10ಕೆ ಮ್ಯಾರಥಾನ್: ಬೆಂಗಳೂರಿನ ಹಲವು ಸಂಚಾರ ಮಾರ್ಗ ಬದಲು
ಬೆಂಗಳೂರು, ಮೇ. 16: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ (ಮೇ 17) 'ಟಿಸಿಎಸ್ 10-ಕೆ ಮ್ಯಾರಥಾನ್' ಆಯೋಜಿಸಿರುವ ಕಾರಣ 6ರಿಂದ 11ಗಂಟೆವರೆಗೆ ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.
ಮ್ಯಾರಥಾನ್ ಸ್ಪರ್ಧಾಳುಗಳ ವಾಹನಗಳಿಗೆ ಯುಬಿ ಸಿಟಿ ಆವರಣದಲ್ಲಿ, ಸಾರ್ವಜನಿಕರ ವಾಹನಗಳಿಗೆ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ನಿಲುಗಡೆ ಮಾಡಲು ಅವಕಾಶ ನೀಡಲಾಗಿದೆ.[ಟಿಸಿಎಸ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡ್ರೆ ಏನು ಲಾಭ?]

* ಕಸ್ತೂರಬಾ ರಸ್ತೆ, ಎಂ.ಜಿ. ರಸ್ತೆ (ಅನಿಲ್ ಕುಂಬ್ಳೆ ವೃತ್ತದವರೆಗೆ), ಕಬ್ಬನ್‌ರಸ್ತೆ, ಕಾಮರಾಜ ರಸ್ತೆ, ಡಿಕನ್ಸನ್ ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ವೀಧಿ ಹಾಗೂ ಕಬ್ಬನ್ ಪಾರ್ಕ್ ಒಳಭಾಗದ ರಸ್ತೆಗಳಲ್ಲಿ ವಾಹನಗಳ ಸಂಚಾರ ಹಾಗೂ ನಿಲುಗಡೆ ಗೆ ಅವಕಾಶವಿಲ್ಲ.
* ಜೆ.ಸಿ.ರಸ್ತೆ ಮತ್ತು ನೃಪತುಂಗ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ-ಎಂ.ಜಿ.ರಸ್ತೆ, ಹಲಸೂರು, ಮಾರತ್‌ಹಳ್ಳಿ ಕಡೆಗೆ ತೆರಳುವ ವಾಹನಗಳು, ಹಡ್ಸನ್ ವೃತ್ತ-ದೇವಾಂಗ-ಮಿಷನ್ ರಸ್ತೆ ಹಾದು ರಿಚ್‌ಮಂಡ್ ಮೇಲ್ಸುತುವೆ ಮೂಲಕ ರೆಸಿಡೆನ್ಸಿ ರಸ್ತೆಯಲ್ಲಿ ತೆರಳಬೇಕು.
* ಜೆ.ಸಿ. ರಸ್ತೆಯಿಂದ ವಿಧಾನಸೌಧ, ಶಿವಾಜಿನಗರ ಹಾಗೂ ರಾಜಭವನ ಕಡೆಗೆ ಸಾಗುವ ವಾಹನಗಳು ಪೊಲೀಸ್ ಕಾರ್ನರ್, ಕೆ.ಜಿ. ರಸ್ತೆ-ಹಳೆ ಅಂಚೆ ಕಚೇರಿ ರಸ್ತೆ-ಕೆ.ಆರ್. ವೃತ್ತದ ಮೂಲಕ ಸಾಗಬೇಕು.
* ಶಿವಾಜಿನಗರ ಕಡೆಯಿಂದ ಹೋಗುವ ವಾಹನಗಳು, ಬಾಳೆಕುಂದ್ರಿ ವೃತ್ತ-ಕನ್ನಿಂಗ್‌ಹ್ಯಾಮ್ ರಸ್ತೆ, ಬಸವೇಶ್ವರ ವೃತ್ತ ಮುಖಾಂತರ ತೆರಳಬೇಕು.
* ಬಾಳೆಕುಂದ್ರಿ ವೃತ್ತದಿಂದ ಬರುವ ವಾಹನಗಳು ಟಿಎಂಸಿ ಸೆಂಟರ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಇನ್‌ಫ್ರೆಂಟ್ರಿ ರಸ್ತೆಯಲ್ಲಿ ಸಾಗಬೇಕು.
* ಕೆ.ಆರ್. ವೃತ್ತದಿಂದ ಕಬ್ಬನ್‌ಪಾರ್ಕ್ ಒಳಗೆ ಹೋಗುವ ವಾಹನಗಳು ನೃಪತುಂಗ ರಸ್ತೆ ಮೂಲಕ ಚಲಿಸಬಹುದಾಗಿದೆ.
* ಅನಿಲ್ ಕುಂಬ್ಳೆ ವೃತ್ತದಿಂದ ಬರುವ ವಾಹನಗಳು, ಕ್ವೀನ್ಸ್ ವೃತ್ತದಲ್ಲಿ ಎಡ ತಿರುವು ಪಡೆದು ಲ್ಯಾವೆಲ್ಲೆ ರಸ್ತೆ ಅಥವಾ ಕಸ್ತೂರ್‌ಬಾ ರಸ್ತೆಯಲ್ಲಿ ಸಾಗಬೇಕು.
* ಅನಿಲ್ ಕುಂಬ್ಳೆ ವೃತ್ತದಲ್ಲಿ ಎಂ.ಜಿ. ರಸ್ತೆ-ಸೇಂಟ್ ಮಾರ್ಕ್ಸ್ ರಸ್ತೆಯಿಂದ ಬರುವ ವಾಹನಗಳಿಗೆ ಬಿಆರ್‌ವಿ ವೃತ್ತದ ಕಡೆಗೆ ಪ್ರವೇಶ ನಿಷೇಧ ಮಾಡಲಾಗಿದೆ.
* ಹಳೆ ಮದ್ರಾಸ್ ರಸ್ತೆಯಿಂದ ನಗರಕ್ಕೆ ಪ್ರವೇಶಿಸುವ ಟೆಂಪೋ, ಸರಕು ಸಾಗಣೆ ಹಾಗೂ ಇತರೆ ವಾಹನಗಳು ಸುರಂಜನ್ ದಾಸ್ ರಸ್ತೆ ಮೂಲಕ ಹಳೆ ವಿಮಾನ ನಿಲ್ದಾಣ ರಸ್ತೆಗೆ ಮತ್ತು ಹಲಸೂರು ಕೆರೆ ಕಡೆಯಿಂದ ಸೇಂಟ್ ಜಾನ್ ರಸ್ತೆ ಮೂಲಕ ಕಂಟೋನ್ಮೆಂಟ್ ರೈಲ್ವೆ ರಸ್ತೆ, ಜಯಮಹಲ್ ರಸ್ತೆ ಮುಖೇನ ಮೇಖ್ರಿ ವೃತ್ತ ತಲುಪಬೇಕಿದೆ.
* ಕಬ್ಬನ್ ರಸ್ತೆ ಬದಲು ಇನ್‌ಫ್ರೆಂಟಿ ರಸ್ತೆ ಬಳಸಬಹುದು. ಇನ್‌ಫೆಂಟ್ರಿ ರಸ್ತೆ ಮೂಲಕ ಬರುವ ವಾಹನಗಳು, ಡಿಕನ್ಸನ್ ರಸ್ತೆ, ಸೇಂಟ್ ಜಾನ್ ರಸ್ತೆ, ಗಂಗಾಧರ್ ಚೆಟ್ಟಿ ರಸ್ತೆ ಮೂಲಕ ಸಾಗಬೇಕು.
* ಜೆ.ಸಿ.ರಸ್ತೆಯಲ್ಲಿ ಮಿನರ್ವ ಕಡೆಯಿಂದ ಬಂದು ಶಿವಾಜಿನಗರ, ಎಂ.ಜಿ.ರಸ್ತೆ, ಹಲಸೂರು ಕಡೆಗೆ ಹೋಗುವ ವಾಹನಗಳು ಜೆ.ಸಿ.ರಸ್ತೆಯ ಭಾರತ್ ಜಂಕ್ಷನ್‌ನಲ್ಲಿ ಬಲತಿರುವು ಪಡೆದು ಎಚ್.ಸಿದ್ದಯ್ಯ ರಸ್ತೆ-ರಿಚ್‌ಮಂಡ್ ವೃತ್ತ ಮುಖಾಂತರ ಹೋಗಬೇಕು.
* ಹಳೆ ಏರ್‌ಪೋರ್ಟ್ ರಸ್ತೆ, ದೊಮ್ಮಲೂರು ಹಾಗೂ ಇತರೆ ಬಡಾವಣೆಗಳಿಂದ ಟ್ರಿನಿಟಿ ವೃತ್ತ ಮುಖಾಂತರ ಎಂ.ಜಿ. ರಸ್ತೆ ಮಾರ್ಗವಾಗಿ ಹೋಗುವ ವಾಹನಗಳನ್ನು ಎಎಸ್‌ಸಿ ಸೆಂಟರ್ ಹತ್ತಿರ ನಿರ್ಬಂಧಿಸಲಾಗಿದೆ.
ಈ ಬಗ್ಗೆ ಸಂಚಾರ ಪೊಲೀಸರು ಅಧಿಕೃತ ಪ್ರಕಟಣೆ ಹೊರಡಿಸಿದ್ದು ನಾಗರೀಕರು ಸಹಕರಿಸುವಂತೆ ಕೇಳಿಕೊಂಡಿದ್ದಾರೆ. ಮ್ಯಾರಾಥಾನ್ ನಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.












Click it and Unblock the Notifications