'ನಿಜವಾದ ಪ್ರೀತಿ'- ಹಣೆ ಮೇಲೆ ಗಂಡನ ಹೆಸರು ಹಚ್ಚೆ ಹಾಕಿಸಿಕೊಂಡ ಹೆಂಡತಿ
ಬೆಂಗಳೂರು ಮೇ 23: ಅಂತರ್ಜಾಲದಲ್ಲಿ ಯುವ ಜೋಡಿಯ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ರಿಲೀಸ್ ಆದ ನಂತರ 2 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಕಾರಣ ಏನು ಗೊತ್ತಾ?
ಸಾಮಾನ್ಯವಾಗಿ ಅಧಿಕ ಪ್ರೀತಿ ತೋರಿಸುವ ಮೂಲಕ ಯಾರನ್ನ ಬೇಕಾದರೂ ಗೆಲ್ಲಬಹುದು ಅಥವಾ ಸೋಲಿಸಬಹುದು. ಹಲವಾರು ದಂಪತಿಗಳು ತಪ್ಪು ತಿಳುವಳಿಕೆಗಳಿಂದಾಗಿ ವಿಚ್ಛೇದನ ಪಡೆಯುವ ಈ ದಿನಮಾನಗಳಲ್ಲಿ ಕೆಲವು ದಂಪತಿಗಳು ತಮ್ಮ ಪ್ರೀತಿಯನ್ನು ಅಚ್ಚರಿ ಹುಟ್ಟಿಸುವಂತೆ ತೋರಿಸುತ್ತಾರೆ.

ಹೌದು... ಇಲ್ಲೊಬ್ಬ ಪತ್ನಿ ತನ್ನ ಪತಿಯ ಮೇಲಿನ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಲು ತೆಗೆದುಕೊಂಡ ನಿರ್ಧಾರ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದೆ. ಈ ಘಟನೆ ವಿಡಿಯೋ ನೋಡುಗರ ಗಮನ ಸೆಳೆದಿದೆ.
ಈ ಮಹಿಳೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಈಕೆಗೆ ಗಂಡನ ಮೇಲೆ ಅಪಾರ ಪ್ರೀತಿ. ಈಕೆಯ ಗಂಡನ ಹೆಸರು ಸತೀಶ್. ಈಕೆ ಗಂಡನ ಹೆಸರನ್ನು ಹಣೆ ಮೇಲೆ ಹಚ್ಚೆ ಹಾಕಿಸಿಕೊಂಡು ಗಮನ ಸೆಳೆದಿದ್ದಾಳೆ. ಇದರಿಂದ ಖುಷಿಯಾಗುತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾಳ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಟ್ಯಾಟೂ ಕಲಾವಿದ: ಬೆಂಗಳೂರು ಜೆಪಿ ನಗರ ಮೂಲದ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿ "ಟ್ರೂ ಲವ್" ಎಂದು ಬರೆದಿದ್ದಾನೆ.

ಪತಿಯನ್ನು ಮೆಚ್ಚಿಸಲು ಈ ಮಹಿಳೆ ಹಲವು ಉಪಾಯಗಳನ್ನು ಮಾಡಿದಳು. ಕೊನೆಗೆ ವಿಚಿತ್ರ ನಿರ್ಧಾರ ಕೈಗೊಂಡಿದ್ದಾಳೆ. ಹಣೆಯ ಮೇಲೆ ಸತೀಶ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಟ್ಯಾಟೂ ಕಲಾವಿದ ಮಹಿಳೆಯ ಹಣೆಯ ಮೇಲೆ ಟ್ಯಾಟೂ ಹಾಕಿದ್ದಾನೆ.
ಟ್ಯಾಟೂ ಶಾಪ್‌ಗೆ ಹೋದ ಮಹಿಳೆ ತನ್ನ ಪತಿಯ ಹೆಸರು (ಸತೀಶ್) ಅನ್ನು ಕಾರ್ಬನ್ ಪೇಪರ್ ನಲ್ಲಿ ಬರೆದು ಇದನ್ನೇ ಹಣೆ ಮೇಲೆ ಹಾಕಲು ತಿಳಿಸಿದ್ದಾಳೆ. ಟ್ಯಾಟೂ ಕಲಾವಿದ ಮಹಿಳೆಯ ಹಣೆಯ ಮೇಲೆ ಸರಿ ಹೊಂದುವಂತೆ ಅಕ್ಷರಗಳನ್ನು ಬರೆದು ಕಾರ್ಬನ್ ಪೇಪರ್ ಬಳಸಿ ಹೆಸರು ಮುದ್ರಿಸಿದ್ದಾನೆ.
ಇದನ್ನೆಲ್ಲಾ ನೋಡಿ ಮಹಿಳೆ ಖುಷಿಯಲ್ಲಿ ತೇಲಾಡಿದ್ದಾಳೆ. ಟ್ಯಾಟೂ ಆರ್ಟಿಸ್ಟ್ ಹಣೆಗೆ ಸೂಜಿಯಿಂದ ಚುಚ್ಚುವಾಗ ಸ್ವಲ್ಪ ನೋವಾಗಿದೆ ಎಂದುಕೊಂಡಿದ್ದಾಳೆ. ಮೊದಲ ಬಾರಿಗೆ ಟಾಟ್ಯೂ ಹಾಕಿಸಿಕೊಳ್ಳುತ್ತಿದ್ದ ಮಹಿಳೆಗೆ ಗಂಡ ಹೆಸರೇ ಧೈರ್ಯ ನೀಡಿದೆ. ಗಂಡನ ಹೆಸರನ್ನು ಹಣೆ ಮೇಲೆ ಹಚ್ಚೆ ಹಾಕಿಸಿಕೊಳ್ಳುವಾಗ ತಮಗೆ ಅಷ್ಟಾಗಿ ನೋವಾಗಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಈ ವಿಡಿಯೋ ನೋಡಿದ ಹಲವರು ಅಭಿನಂದಿಸುತ್ತಿದ್ದಾರೆ.
ನೆಟ್ಟಿಗರು ಒಬ್ಬರು , 'ಇದು ನಿಜವಾದ ಪ್ರೀತಿ' ಎಂದು ಬರೆದಿದ್ದಾರೆ.
ಮತ್ತೊಬ್ಬರು, 'ಪ್ರೀತಿ ಇರುವ ಕಡೆ ನೋವು ಕಾಣುವುದಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮೂರನೇ ವ್ಯಕ್ತಿ, 'ನನಗಿದು ತುಂಬಾ ಇಷ್ಟವಾಗಿದೆ' ಎಂದಿದ್ದಾರೆ.
ಆದರೆ ಕೆಲವರು ಇದರ ವಿರುದ್ಧ ಕಮೆಂಟ್ ಹಾಕುತ್ತಿದ್ದಾರೆ. "ಇದು ತುಂಬಾ ಹೆಚ್ಚು.. ನಿಮ್ಮ ಸಂಗಾತಿಯನ್ನು ನೀವು ಎಷ್ಟು ಅರ್ಥಮಾಡಿಕೊಂಡಿದ್ದೀರಿ ಎಂದು ತೋರಿಸಲು ಟ್ಯಾಟೂ ಹಾಕುವುದು ಸರಿಯಲ್ಲ. ಪ್ರೀತಿ ಜೊತೆಗೆ ಇದು ಆಶ್ಚರ್ಯವೇನಿಲ್ಲ.. ಆ ದಿನಗಳಲ್ಲಿ ನಮ್ಮ ಅಜ್ಜ ಅಜ್ಜಿಯರು ತಮ್ಮ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ'' ಎಂದು ಬರೆದಿದ್ದಾರೆ.












Click it and Unblock the Notifications