BESCOM: ಬೆಸ್ಕಾಂನಿಂದ ಗ್ರಾಹಕರಿಗೆ ಮಹತ್ವದ ಮಾಹಿತಿ
ಬೆಂಗಳೂರು, ಫೆಬ್ರವರಿ, 09: ಗ್ರಾಹಕರೇ ದಯಮಾಡಿ ವಿದ್ಯುತ್ ಬಿಲ್ ಪಾವತಿಗಾಗಿ ಯಾವುದೇ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಬೇಡಿ. ವಿದ್ಯುತ್ ಬಿಲ್ ಪಾವತಿಯನ್ನು ನಮ್ಮ ಅಧಿಕೃತ ವೆಬ್ ಸೈಟ್ ಅಥವಾ ಬೆಸ್ಕಾಂ ಮಿತ್ರ ಆ್ಯಪ್ ಮೂಲಕವೇ ಪಾವತಿಸಿ ಎಂದು ಬೆಸ್ಕಾಂ ಮಹತ್ವದ ಮಾಹಿತಿಯನ್ನು ನೀಡಿದೆ.
ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಪ್ರಮುಖ ಯೋಜನೆಗಲ್ಲಿ ಗೃಹಜ್ಯೋತಿ ಯೋಜನೆಯೂ ಕೂಡ ಒಂದಾಗಿದೆ. ಈ ಯೋಜನೆಯಡಿ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಇನ್ನು 200 ಯೂನಿಟ್‌ಗಳಿಗಿಂತ ಹೆಚ್ಚು ಬಳಸಿದರೆ, ಹೆಚ್ಚಿಗೆ ಬಳಕೆಯಾದ ಬಿಲ್ ಅನ್ನು ಮಾತ್ರ ಪಾವತಿಸಬೇಕೆ ಎಂದು ಸರ್ಕಾರ ತಿಳಿಸಿದೆ. ಹಾಗೆಯೇ ಗ್ರಾಹಕರು ವಿದ್ಯುತ್ ಬಿಲ್ ಪಾವತಿಗಾಗಿ ಬೇರೆ ಸಾಫ್ಟ್‌ವೇರ್ ಬಳಸಬೇಡಿ. ಅಧಿಕೃತ ವೆಬ್ ಸೈಟ್ ಅಥವಾ ಬೆಸ್ಕಾಂ ಮಿತ್ರ ಆ್ಯಪ್ ಮೂಲಕವೇ ಪಾವತಿಸಿ ಎಂದು ಬೆಸ್ಕಾಂ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಸಾಫ್ಟ್‌ವೇರ್‌ಗಳ ಮೂಲಕವೇ ಸಾಮಾನ್ಯ ಜನರ ಹಣವನ್ನು ಲಪಾಟಾಯಿಸಿರುವ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ತನ್ನ ಅಧಿಕೃತ ಟ್ವೀಟ್ ಮೂಲಕ ಬೆಸ್ಕಾಂ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.
ವಿದ್ಯುತ್ ಬಿಲ್ ಪಾವತಿಯನ್ನು ನಮ್ಮ ಅಧಿಕೃತ ವೆಬ್'ಸೈಟ್ ಅಥವಾ ಬೆಸ್ಕಾಂ ಮಿತ್ರ ಆ್ಯಪ್ ಮೂಲಕವೇ ಪಾವತಿಸಿ!
— Namma BESCOM | ನಮ್ಮ ಬೆಸ್ಕಾಂ (@NammaBESCOM) February 9, 2024
ನಮ್ಮ ಅಧಿಕೃತ ವೆಬ್'ಸೈಟ್ - https://t.co/bLa842Fg8y
ಬೆಸ್ಕಾಂ ಮಿತ್ರ ಆ್ಯಪ್ - https://t.co/tTKIkRH4bd
ORhttps://t.co/alSA1KmwfB#Electricity #Karnataka #KarnatakaNews #Energy #Power #safety… pic.twitter.com/uNFZ05cyqh
ಡಿ ಲಿಂಕ್ ಆಯ್ಕೆ: ರಾಜ್ಯ ಸರಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಬಾಡಿಗೆ ಮನೆಯಲ್ಲಿರುವ ಯೋಜನೆ ಫಲಾನುಭವಿಗಳಿಗೆ ಡಿ ಲಿಂಕ್ ಆಯ್ಕೆ ನೀಡಲಾಗಿದೆ.
ಗೃಹ ಜ್ಯೋತಿ ಯೋಜನೆ ಫಲಾನುಭವಿಗಳು ಇನ್ನು ಮುಂದೆ ಬಾಡಿಗೆ ಮನೆ ಬದಲಾವಣೆ ಮಾಡಿದರೆ ಚಿಂತಿಸಬೇಕಿಲ್ಲ. ಮನೆ ಬದಲಾಯಿಸಿದವರು ಕೂಡಲೇ ಹಳೆ ಮನೆಯ ವಿಳಾಸದ ವಿದ್ಯುತ್ ಸಂಪರ್ಕವನ್ನು ರದ್ದುಪಡಿಸಿ, ಹೊಸ ಮನೆಯ ವಿಳಾಸಕ್ಕೆ ಯೋಜನೆಯ ಫಲ ಪಡೆಯಬಹುದು. ಇದಕ್ಕಾಗಿ ಇಂಧನ ಇಲಾಖೆಯು ಡಿ ಲಿಂಕ್ ಆಯ್ಕೆ ನೀಡಿದೆ.
ಗೃಹ ಜ್ಯೋತಿ ಯೋಜನೆ ಜಾರಿ ನಂತರ ಕೆಲ ಸಮಸ್ಯೆಗಳು ಎದುರಾಗಿದ್ದವು. ಬಾಡಿಗೆ ಮನೆಯಲ್ಲಿದ್ದವರು ಹಲವು ಕಾರಣಕ್ಕೆ ಮನೆ ಬದಲಾಯಿಸಿದ ಸಂದರ್ಭದಲ್ಲಿಹೊಸ ಮನೆಯ ಆರ್‌ಆರ್ ಸಂಖ್ಯೆಗೆ ತಮ್ಮ ಆಧಾರ್ ಜೋಡಣೆ ಮಾಡಿ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ.
ಜೊತೆಗೆ ಈ ಹಿಂದೆ ಇದ್ದ ಮನೆಯ ವಿದ್ಯುತ್ ಸಂಪರ್ಕಕ್ಕೆ ಜೋಡಣೆಯಾಗಿದ್ದ ಆಧಾರ್ ಸಂಖ್ಯೆಯನ್ನು ರದ್ದುಪಡಿಸಲು ಆಗುತ್ತಿರಲಿಲ್ಲ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿಹೊಸ ಬಾಡಿಗೆ ಮನೆಯ ಆರ್‌ಆರ್ ಸಂಖ್ಯೆಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದ್ದು, ಸೇವಾ ಸಿಂಧು ಪೋರ್ಟಲ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications