Bengaluru Police Extortion: ಆಸ್ಪತ್ರೆಗೆ ಹೋಗುತ್ತಿದ್ದ ದಂಪತಿಗೆ ಕಿರುಕುಳ ನೀಡಿ ಹಣ ಸುಲಿಗೆ ಆರೋಪ

ಬೆಂಗಳೂರು ಪೊಲೀಸರ ಮೇಲೆ ಪದೇ ಪದೆ ಹಣ ವಸೂಲಿ ಆರೋಪಗಳು ಕೇಳಿ ಬರುತ್ತಿವೆ. ಜಯನಗರದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯಿಂದ ಹಣ ವಸೂಲಿ ಮಾಡಲಾಗಿದೆ ಎಂದು ಅವರು ಪುತ್ರ ಆರೋಪಿಸಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು, ಫೆಬ್ರವರಿ 07: ಬೆಂಗಳೂರರುಪೊಲೀಸರ ಮೇಲೆ ಪದೇ ಪದೆ ಹಣ ವಸೂಲಿ ಆರೋಪಗಳು ಕೇಳಿ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೆಲವು ಪೊಲೀಸರ ವರ್ತನೆ ನಾಗರಿಕರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಜಯನಗರದಲ್ಲಿ ಪೊಲೀಸರ ವಿರುದ್ಧ ಮತ್ತೆ ಹಣ ವಸೂಲಿ ಆರೋಪ ಮಾಡಲಾಗಿದೆ.

ಅನಾರೋಗ್ಯ ಕಾರಣಕ್ಕೆ ಆಸ್ಪತ್ರೆಗೆ ಹೊರಟ್ಟಿದ್ದ ದಂಪತಿಯಿಂದ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ. ಇಂತದ್ದೊಂದು ಘಟನೆ ಜಯನಗರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ದಂಪತಿ ಪುತ್ರ ರಾಕೇಶ್ ಎಂಬುವವರು ಟ್ವೀಟ್ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ.

ಟ್ವೀಟ್‌ನಲ್ಲಿ, ನಾವು ಜೆಪಿ ನಗರದ ನಿವಾಸಿಗಳು. 47 ವರ್ಷದ ನನ್ನ ತಾಯಿ ಮಂಗಳ ಅವರಿಗೆ ಸಕ್ಕರೆ ಖಾಯಿಲೆ ಇದ್ದು, ಅವರನ್ನು ತಂದೆಯವರು ಜಯನಗರದ 8ನೇ ಬ್ಲಾಕ್ ನಲ್ಲಿರುವ ಮಧುಮೇಹ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಬೈಕ್‌ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರು ತಡೆದಿದ್ದಾರೆ. ನಂತರ ಏಕವಚನದಲ್ಲಿ ತಂದೆಯನ್ನು ನಿಂದಿಸಿ ಕಿರುಕುಳ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Bengaluru traffic police extortion Rs 5000 from a couple who were on way to hospital

ನಂತರ ಸಂಚಾರ ಪೊಲೀಸ್ ಸಿಬ್ಬಂದಿಎಂಬುವವರು ಐದು ಸಾವಿರ ರೂಪಾಯಿ ಪಾವತಿಸುವಂತೆ ತಂದೆಗೆ ಸೂಚಿಸಿದ್ದಾರೆ. ಪತ್ನಿಗೆ ಕಾಯಿಲೆ ಇದ್ದು, ಆಸ್ಪತ್ರೆಗೆ ಕರೆದೊಯ್ಯವುದಾಗಿ ತಿಳಿಸಿದರು ಬಿಟ್ಟುಕಳುಹಿಸಿಲ್ಲ. ನನ್ನ ಬಳಿ ಕೇವಲ 1000 ರೂಪಾಯಿ ಇದೆ ಎಂದು ಹೇಳಿದರು ಅದಕ್ಕೆ ಪೊಲೀಸರು ಒಪ್ಪಿಲ್ಲ. ಐದು ಸಾವಿರ ಹಣ ಕಟ್ಟುವಂತೆ ಪೊಲೀಸರು ಪಟ್ಟು ಹಿಡಿದ ಕಾರಣ, ವಾಹನ ಅಲ್ಲೇ ಬಿಟ್ಟು ಸುಮಾರು 2 ಕಿಲೋ ಮೀಟರ್ ನಡೆದುಕೊಂಡೇ ಮನಗೆ ಬಂದಿದ್ದಾರೆ. ಮನೆಗೆ ಬಂದು ಹಣ ತೆಗೆದುಕೊಂಡು ಹೋಗಿ ಕೇಳಿದಷ್ಟು ಹಣ ಪಾವತಿಸಿದ್ದಾರೆ ಎಂದು ಪುತ್ರ ರಾಕೇಶ್ ಹೇಳಿದ್ದಾರೆ.

Bengaluru traffic police extortion Rs 5000 from a couple who were on way to hospital

ಈ ಬಗ್ಗೆ ಬೆಂಗಳೂರು ಸಂಚಾರಿ ಪೋಲಿಸರಿಗೆ ಟ್ಯಾಗ್ ಮಾಡಿ, ದೂರು ನೀಡಿದ್ದಾರೆ. ಇತ್ತೀಚೆಗಷ್ಟೇ ಮಾನ್ಯತಾ ಟೆಕ್ ಪಾರ್ಕ್ ಬಳಿ ದಂಪತಿಯಿಂದ ಹಣ ಸುಲಿಗೆ ಮಾಡಿದ್ದರು. ಅವರಿಗೆ ಓಟಾಟಕ್ಕೆ ನಿರ್ಬಂಧ ವಿದೆ ಎಂದು ಹೇಳಿ ಹಣ ಸುಲಿಗೆ ಮಾಡಲಾಗಿತ್ತು. ನಂತರ ಇಬ್ಬರು ಸಿಬ್ಬಂದಿ ಅಮಾನತುಗೊಂಡಿದ್ದರು. ಇದೀಗ ಮತ್ತೆ ಅಂತದ್ದೆ ಘಟನೆ ನಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+