Bengaluru Weather: ಈ ವಾರಾಂತ್ಯಕ್ಕೆ ಭಾರೀ ಮಳೆ ನೋಡಲು ಸಜ್ಜಾಗಿ, ಏ. 25, 26ರ ಮುನ್ಸೂಚನೆ

ಬೆಂಗಳೂರು, ಏಪ್ರಿಲ್ 21: ರಾಜಧಾನಿ ಬೆಂಗಳೂರಿನಲ್ಲಿ ಈ ವಾರಾಂತ್ಯಕ್ಕೆ ಭರ್ಜರಿ ಮಳೆ ಸುರಿಯುವ ಮುನ್ಸೂಚನೆಯಲ್ಲಿ ರಾಜ್ಯ ಹವಾಮಾನ ಇಲಾಖೆ ನೀಡಿದೆ. ಇಂದಿನಿಂದ ಸ್ವಚ್ಚ ಆಕಾಶವಿರಲಿದೆ. ಬಿಸಿಲಿನ ತಾಪ ಮಧ್ಯಾಹ್ನವರೆಗೆ ಹೆಚ್ಚಾಗಿರಲಿದೆ. ನಂತರ ಸಂಜೆಗೆ ಮಬ್ಬು ಕವಿದು, ಕೆಲವೆಡೆ ಸೋನೆ ಮಳೆ ಬರಬಹುದು. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.

ಮುಂದಿನ ಒಂದು ವಾರದ ಬೆಂಗಳೂರು ಹವಾಮಾನ ವರದಿ ನೋಡುವುದಾದರೆ, ಇಂದಿನಿಂದ ಮುಂದಿನ ಏಪ್ರಿಲ್ 24ರವರೆಗೆ ಸಾಮಾನ್ಯ ವಾತಾವರಣ ಕಂಡು ಬರಲಿದೆ. ಅಲ್ಲಲ್ಲಿ ಹಗುರ, ತುಂತುರು ಮಳೆ ಆಗಬಹುದು ಉಳಿದಂತೆ ಭಾರೀ ಮಳೆ ಆಗುವ ಸಾಧ್ಯತೆ ಕಡಿಮೆ ಇದೆ. ಕಳೆದ ಮೂರು ನಾಲ್ಕು ದಿನಗಳು ಮಳೆ ಆದರೂ ಸಹಿತ ನಗರದಲ್ಲಿ ಮತ್ತೆ ಇಂದಿನಿಂದ ತೀವ್ರ ಬಿಸಿಲು, ಒಣ ಹವೆ ಅನುಭವ ಆಗುತ್ತದೆ.

Bengaluru Weather Forecast Light Rain Warns in City Heavy Rainfall Warns on April 24 and 25

ನಗರದಲ್ಲಿ ಬೆಳಗ್ಗೆ 6.05 ಸೂರ್ಯೋದಯವಾಗುತ್ತದೆ. ಸಂಜೆ 06.30ಕ್ಕೆ ಸೂರ್ಯಾಸ್ತವಾಗುತ್ತದೆ. ಈ ಮಧ್ಯೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬೇಸಿಗೆ ಅನುಭವವಾಗುತ್ತಿದೆ. ನಂತರ ಮಳೆಗಾಳದಂತೆ ಭಾಸವಾಗುತ್ತಿದೆ.

ಎರಡು ದಿನ ಭರ್ಜರಿ ಮಳೆ ಸಂಭವ..

ಏಪ್ರಿಲ್ 24 ಹಾಗೂ 25ರಂದು ಎರಡು ದಿನ ಮಾತ್ರ ನಗರದಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರಿಸಲಿದೆ. ಈ ಎರಡು ದಿನ ಗುಡುಗು ಮಿಂಚು ಸಹಿತ ಜೋರು ಮಳೆ ಅಬ್ಬರಿಸಲಿದೆ. ಬುಧವಾರ ಮತ್ತು ಗುರುವಾರ ಸುರಿಯುವ ಮಳೆ ವಾರಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇದೆ. ವಾತಾವರಣದಲ್ಲಿನ ಬದಲಾವಣೆ ಕಾರಣದಿಂದಾಗಿ ಬೆಂಗಳೂರಿನಲ್ಲಿ ಆಗಾಗ ಮಳೆ ಬರುತ್ತಿದ್ದು, ಬೇಸಿಗೆಯಲ್ಲಿ ತಂಪು ವಾತಾವರಣ ನಿರ್ಮಾಣವಾಗಿದೆ. ಕೆಲವೊಮ್ಮೆ ಬಿಸಿಲು ಮತ್ತು ಮಳೆ ಎರಡು ಘಟಿಸುತ್ತಿವೆ.

Bengaluru Weather Forecast Light Rain Warns in City Heavy Rainfall Warns on April 24 and 25

ಜೋರು ಮಳೆ ದಿನಗಳಲ್ಲೂ ಸಹ ನಗರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20-21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ದಿಢೀರ್ ಮಳೆಯಿಂದ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಬಹುದು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಗರದಲ್ಲಿ ಅಲ್ಲಲ್ಲಿ ಮರಗಳು, ಮರದ ಕೊಂಬೆಗಳು ಧರೆಗುರುಳುತ್ತಿದ್ದು, ಬಿಬಿಎಂಪಿ ಅಗತ್ಯ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇಂದಿನ ಹವಾಮಾನ ವರದಿ

ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದ ಬಿಸಿಲಿನ ಒಣ ಹವೆ ವಾತಾವರಣ ಸೃಷ್ಟಿಯಾಗಿದೆ. ಸ್ವಚ್ಛ ನೀಲಿ ಆಕಾಶವಿದ್ದು, ಹೆಚ್ಚಿನ ಬಿಸಿಲು ‍ಸೃಷ್ಟಿಯಾಗಬಹುದು. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇಂದು ಸಂಜೆ ನಂತರವು ವಿವಿಧ ಕಡೆಗಳಲ್ಲಿ ಮಳೆ ಆಗಬಹುದೆಂದು ಅಂದಾಜಿಸಲಾಗಿದೆ.

Take a Poll

ಜಕ್ಕೂರಿನಲ್ಲಿ ಜೋರು ಮಳೆ ದಾಖಲು

ಭಾನುವಾರ ಸಂಜೆಯು ನಗರದಲ್ಲಿ ವ್ಯಾಪಕ ಮಳೆ ದಾಖಲಾಗಿದ್ದು, ಜಕ್ಕೂರಿನಲ್ಲಿ 11 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಹಂಪಿನಗರ, ಚೌಡೇಶ್ವರಿ, ವಿದ್ಯಾರಣ್ಯಪುರ, ವನ್ನಾರ್‌ಪೇಟೆ ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಳೆ ಆಗಲಿದೆ. ಕೆಲವು ಸಂಚಾರ ಸಿಗ್ನಲ್‌ಗಳಲ್ಲಿ ವಾಹನ ಸವಾರರು ಕಿರಿ ಕಿರಿ ಅನುಭವಿಸಿದ್ದಾರೆ.

ಸಮುದ್ರಮಟ್ಟದಲ್ಲಿ ಉಂಟಾಗಿರುವ ವೈಪರಿತ್ಯಗಳ ಪ್ರಭಾವವು ಇನ್ನೂ ಕೆಲವು ದಿನಗಳ ಕಾಲ ಬೆಂಗಳೂರಿನ ಮೇಲೆ ಬೀರಲಿದೆ. ಹೀಗಾಗಿ ಮಳೆಗಾಲದ ಅನುಭವವಾಗುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+