೆಲ್ ಸುತ್ತಮುತ್ತ, ಐಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮೀದೇವಿ ನಗರ.
ಲಗ್ಗೆರೆ ಹಳೆ ಗ್ರಾಮ, ಲವ ಕುಶಾ ನಗರ, ರಾಗೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ, 7ನೇ, 8ನೇ, 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿವಿಎಸ್ ಕ್ರಾಸ್ ರಸ್ತೆ ಬಳಿ, ಇಸ್ರೋ 1ನೇ, 2ನೇ ಕ್ರಾಸ್, 1ನೇ ಹಂತದ ಪಿಐಎ ಏರಿಯಾ ಮತ್ತು ಯಶವಂತಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದ ಎಂದು ತಿಳಿಸಿತ್ತು.
ಮಲ್ಲೇಶ್ವರ, ಎಂಡಿ ಬ್ಲಾಕ್, ವೈಯಾಲಿಕಾವಲ್, ಈಜುಕೊಳ ವಿಸ್ತರಣೆ, ಕೋದಂಡರಾಮಪುರ, ರಂಗನಾಥಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತಪುರ ಪೈಪ್‌ಲೈನ್ ರಸ್ತೆ, ಎಲ್‌ಎನ್ ಕಾಲೋನಿ, ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಕೆಎನ್ ವಿಸ್ತರಣೆ, ಯಶವಂತಪುರ 1ನೇ ಮುಖ್ಯರಸ್ತೆಯಲ್ಲಿ ಕರೆಂಟ್ ಇರುವುದಿಲ್ಲ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಬೆ.ವಿ.ಕಂ. ಸಹಾಯವಾಣಿ ಸಂಖ್ಯೆ 1912ಕ್ಕೆ ಸಂಪರ್ಕಸಬಹುದಾಗಿದೆ ಎಂದು ತಿಳಿಸಿತ್ತು.












Click it and Unblock the Notifications