25 ಲಕ್ಷದ ಆಸೆಗೆ 49 ಸಾವಿರ ಕಳೆದುಕೊಂಡ ಬೆಂಗಳೂರು ಮಹಿಳೆ!
ಬೆಂಗಳೂರು, ಆಗಸ್ಟ್ 31: 25 ಲಕ್ಷ ರೂ. ಬಹುಮಾನ ಗೆದ್ದಿದ್ದೀರಿ ಎಂದು ಬೆಂಗಳೂರಿನ ಮಹಿಳೆಗೆ 49 ಸಾವಿರ ರೂ. ವಂಚನೆ ಮಾಡಿದ ಘಟನೆ ನಡೆದಿದೆ. ಸೈಬರ್ ಕ್ರೈಂ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ವಸಂತ ನಗರದ ಮಹಿಳೆಗೆ ಕೆಲವು ತಿಂಗಳಿನಿಂದ ಐಫೋನ್ ಬಳಕೆ ಮಾಡುತ್ತಿದ್ದರು. ಆಗಸ್ಟ್ 25ರಂದು ಅವರ ಫೋನ್‌ಗೆ ಬೇರೆ ಬೇರೆ ನಂಬರ್‌ಗಳಿಂದ ಕರೆಗಳು ಬಂದಿವೆ. ನೀವು 25 ಲಕ್ಷ ರೂ. ಬಹುಮಾನ ಬಂದಿದೆ ಎಂದು ಹೇಳಿದ್ದರು.
ಬಹುಮಾನದ ಮೊತ್ತ ಸಿಗಬೇಕಾದರೆ ಅರ್ಜಿ ಭರ್ತಿ ಮಾಡಿ ಕಳಿಸಿ, 49 ಸಾವಿರ ರೂ. ಜಮೆ ಮಾಡಿ ಎಂದು ಹೇಳಿದ್ದರು. ಮಹಿಳೆ ಹಣವನ್ನು ಜಮೆ ಮಾಡಿದ್ದರು. ಆದರೆ, 25 ಲಕ್ಷ ರೂ. ಅವರ ಖಾತೆಗೆ ಬಂದಿಲ್ಲ.

ಮರುದಿನ ಪುನಃ ಕರೆ ಮಾಡಿದವರು ನಿಮ್ಮ ಫೋನ್ ಹ್ಯಾಕ್ ಮಾಡಲಾಗಿದೆ. ಹೆಚ್ಚು ಹಣ ನೀಡಬೇಕು, ಇಲ್ಲವಾದಲ್ಲಿ ಖಾಸಗಿ ಫೋಟೋಗಳನ್ನು ಅಶ್ಲೀಲ ಜಾಲತಾಣಕ್ಕೆ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಘಟನೆಯನ್ನು ಮಹಿಳೆ ಪತಿಗೆ ವಿವರಿಸಿದ್ದಾರೆ. ಬಳಿಕ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ದಂಪತಿಗಳು ತೀರ್ಮಾನಿಸಿದ್ದಾರೆ. ವಂಚನೆ, ಬೆದರಿಕೆ ಬಗ್ಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.












Click it and Unblock the Notifications