ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ಚಿತ್ರಗಳಲ್ಲಿ ನೋಡಿ ಬೆಂಗಳೂರು ಮಳೆಯ ಅವಾಂತರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಇಲ್ಲಿನ ಎಚ್.ಎಸ್.ಆರ್. ಲೇಔಟ್ ಕೋರಮಂಗಲ, ನೆಲಮಂಗಲ ಮುಂತಾದ ಪ್ರದೇಶಗಳು ಅಕ್ಷರಶಃ ದ್ವೀಪದಂತಾಗಿವೆ. ಅದರಲ್ಲೂ ಎಚ್ ಎಸ್ ಆರ್ ಲೇಔಟ್ ನಲ್ಲಿ ವಾಸಿಸುವ ಜನರಿಗಂತೂ ಎಲ್ಲೂ ಹೋಗಲಾರದಂಥ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಲ್ಲಿ ಮಳೆ: ಎಲ್ಲೆಲ್ಲಿ, ಎಷ್ಟೆಷ್ಟು ವರ್ಷಧಾರೆ?ಬೆಂಗಳೂರಲ್ಲಿ ಮಳೆ: ಎಲ್ಲೆಲ್ಲಿ, ಎಷ್ಟೆಷ್ಟು ವರ್ಷಧಾರೆ?

ಶಾಂತಿ ನಗರ ಬಸ್ ನಿಲ್ದಾಣವೂ ಜಲಾವೃತಗೊಂಡಿದ್ದು, ಬಿಬಿಎಂಪಿ ನೌಕರರು ನೀರು ಹೊರಹಾಕುವಲ್ಲಿ ಹರಸಾಹಸಪಡುತ್ತಿದ್ದಾರೆ. ಬೆಂಗಳೂರು ಮಳೆಗೆ ಸಂಬಂಧಿಸಿದಂತೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡುತ್ತಿದ್ದು, ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಳೆ ಸೃಷ್ಟಿಸಿದ ಅವ್ಯವಸ್ಥೆಯನ್ನೂ, ಹಾನಿಯನ್ನೂ ಚಿತ್ರ ಸಮೇತ ನೀಡಲಾಗುತ್ತಿದೆ.

ಬೆಳ್ಳಂದೂರಿನಿಂದ ಬನಶಂಕರಿ ತಲುಪಿದ ಒಂದು ಮಳೆಯ ರಾತ್ರಿ ಅನುಭವಬೆಳ್ಳಂದೂರಿನಿಂದ ಬನಶಂಕರಿ ತಲುಪಿದ ಒಂದು ಮಳೆಯ ರಾತ್ರಿ ಅನುಭವ

ಜೊತೆಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಚಾರ ದಟ್ಟಣೆ ನಿಯಂತ್ರಣ, ನೀರು ನಿಂತ ಸ್ಥಳಗಳಿಂದ ನೀರನ್ನು ಹೊರಹಾಕುವ ಕಾರ್ಯ ನಡೆಯುತ್ತಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.

ಕೆರೆಯಾಯ್ತು ಹೆಬ್ಬಾಳ ಫ್ಲೈ ಓವರ್ ಬಳಿಯ ಸರ್ವಿಸ್ ರಸ್ತೆ

ಹೆಬ್ಬಾಳ ಫ್ಲೈ ಓವರ್ ಬಳಿಯ ಸರ್ವಿಸ್ ರಸ್ತೆಯಲ್ಲಿ ನೀರು ನಿಂತಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ, ಆ ಸ್ಥಳದಿಂದ ಬರುವವರು ಟ್ರಾಫಿಕ್ ಸಮಸ್ಯೆ ಎದುರಿಸಬೇಕಾದೀತು ಎಂಬ ಮಾಹಿತಿಯನ್ನು ಮೊದಲೇ ನೀಡಿತ್ತು.

ಪರಿಸ್ಥಿತಿ ಅವಲೋಕನ

ಕೋರಮಂಗಲದ ನಾಲ್ಕನೇ ಬ್ಲಾಕ್ ನ 80 ಅಡಿ ರಸ್ತೆಯುಲ್ಲಿ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಟ್ರಾಫಿಕ್ ಪೊಲೀಸ್ ಅಧಿಕಾರಿ.

ಮಡಿವಾಳ ಕೆರೆ ತುಂಬಿ...

ಅತಿಯಾದ ಮಳೆಯಿಂದಾಗಿ ಮಡಿವಾಳ ಕೆರೆ ತುಂಬಿ, ನೀರು ರಸ್ತೆಯಲ್ಲೆಲ್ಲ ಹರಿಯುತ್ತಿರುವ ಚಿತ್ರವನ್ನು ಮಡಿವಾಳ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ರಸ್ತೆಯೋ, ಸಮುದ್ರವೋ!

ಬಿ ಜಿ ರಸ್ತೆಯ ಸ್ಟಾರ್ ಮಾರ್ಕೆಟ್ ಬಳಿಯ ರಸ್ತೆಯಲ್ಲಿ ಎಲ್ಲೆಲ್ಲೂ ನೀರು ತುಂಬಿರುವ ಚಿತ್ರವನ್ನು ಹುಳಿಮಾವು ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ವೈಟ್ ಫೀಲ್ಡ್ ಟ್ರಾಫಿಕ್

ವೈಟ್ ಫೀಲ್ಡ್ ನಲ್ಲಿ ರಸ್ತೆಯ ತುಂಬ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಚಿತ್ರವನ್ನು ವೈಟ್ ಫೀಲ್ಡ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

English summary
Heavy rain create much havoc in karnataka's capital city Bengaluru on Sep 26th. Here are some pictures of rain which are spotted in Twitter account of Bengaluru traffic police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X