ಬೆಂಗಳೂರು: ಪ್ರಮುಖ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಪೀಕ್ ಅವರ್‌ನಲ್ಲಿ ಓಡಾಡುವುದು ಇನ್ನು ಸುಲಭ!
ಬೆಂಗಳೂರು, ಜ. 06: ಸಿಲಿಕಾನ್ ಸಿಟಿಯ ಪ್ರಮುಖ ಕಿರಿಕಿರಿಯೆಂದರೆ ಅದು ಟ್ರಾಫಿಕ್. ಅದರಲ್ಲೂ ಪೀಕ್ ಅವರ್‌ಗಳಲ್ಲಿ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ ಅಂದಿನ ದಿನದ ಒಂಡೆರಡು ಗಂಟೆ ಹಾಗೆಯೇ ಹೊರಟುಹೊಗುತ್ತದೆ.
ಸದ್ಯ ಬೆಂಗಳೂರು ಟ್ರಾಫಿ ಪೊಲೀಸರು ತೆಗೆದುಕೊಂಡಿರುವ ಕೆಲವು ಕ್ರಮಗಳಿಂದಾಗಿ ಕಳೆದ ತಿಂಗಳು ಚಾಕ್ ಪಾಯಿಂಟ್‌ಗಳಾಗಿ ಗುರುತಿಸಲಾಗಿದ್ದ ಒಂಬತ್ತು ಹೈ ಡೆನ್ಸಿಟಿ ಕಾರಿಡಾರ್‌ಗಳಲ್ಲಿ ಹೊಸ ಬದಲಾವಣೆ ಬಂದಿದೆ.
ಹೌದು, ಈ ಒಂಬತ್ತು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಪೋಲೀಸ್ ಡೇಟಾ ಪ್ರಕಾರ, ಈ ಕಾರಿಡಾರ್‌ಗಳಲ್ಲಿನ ಪ್ರಯಾಣದ ಸಮಯವು ಸರಾಸರಿ 42% ರಷ್ಟು ಕಡಿಮೆಯಾಗಿದೆ.

ಈ ಒಂಬತ್ತು ಕಾರಿಡಾರ್‌ಗಳೆಂದರೆ ಅಮೂರ್ತಹಳ್ಳಿ ಜಂಕ್ಷನ್-ಹೆಬ್ಬಾಳ ಪೊಲೀಸ್ ಠಾಣೆ, ಕೆಂಗೇರಿ - ಸಿಟಿ ಮಾರ್ಕೆಟ್, ಟ್ರಿನಿಟಿ ಚರ್ಚ್ - ರಿಚ್‌ಮಂಡ್ ಸರ್ಕಲ್, ರಿಚ್‌ಮಂಡ್ ಸರ್ಕಲ್ - ಮೇಯರ್ ಹಾಲ್, ಬೆನ್ನಿಗಾನಹಳ್ಳಿ ಅಂಡರ್‌ಪಾಸ್ - ಬಟ್ಟರಹಳ್ಳಿ, ಮೇಕ್ರಿ ಸರ್ಕಲ್ - ಎಸ್ಟೀಮ್‌ಮಾಲ್, ಕಸ್ತೂರಿನಗರ -ಕೆಆರ್‌ಎಫ್‌ಆರ್‌ಮ್ಯಾನೇಜ್‌ಮೆಂಟ್ ಸೆಂಟರ್.
ಬೆಂಗಳೂರು ಟ್ರಾಫಿಕ್ ಪೊಲೀಸರು ಈ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ಸಣ್ಣ ಹೊಂದಾಣಿಕೆಗಳನ್ನು ಮಾಡಿದ್ದಾರೆ. ಫೀಕ್ ಅವರ್‌ಗಳಾದ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ವಾಹನಗಳ ಸುಗಮ ಸಂಚಾರವನ್ನು ಸಕ್ರಿಯಗೊಳಿಸಲು ಈ ಸಣ್ಣ ಬದಲಾವಣೆಗಳು ಕಾರಣವಾಗಿವೆ.
"ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಟ್ರಾಫಿಕ್ ಪೊಲೀಸರು ಇನ್ನು ಮುಂದೆ ಸಿಗ್ನಲ್ ನಂತರ 50 ಅಥವಾ 100 ಮೀಟರ್‌ನಲ್ಲಿ ನಿಲ್ಲುವುದಿಲ್ಲ. ಬದಲಿಗೆ, ಹೊಸದಾಗಿ ಸ್ಥಾಪಿಸಲಾದ ಸ್ವಯಂ ಚಾಲಿತ ಕ್ಯಾಮೆರಾಗಳು ಆ ಕೆಲಸವನ್ನು ಮಾಡುತ್ತಿವೆ. ಪೊಲೀಸರು ನಗರದ ಪ್ರತಿಯೊಂದು ಜಂಕ್ಷನ್‌ನಲ್ಲಿಯೂ ಇರುತ್ತಾರೆ. ಈ ಸ್ವಯಂ ಚಾಲಿತ ಆತ್ಯಾಧುನಿಕ ಕ್ಯಾಮೆರಾಗಳೀಮದಾಗಿ ಅವರು, ಟ್ರಾಫಿಕ್ ನಿರ್ವಹಣೆಯತ್ತ ಗಮನಹರಿಸಲು ಸಹಾಯ ಮಾಡುತ್ತಿದೆ" ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಟ್ರಾಫಿಕ್ ವಿಶೇಷ ಪೊಲೀಸ್ ಆಯುಕ್ತ ಎಂಎ ಸಲೀಂ ಮಾಹಿತಿ ನೀಡಿದ್ದಾರೆ.

ಮುಂದುವರಿದು, "ನಾವು ಬೆಳಗ್ಗೆ 7 ರಿಂದ 11 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 9 ರವರೆಗಿನ ಪೀಕ್ ಅವರ್‌ಗಳಲ್ಲಿ ಭಾರೀ ಮೋಟಾರು ವಾಹನಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದೇವೆ. ಇದು ಕೂಡ ಸಂಚಾರ ದಟ್ಟಣೆಯಿಂದ ರಸ್ತೆಗಳನ್ನು ಗಮನಾರ್ಹವಾಗಿ ಮುಕ್ತಗೊಳಿಸಿದೆ" ಎಂದಿದ್ದಾರೆ.
ಹೆಬ್ಬಾಳ ಮೇಲ್ಸೇತುವೆಯ ಸುತ್ತಮುತ್ತ ಸಾಕಷ್ಟು ಹೊಂದಾಣಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೇಕ್ರಿ ಸರ್ಕಲ್‌ನಿಂದ ಹೆಬ್ಬಾಳಕ್ಕೆ ಹೋಗುವ ವಾಹನಗಳು ಮೇಲ್ಸೇತುವೆ, ತುಮಕೂರು ರಸ್ತೆ ಅಥವಾ ಕೆಆರ್ ಪುರಂ ಕಡೆಗೆ ಹೋಗುವವರು ಬಳ್ಳಾರಿ ರಸ್ತೆ ಮತ್ತು ಸಂಜಯನಗರದ ಜಂಕ್ಷನ್‌ನಿಂದ ಪ್ರಾರಂಭವಾಗುವ ಸರ್ವಿಸ್ ರಸ್ತೆಯನ್ನು ಬಳಸಬೇಕು.
ಹೆಬ್ಬಾಳದಿಂದ ಸಂಜಯನಗರಕ್ಕೆ ತೆರಳುವ ವಾಹನಗಳು ಬಳ್ಳಾರಿ ರಸ್ತೆಯ ಎಚ್‌ಎಂಟಿ ಬಸ್ ನಿಲ್ದಾಣದ ಬಳಿ ಯು-ಟರ್ನ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬದಲಾಗಿ, ವಾಹನ ಸವಾರರು ಗಂಗಾನಗರ ಅಂಡರ್‌ಪಾಸ್ ಬಳಸಿ ಯು-ಟರ್ನ್ ಮಾಡಿ ನಂತರ ಬಲಕ್ಕೆ ಸಂಜಯನಗರದ ಕಡೆಗೆ ತಿರುಗಬೇಕು ಇಂತಹ ಬದಲವಾಣೆ ಕೂಡ ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯ ಮಾಡಿದೆ.












Click it and Unblock the Notifications