50% ರಿಯಾಯಿತಿ ಸೌಲಭ್ಯದಡಿ ದಂಡ ಕಟ್ಟಲು ನಾಳೆ ಫೆ.11 ಕೊನೆ ದಿನ: ಅವಧಿ ವಿಸ್ತರಣೆಗೆ ಮನವಿ
ಸರ್ಕಾರ ಸಂಚಾರ ಉಲ್ಲಂಘನೆ ದಂಡದ ಘೋಷಿಸಲಾದ ಮೇಲೆ 50% ರಿಯಾಯತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ ಮನವಿ ಸಲ್ಲಿಕೆ. ಇದಕ್ಕೆ ರಾಜ್ಯ ಸರ್ಕಾರಕ್ಕೆ ನಿರ್ಧಾರವೇನು? ತಿಳಿಯರಿ.
ಬೆಂಗಳೂರು, ಜನವರಿ 10: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಒಟ್ಟು ದಂಡ ಪಾವತಿ ಮೇಲೆ ಅರ್ಧದಷ್ಟು ರಿಯಾಯಿತಿ ಘೋಷಿಸಿತು.
ಇದಕ್ಕೆ ಜನರಿಗೆ ಭರಪೂರ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ ನಾಳೆ ಫೆಬ್ರವರಿ 11ರಂದು ಕೊನೆಗೊಳ್ಳಲಿರುವ ಈ ರಿಯಾಯಿತಿ ದಿನಾಂಕವನ್ನು ವಿಸ್ತರಿಸುವಂತೆ ಮನವಿ ಮಾಡಲಾಗಿದೆ.
ಹೌದು ಇಂತದ್ದೊಂದು ಮನವಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಫೆಬ್ರುವರಿ 3ರಂದು ಸರ್ಕಾರ ಸಂಚಾರ ನಿಯಮ ಉಲ್ಲಂಘನೆ (Traffic Rules Violation) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಒಟ್ಟು ದಂಡದ ಮೊತ್ತಕ್ಕೆ ಶೇ. 50ರಷ್ಟು ವಿನಾಯಿತಿ ನೀಡಿ ಆದೇಶಿಸಿತ್ತು. ಈ ನಿಯಮ ಫೆಬ್ರವರಿ 11 ರವರೆಗೆ ಅನ್ವಯವಾಗಲಿದೆ.

ಆದೇಶ ಜಾರಿಯಾದಾಗಿನಿಂದ ಈವರೆಗೆ (ಫೆಬ್ರವರಿ 3-9) ಕೇವಲ ಏಳನೇ ದಿನವಾದ ಗುರುವಾರ ವರೆಗೆ 65.93 ಕೋಟಿ ರೂಪಾಯಿ ದಂಡ ಸಂಗ್ರಹವಾಯಿತು. ಅಷ್ಟು ದಂಡದ ಮೊತ್ತದಿಂದ ಒಟ್ಟು 23.73 ಲಕ್ಷ ಪ್ರಕರಣಗಳು ವಿಲೇವಾರಿಯಾಗಿವೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ರಿಯಾಯಿತಿ ಸೌಕರ್ಯ ಘೋಷಣೆ ಆದಾಗಿನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಈ ಫೆಬ್ರವರಿ 11 ಅವಧಿಯನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಿಸುವಂತೆ ಬೆಂಗಳೂರು ಸಂಚಾರಿ ಹಿರಿಯ ಪೊಲೀಸರು ರಾಜ್ಯ ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಸರ್ಕಾರದ ನಿರ್ಧಾರ ತಿಳಿಯಬೇಕಿದೆ.
ನಗರದ ಸಂಚಾರ ನಿರ್ವಹಣಾ ಕೇಂದ್ರ (TMC) ಸೇರಿದಂತೆ ನಗರದ ಹಲವು ಸಂಚಾರ ಪೊಲೀಸ್ ಠಾಣೆಗಳು ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಹ ಜನರು ದಂಡ ತುಂಬುತ್ತಿದ್ದಾರೆ. ಈ ಪ್ರಕ್ರಿಯೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ದರಿಂದ ರಿಯಾಯಿತಿ ಸೌಲಭ್ಯ ದಿನ ವಿಸ್ತರಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ. ಸಲೀಂ ಅವರು ತಿಳಿಸಿದರು.

ನಕಲಿ ನಂಬರ್ ಪ್ಲೇಟ್ ಅಳವಡಿಕೆಗೆ ಕಡಿವಾಣ
ಯಾವ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ (ನೋಂದಣಿ ಸಂಖ್ಯೆ ಫಲಕ) ಅಳವಡಿಸಿದ್ದಾರೋ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ನಕಲಿ ನೋಂದಣಿ ಫಲಕದಿಂದ ಅಮಾಯಕ ವಾಹನ ಸವಾರರಿಗೆ ದಂಡ ಬೀಳುತ್ತಿದ್ದು, ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ನಕಲಿ ಫಲಕ ಹಾಕಿಕೊಂಡಿದ್ದರೆ ಈಗಲರೆ ತೆಗೆದುಬಿಡಿ, ಇಲ್ಲದಿದ್ದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಶೇ.50ರಷ್ಟು ರಿಯಾಯಿತಿ ಘೋಷಿಸಿ ಫೆಬ್ರವರಿ 2ರಂದು ಆದೇಶಿಸಿತ್ತು. ಮರುದಿನದಿಂದಲೇ ಜನರು ಹಣ ಕಟ್ಟಲು ಮುಗಿಬೀಳುತ್ತಿದ್ದಾರೆ.












Click it and Unblock the Notifications