ಬೆಂಗಳೂರು ಬೈಕ್ ಸವಾರರೇ ಎಚ್ಚರ, ಟ್ರಾಫಿಕ್‌ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಇನ್ಮುಂದೆ ತಪ್ಪಲ್ಲ ಭಾರಿ ದಂಡ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನು ಖಾತ್ರಿಪಡಿಸಲು ಬೆಂಗಳೂರು ಸಂಚಾರ ಪೊಲೀಸರು ಮತ್ತೊಮ್ಮೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ನಗರದಾದ್ಯಂತ ಹೆಲ್ಮೆಟ್ ನಿಯಮ ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದ್ದು, ಕೇವಲ ಮೂರೇ ಗಂಟೆಗಳ ಅವಧಿಯಲ್ಲಿ ಭರ್ಜರಿ 4,300ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸುವ ಮೂಲಕ ಸವಾರರಿಗೆ ಶಾಕ್ ನೀಡಿದ್ದಾರೆ.

ಸಂಚಾರ ಪೊಲೀಸರು ಮಂಗಳವಾರ ಮುಂಜಾನೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ನಗರದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು ಹಾಗೂ ಆಯಕಟ್ಟಿನ ಜಾಗಗಳಲ್ಲಿ ವಿಶೇಷ ತಪಾಸಣೆ ನಡೆಸಿದ್ದರು. ದ್ವಿಚಕ್ರ ವಾಹನ ಚಾಲಕರು ಮಾತ್ರವಲ್ಲದೆ, ಅವರ ಹಿಂದೆ ಕುಳಿತು ಪ್ರಯಾಣಿಸುವ ಸವಾರರು ಹೆಲ್ಮೆಟ್ ಧರಿಸದಿದ್ದರೂ ತಡೆದು ನಿಲ್ಲಿಸಿ ದಂಡದ ವಿಧಿಸಿದ್ದಾರೆ.

Bengaluru Traffic Police

ಪೊಲೀಸ್ ಇಲಾಖೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಕೇವಲ ಮೂರು ಗಂಟೆಗಳ ಈ ಮುಂಜಾನೆಯ ಕಾರ್ಯಾಚರಣೆಯಲ್ಲಿ ಒಟ್ಟು 4,351 ಪ್ರಕರಣಗಳು ದಾಖಲಾಗಿವೆ. ಹೆಲ್ಮೆಟ್ ಧರಿಸದೆ ಬೇಜವಾಬ್ದಾರಿಯಿಂದ ಬೈಕ್ ಚಲಾಯಿಸುತ್ತಿದ್ದ 2,920 ಸವಾರರ ವಿರುದ್ಧ ಕೇಸ್ ಬುಕ್ ಮಾಡಲಾಗಿದೆ. ಬೈಕ್ ಚಾಲಕ ಹೆಲ್ಮೆಟ್ ಧರಿಸಿದ್ದರೂ, ಹಿಂದೆ ಕುಳಿತವರಿಗೆ ಹೆಲ್ಮೆಟ್ ಹಾಕಿಸದ ಹಿನ್ನೆಲೆಯಲ್ಲಿ 1,431 ಹಿಂಬದಿ ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪೊಲೀಸರ ಖಡಕ್ ವಾರ್ನಿಂಗ್

ಟ್ರಾಫಿಕ್ ಸುರಕ್ಷತಾ ನಿಯಮಗಳ ಪ್ರಕಾರ ಬೈಕ್ ಓಡಿಸುವವರು ಹಾಗೂ ಅವರ ಹಿಂದೆ ಕುಳಿತುಕೊಳ್ಳುವವರಿಬ್ಬರಿಗೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. "ರಸ್ತೆ ಅಪಘಾತಗಳು ಸಂಭವಿಸಿದಾಗ ಸವಾರರ ಜೀವಕ್ಕೆ ಎದುರಾಗುವ ಗಂಭೀರ ಗಾಯಗಳು ಮತ್ತು ಸಾವಿನ ಪ್ರಮಾಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲೂ ನಗರದಾದ್ಯಂತ ಇಂತಹ ಹಠಾತ್ ತಪಾಸಣೆ ಮತ್ತು ವಿಶೇಷ ಕಾರ್ಯಾಚರಣೆಗಳು ನಿರಂತರವಾಗಿ ಮುಮುಂದುವರಿಯಲಿವೆ" ಎಂದು ಸಂಚಾರಿ ಪೊಲೀಸ್ ಇಲಾಖೆ ಸವಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಬೆಂಗಳೂರು ನಗರದಾದ್ಯಂತ ಹೆಲ್ಮೆಟ್ ರಹಿತ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ, ಇಂದು ಮುಂಜಾನೆ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟೋಲ್ ಗೇಟ್ ಬಳಿಯೂ ಸಂಚಾರಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಬೆಳ್ಳಂಬೆಳಿಗ್ಗೆಯೇ ಗುಂಪು ಗುಂಪಾಗಿ ರಸ್ತೆಗಿಳಿದ ಪೊಲೀಸರು, ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುತ್ತಿದ್ದ ಸವಾರರನ್ನು ತಡೆದು ನಿಲ್ಲಿಸಿ ಸರಿಯಾಗಿಯೇ ಬಿಸಿಮುಟ್ಟಿಸಿದ್ದಾರೆ.

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ! ಪಾಲಿಕೆಯಿಂದ ರೂಲ್ಸ್ ಜಾರಿ
ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ! ಪಾಲಿಕೆಯಿಂದ ರೂಲ್ಸ್ ಜಾರಿ

ವಿಮಾನ ನಿಲ್ದಾಣದ ರಸ್ತೆಯ ಟೋಲ್ ಪ್ಲಾಜಾ ಸಮೀಪ ಸಂಚಾರಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದೊಡ್ಡ ಪಡೆಯೇ ಮೊಕ್ಕಾಂ ಹೂಡಿತ್ತು. ಮುಂಜಾನೆ ಕಚೇರಿಗಳಿಗೆ ತೆರಳುವವರು ಹಾಗೂ ಹೆದ್ದಾರಿಯಲ್ಲಿ ಅತಿ ವೇಗವಾಗಿ ಚಲಿಸುವ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ಈ ವಾಹನ ತಪಾಸಣೆ ನಡೆಸಲಾಯಿತು. ದ್ವಿಚಕ್ರ ವಾಹನ ಚಾಲಕರು ಮಾತ್ರವಲ್ಲದೆ, ಅವರ ಹಿಂದೆ ಕುಳಿತಿದ್ದ ಸಹಸವಾರರು (ಪಿಲಿಯನ್ ರೈಡರ್ಸ್) ಹೆಲ್ಮೆಟ್ ಧರಿಸದಿದ್ದರೂ ಪೊಲೀಸರು ಬಿಡದೆ ದಂಡ ವಿಧಿಸಿದರು.

ಕೇವಲ ಹೆಲ್ಮೆಟ್ ಅಷ್ಟೇ ಅಲ್ಲದೆ ಚಾಲನಾ ಪರವಾನಗಿ (DL), ಇನ್ಶೂರೆನ್ಸ್, ಮತ್ತು ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಯಿತು. ಏರ್‌ಪೋರ್ಟ್ ರಸ್ತೆಯಲ್ಲಿ ನಿಗದಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ಮತ್ತು ಸಿಗ್ನಲ್ ಜಂಪ್ ಮಾಡುವ ವಾಹನಗಳಿಗೂ ಪೊಲೀಸರು ಬ್ರೇಕ್ ಹಾಕಿದ್ದಾರೆ.

ವಿಮಾನ ನಿಲ್ದಾಣದ ರಸ್ತೆಯು ಅತ್ಯಂತ ವೇಗವಾಗಿ ಚಲಿಸುವ ಹೆದ್ದಾರಿಯಾಗಿರುವುದರಿಂದ ಇಲ್ಲಿ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಘಾತಕ್ಕೆ ಕಾರಣವಾಗುತ್ತದೆ. "ಬಹಳಷ್ಟು ಸವಾರರು ಬೆಳಗಿನ ಜಾವ ಪೊಲೀಸರು ಇರುವುದಿಲ್ಲ ಎಂಬ ಉಡಾಫೆಯಿಂದ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಆದರೆ ಇನ್ಮುಂದೆ ಇಂತಹ ಹಠಾತ್ ತಪಾಸಣೆಗಳು ಮುಂಜಾನೆ ಹಾಗೂ ತಡರಾತ್ರಿಯ ಅವಧಿಯಲ್ಲೂ ನಿರಂತರವಾಗಿ ಮುಂದುವರಿಯಲಿವೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು" ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸದ್ಯ ದೇವನಹಳ್ಳಿ ಮತ್ತು ಏರ್‌ಪೋರ್ಟ್ ಸುತ್ತಮುತ್ತಲಿನ ವಲಯದಲ್ಲಿ ಪೊಲೀಸರ ಈ ಬಿಗಿ ಕ್ರಮ ಸವಾರರಲ್ಲಿ ಕೊಂಚ ನಡುಕ ಹುಟ್ಟಿಸಿರುವುದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+