ಬಂಡೆ ಅಪ್ಪಿಕೊಂಡು ಬೆಂಗಳೂರು ಟನಲ್‌ ರಸ್ತೆ ವಿರೋಧಿಸಿದ ನಾಗರಿಕರು: ಲಾಲ್‌ಬಾಗ್‌ನಲ್ಲಿ ವಿಭಿನ್ನ ಪ್ರತಿಭಟನೆ

ಬೆಂಗಳೂರು: ರಾಜ್ಯ ಸರ್ಕಾರದ ಬಹುನಿರೀಕ್ಷೆಯ ಸುರಂಗ ರಸ್ತೆ ನಿರ್ಮಿಸಲು ಮೊದಲ ಹಂತಕ್ಕೆ ಸಿಎಂ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದರ ವಿರುದ್ಧ ಆಕ್ಷೇಪಣೆ, ಪ್ರತಿಭಟನೆಗಳು ಮುಂದುವರಿದಿದ್ದು, ಇದೀಗ ಲಾಲ್ ಬಾಗ್ ಉದ್ಯಾನದಲ್ಲಿ ಬಂಡೆಯನ್ನು ಮೌನವಾಗಿ ಅಪ್ಪಿಕೊಳ್ಳುವ ಮೂಲಕ ನಾಗರಿಕರು ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಹೆಬ್ಬಾಳ ಎಸ್ಟಿಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್ ವರೆಗಿನ ಒಟ್ಟು ಸುಮಾರು 17 ಕಿಲೋ ಮೀಟರ್ ಉದ್ದದ ಟನಲ್ ರಸ್ತೆಯನ್ನು ನಿರ್ಮಿಸಲು ಸರ್ಕಾರ ಸಜ್ಜಾಗಿದೆ. ಇದು ಲಾಲ್ ಬಾಗ್ ಉದ್ಯಾನ, ಕೆಲವು ಕೆರೆಗಳು ಸೇರಿದಂತೆ ಐತಿಹಾಸ ಸ್ಥಳಗಳ ಮೂಲಕ ಹಾದು ಹೋಗಲಿದೆ ಎನ್ನಲಾಗಿದೆ. ಇದಕ್ಕೆ ಪರಿಸರ ಪ್ರೇಮಿಗಳು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ನೆನ್ನೆ ಭಾನುವಾರ ಲಾಲ್ ಬಾಗ್ ಉದ್ಯಾನದಲ್ಲಿ 'ಲಾಲ್‌ಬಾಗ್ ವಾಕರ್ಸ್ ಅಸೋಸಿಯೇಷನ್' ​​ನೇತೃತ್ವದಲ್ಲಿ ನಾಗರಿಕರು ಮತ್ತು ಪಾಚಾಚಾರಿ 'ದ್ವೀಪದ ಗ್ನಿಸ್ ಬಂಡೆ' ಅಪ್ಪಿಕೊಂಡು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.

Bengaluru Tunnel Road

ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ

ಇದೇ ಯೋಜನೆಗೆ ಸಂಬಂಧಿಸಿದಂತೆ ಮುಂದೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪಾರ್ಕ್‌ನಲ್ಲಿ ದೊಡ್ಡ ಪ್ರತಿಭಟನೆ ನಡೆಸುವ ಚಿಂತನೆ ಇದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಯೋಜನೆಯಿಂದ ಬೆಂಗಳೂರಿನ ಹಸಿರು ಹೊದಿಕೆ, ಭೂವೈಜ್ಞಾನಿಕ ಪರಂಪರೆ ಮತ್ತು ಜೀವವೈವಿಧ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರಾಚೀನ ಬಂಡೆ, ಹಸಿರು ಹೊದಿಕೆ ನಾಶ!

ಲಾಲ್ ಬಾಗ್ ಉದ್ಯಾನ ಒಳಗೆ ಈ ಬಾರಿ ಪ್ರತಿಭಟನೆಗೆ ಪೊಲೀಸ್ ಅನುಮತಿ ನಿರಾಕರಿಸಿದರು. ಹೀಗಾಗಿ ಪ್ರತಿಭಟನೆಯ ಸಂಕೇತವಾಗಿ ಪ್ರಾಚೀನ ಬಂಡೆಯನ್ನು ಮೌನವಾಗಿ ಅಪ್ಪಿಕೊಂಡು ನಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ. ಈ ಉದ್ಯಾನದಲ್ಲಿ ಲಕ್ಷಾಂತರ ವರ್ಷಗಳಿಂದ ಇರುವ ಭೂವೈಜ್ಞಾನಿಕ ರಚನೆಯಾದ ಪ್ರಾಚೀನ ಬಂಡೆಯು ಸುರಂಗ ನಿರ್ಮಾಣದ ಸಲುವಾಗಿ ಚೂರು ಚೂರಾಗಲಿದೆ. ಈ ಉತ್ಖನನಕ್ಕೆ ಹಾನಿ ಆಗುವ ಸಾಧ್ಯತೆ ಇದೆ ಎಂದರು.

ಬೆಂಗಳೂರಿಗೆ ಲಾಲ್‌ಬಾಗ್ ಕೇವಲ ಉದ್ಯಾನ ಮಾತ್ರವಲ್ಲ ಇದು ನಾಗರಿಕರ ಶ್ವಾಸಕೋಶ. ಕಾಂಕ್ರೀಟೀಕರಣಕ್ಕಾಗಿ ಲಕ್ಷಾಂತರ ವರ್ಷಗಳ ಇತಿಹಾಸ ಇರುವ, ನಗರದ ಜೀವನಾಡಿಯಾದ ಸಸ್ಯಕಾಶಿಗೆ ತೊಂದರೆ ಮಾಡುವುದು ಸರಿಯಲ್ಲ. ಪರಿಸರ ರಕ್ಷಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ರಾಜ್ಯ ಸರ್ಕಾರ ಯೋಜನೆಯನ್ನು ಈ ಕೂಡಲೇ ರದ್ದುಗೊಳಿಸಬೇಕು. ಬೆಂಗಳೂರು ಮತ್ತು ಬೆಂಗಳೂರಿಗರ ಹಿತ ಕಾಯಬೇಕು ಎಂದು ಲಾಲ್‌ಬಾಗ್ ವಾಕರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಎಸ್. ಉಮೇಶ್ ತಿಳಿಸಿದರು.

ಈ ಯೋಜನೆಗಳು ಬೆಂಗಳೂರಿಗೆ ಮಾರಕ

ಪರಿಸರ ಕಾರ್ಯಕರ್ತ ದತ್ತಾತ್ರೆಯ ಟಿ. ದೇವರೆ, "ಹೆಬ್ಬಾಳ- ರೇಷ್ಮೆ ಸಂಸ್ಥೆ ಮಧ್ಯದ ಉದ್ದೇಶಿತ ಸುರಂಗ ರಸ್ತೆ ಯೋಜನೆ, ಹೆಬ್ಬಾಳ ಮತ್ತು ಪಶುವೈದ್ಯಕೀಯ ಕಾಲೇಜು ನಡುವಿನ ಸಣ್ಣ ಸುರಂಗ ಹಾಗೂ ನಿರ್ಮಿಸಲು ಪ್ಲ್ಯಾನ್ ಮಾಡಲಾದ 09 ಕಾರಿಡಾರ್‌ಗಳು ಮಾತ್ರವಲ್ಲದೇ ನಮ್ಮ ಮೆಟ್ರೋ ಲೈನ್ ಜೊತೆಗೆ ತಲೆ ಎತ್ತಲಿರುವ ಡಬಲ್ ಡೆಕ್ಕರ್ ಮೇಲ್ಸೇತುವೆಗಳಿಂದ ನಗರ ಪರಿಹಸರಕ್ಕೆ ಶಾಶ್ವತ ಹಾನಿ ಉಂಟಾಗಲಿದೆ. ಅಲ್ಲದೇ ಈ ಯೋಜನೆಗಳ ಜಾರಿಗೂ ಮೊದಲು ತಜ್ಞರಿಂದ ಸೂಕ್ತ ಅಧ್ಯಯನ ನಡೆಸಲಾಗಿಲ್ಲ ಎಂದು ಅವರು ದೂರಿದರು.

ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಶೀಘ್ರವೇ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+