BWSSB: ಏಪ್ರಿಲ್ 10ರೊಳಗೆ 'ಪಂಚಸೂತ್ರ' ಜಾರಿಗೆ ತರದಿದ್ದರೆ ಶೇ.10ರಷ್ಟು ನೀರು ಕಡಿತ
ಬೆಂಗಳೂರು, ಏಪ್ರಿಲ್ 02: ಬೆಂಗಳೂರಿನಲ್ಲಿ ಕುಡಿಯುವ ನೀರು ಕಾವೇರಿ ನೀರಿಗೆ ಸಮಸ್ಯೆ ಇಲ್ಲ. ಅಂತರ್ಜಲ ಕುಸಿದು ಸ್ವಲ್ಪ ಸಮಸ್ಯೆ ಎದುರಾಗಿದೆ. ಬೇಸಿಗೆ ಇರುವ ಕಾರಣ ಎಲ್ಲರು ಪೋಲಾಗದಂತೆ ಮಿತವಾಗಿ ನೀರು ಬಳಸಬೇಕು. ಅದಕ್ಕಾಗಿ ಪಂಚ ಸೂತ್ರಗಳನ್ನು ಅಳವಡಿಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ನೀರು ಕಡಿತ ಮಾಡಲಾಗುವುದು ಎಂದು ಲಕ್ಷಾಂತರ ಗ್ರಾಹಕರಿಗೆ ಎಚ್ಚರಿಕೆ ನೀಡಿದರು.
ಜಲಮಂಡಳಿಯಲ್ಲಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ತಮ್ಮ ವ್ಯಾಪ್ತಿಯ ಬೃಹತ್ ಗ್ರಾಹಕರ ಜೊತೆಗೆ ಅಂದರೆ 40 ಲಕ್ಷ-2 ಕೋಟಿ ಲೀಟರ್ ಗಳಷ್ಟು ನೀರು ಬಳಸುವ ಗ್ರಾಹಕರ ಜೊತೆ ಸಭೆ ನಡೆಸಿದರು. ನೀರು ಮಿತ ಬಳಕೆ, ರಕ್ಷಣೆಗೆ ಜಾರಿಗೆ ತಂದ ಗ್ರೀನ್ ಸ್ಟಾರ್ ಚಾಲೆಂಜ್ ನ ಪಂಚ ಸೂತ್ರಗಳನ್ನು ನೀವು ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಶೇಕಡಾ 10ರಷ್ಟು ನೀರನ್ನು ಕಡಿತ ಮಾಡಲಾಗುವುದು ಎಂದು ತಿಳಿಸಿದರು.

ಬೋರ್‌ವೆಲ್ ನೀರು (ಅಂತರ್ಜಲ) ಕುಸಿತ ಪರಿಣಾನ ನಗರದಲ್ಲಿ ನೀರಿಗೆ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ. ಮುಂದಿನ ಎರಡು ತಿಂಗಳುಗಳ ಕಾಲ ನೀರಿನ ಮಿತವ್ಯಯ ಬಳಕೆ ಮಾಡಿದರೆ ನಾವು ಈ ಕಠೋರ ಸ್ಥಿತಿಯಿಂದ ಪಾರಾಗಬಹುದು. ಇನ್ನೂ ಜಲಮಂಡಳಿ ಸದ್ಯದ ಪರಿಸ್ಥಿತಿ ನಿರ್ವಹಿಸುವ ಜೊತೆಗೆ ಭವಿಷ್ಯದಲ್ಲಿ ನೀರಿನ ಸಮಸ್ಯೆ ಆಗದಂತೆ, ರಾಜಧಾನಿಯನ್ನುವಾಟರ್ ಸರ್ ಪ್ಲಸ್ ಮಾಡುವ ಗುರಿ ಇಟ್ಟುಕೊಂಡಿದೆ ಎಂದು ವಿವರಿಸಿದರು.
'ಗ್ರೀನ್ ಸ್ಟಾರ್ ಚಾಲೆಂಜ್' ಸ್ವೀಕರಿಸಲು ಸೂಚನೆ
ಪಂಚಸೂತ್ರಗಳ ಗೀನ್ ಸ್ಟಾರ್ ಚಾಲೆಂಜ್ ಅನ್ನು ನೀವೆಲ್ಲರು ಅಳವಡಿಸಿಕೊಳ್ಳಬೇಕು. ಪಂಚಸೂತ್ರಗಳೆಂದರೆ, ನೀರು ಉಳಿತಾಯವಾಗುವ ವಿಧಾನ-ತಂತ್ರಜ್ಞಾನ ಅಳವಡಿಕೆ, ಇತರ ಬಳಕೆಗೆ ಸಂಸ್ಕರಿಸಿದ ನೀರಿನ ಬಳಕೆ, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನ ಅಳವಡಿಕೆ. ಹಾಗೂ ಮಳೆ ನೀರು ಇಂಗು ಗುಂಡಿ ನಿರ್ಮಿಸುವುದು. ಇವೆಲ್ಲ ಮಾಡಿದರೆ ನೀರು ಉಳಿತಾಯವಾಗಲಿದೆ. ಭವಿಷ್ಯದಲ್ಲೂ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ಈ ಸವಾಲು ಸ್ವೀಕರಿಸುವದಾಗಿ ಈಗಾಗಲೇ ಅಪಾರ್ಟ್‌ಮೆಂಟ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಮುಂದೆ ಬಂದಿವೆ. ಇದೇ ಸವಾಲನ್ನು ದೊಡ್ಡ ಗ್ರಾಹಕರಾದ ನೀವು ಅಳವಡಿಕೊಳ್ಳಬೇಕು. ಏಪ್ರಿಲ್ 10ರೊಳಗೆ ಈ ಸವಾಲು ಸ್ವೀಕರಿಸಿ ಪಂಚ ಸೂತ್ರ ಅಳವಡಿಕೊಳ್ಳದಿದ್ದರೆ, ನಿಮಗೆ ಒದಗಿಸುವ ನೀರಿನ ಪೈಕಿ ಶೆಕಡಾ 10 ರಷ್ಟನ್ನು ಕಡಿತಗೊಳಿಸಲಾಗುವುದು. ಕಡಿತದ ನೀರನ್ನು ಬೇರೆಡೆ ಎಲ್ಲಿ ಅಗತ್ಯವಿದೆಯೋ ಅಲ್ಲಿಗೆ ಮಾತ್ರ ಸರಬರಾಜು ಮಾಡಲಾಗುವುದೆಂದು ಎಚ್ಚರಿಸಿದರು.

ಬ್ರ್ಯಾಂಡ್ ಬೆಂಗಳೂರಿಗಾಗಿ ಕರೆ
ಸಭೆಗೆ ಆಗಮಿಸಿದ್ದ ಪ್ರತಿನಿಧಿಗಳಿಗೆ ಸಸಿ ವಿತರಿಸಲಾಯಿತು. ಹೆಚ್ಚು ಹೆಚ್ಚು ಸಸಿ ನೆಡುವ ಮೂಲಕ ಬ್ರ್ಯಾಂಡ್ ಬೆಂಗಳೂರು ಮೌಲ್ಯವನ್ನು ಉಳಿಸೋಣ ಎಂದು ಅಧ್ಯಕ್ಷರು ಕರೆ ನೀಡಿದರು. ಈಗಾಗಲೇ 133 ಬಿಲ್ಡರ್ ಗಳ ಜೊತೆಗೆ ಸಭೆ ನಡೆಸಲಾಗಿದೆ. ಅವರಿಗೆ ಸಂಸ್ಕರಿಸಿದ ನೀರು ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇನ್ನೂ ಗ್ರಾಹಕರು ನಿಮ್ಮ ನಿಮ್ಮ ಮನೆಗಳಲ್ಲಿ ಮಿತ ಬಳಕೆಗೆ ಸಹಾಯ ಮಾಡುವ ಏರಿಯೇಟರ್‌ಗಳನ್ನು ನಲ್ಲಿಗಳಿಗೆ ಅಳವಡಿಸಿಕೊಳ್ಳಬೇಕು. ವಾಷಿಂಗ್‌ಮಿಷನ್ ಒಳಗೆ ಬರುವ ನೀರನ್ನು ಮರುಬಳಿಸಿ, ಒಂದು ಫ್ಲಷ್‌ಗೆ 20 ಲೀಟರ್ ಹೊರಹೋಗುತ್ತಿದ್ದು, ಇದನ್ನ ತಡೆಗಟ್ಟಲು ಫ್ಲಷ್ ಬ್ಯಾಗ್ ಆಳವಡಿಸಬೇಕು. ಸಂಸ್ಕರಿಸಿದ ನೀರು ಬಳಕೆ ಮಾಡಬೇಕು. ತೋಟಗಾರಿಕೆ, ಕಟ್ಟಡ ನಿರ್ಮಾಣ, ಸ್ವಚ್ಛತೆಗೆ ಸ್ಕರಿಸಿದ ನೀರನ್ನೇ ಬಳಸುವಂತೆ ಅವರು ತಿಳಿಸಿದರು. ನೀರು ಮಿತ ಬಳಕೆ, ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಂತೆ ಅವರು ನಿರ್ದೇಶಿಸಿದರು.












Click it and Unblock the Notifications