Bengaluru Traffic Alert: ಸೆ.8ರಂದು ಈ ಪ್ರಮುಖ ರಸ್ತೆಗಳಲ್ಲಿ ಸಂಚಾರ, ಪಾರ್ಕಿಂಗ್ ಬ್ಯಾನ್, ಪರ್ಯಾಯ ರೂಟ್ಸ್
ಬೆಂಗಳೂರು: ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟಂಬರ್ 8ರಂದು ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ. ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಂಗಳವಾರ 01 ಗಂಟೆಯಿಂದ ರಾತ್ರಿ 11ಗಂಟೆಯವರೆಗೆ ಪ್ರಮುಖ ರಸ್ತೆಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಸಂಚಾರ ದಲ್ಲಿ ಬದಲಾವಣೆ ಮಾಡಲಾಗಿದೆ.
ನಿರ್ಬಂಧಿತ ರಸ್ತೆಗಳು
* ಬಾಳೆಕುಂದ್ರಿ ವೃತ್ತದಿಂದ ಜ್ಯೋತಿ ಕೆಫೆ ಜಂಕ್ಷನ್‌ವರೆಗೆ ಬಿ.ಎಂ.ಟಿ.ಸಿ ವಾಹನಗಳ ಸಂಪೂರ್ಣ ಸಂಚಾರ ನಿರ್ಬಂಧಿಸಲಾಗಿದೆ. ಮೆರವಣಿಗೆ ಸಮಯದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ.

* ಶಿವಾಜಿ ಸರ್ಕಲ್‌ನಿಂದ ಜ್ಯೋತಿ ಕೆಫೆ ಜಂಕ್ಷನ್ ಕಡೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧ.
* ಬಿ.ಆರ್.ವಿ ಜಂಕ್ಷನ್‌ನಿಂದ ಸೆಲೆಕ್ಟ್ ಜಂಕ್ಷನ್‌ವರೆಗೆ ಬಿ.ಎಂ.ಟಿ.ಸಿ ಬಸ್‌ಗಳು ಓಡಾಡುವಂತಿಲ್ಲ. ಸೆಲೆಕ್ಟ್ ಜಂಕ್ಷನ್‌ನಿಂದ ಜ್ಯೋತಿ ಕೆಫೆ ಜಂಕ್ಷನ್ ಕಡೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
* ಬೌರಿಂಗ್ ಆಸ್ಪತ್ರೆ ಜಂಕ್ಷನ್‌ನಿಂದ ಸೆಲೆಕ್ಟ್ ಜಂಕ್ಷನ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ.
* ಕ್ವಾಡ್ರೆಂಟ್ ವೃತ್ತದಿಂದ ಆರ್.ಎಂ.ಎಸ್ ಜಂಕ್ಷನ್ ಕಡೆಗಿನ ರಸ್ತೆ ಹಾಗೂ ಬಂಬೂ ಬಜಾರ್ ಕಡೆಯಿಂದ ಸುನ್ನಿ ವೃತ್ತದ ಕಡೆಗಿನ ರಸ್ತೆಯಲ್ಲಿ ನಿರ್ಬಂಧ.
* ಸುನ್ನಿ ವೃತ್ತದಿಂದ ಆರ್.ಎಂ.ಎಸ್ ಜಂಕ್ಷನ್ ಕಡೆಗಿನ ರಸ್ತೆ, ಮೆರವಣಿಗೆ ವೇಳೆ ಕ್ಲೀನ್ಸ್ ರಸ್ತೆ ಕಡೆಯಿಂದ ಆರ್.ಎಂ.ಎಸ್ ಜಂಕ್ಷನ್ ಕಡೆಗೆ ಬರುವ ಎಲ್ಲಾ ವಿಧದ ವಾಹನಗಳಿಗೆ ನಿಷೇಧವಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ವಾಹನಗಳಿಗೆ ಪರ್ಯಾಯ ಮಾರ್ಗಗಳು ಯಾವುವು?
* ಕ್ಲೀನ್ಸ್ ರಸ್ತೆ ಮತ್ತು ವಿಧಾನಸೌಧ ಕಡೆಯಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ ಬರುವ ಬಿ.ಎಂ.ಟಿ.ಸಿ ಬಸ್‌ಗಳು ಬಾಳೆಕುಂದ್ರಿ/ಸ್ಟೀನ್ಸ್ ರಸ್ತೆಯಲ್ಲಿ ನೇರವಾಗಿ ಚಲಿಸಿ ಟ್ರಾಫಿಕ್ ಹೆಡ್ ಕ್ವಾರ್ಟ್‌ರ್ ಜಂಕ್ಷನ್ ಬಳಿ ಎಡ ತಿರುವು ಪಡೆಯಬೇಕು. ಅಲ್ಲಿಂದ ಇನ್‌ಫೆಂಟ್ರಿ ರಸ್ತೆಯಲ್ಲಿ ನೇರವಾಗಿ ಚಲಿಸಿ ಸೆಂಟ್ರಲ್ ಸ್ಟ್ರೀಟ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಶಿವಾಜಿನಗರ ಬಸ್ ನಿಲ್ದಾಣಕ್ಕೆ ಹೋಗಬೇಕು.
* ಬಾಳೆಕುಂದ್ರಿ ವೃತ್ತದಿಂದ ಜ್ಯೋತಿ ಕೆಫೆ ಜಂಕ್ಷನ್ ಕಡೆಗೆ ಬರುವ ಇತರೆ ವಾಹನಗಳು ಶಿವಾಜಿ ವೃತ್ತದಲ್ಲಿ ಎಡ ಅಥವಾ ಬಲ ತಿರುವು ಪಡೆದು ಮುಂದೆ ಸಂಚರಿಸಬಹುದು. ಆದರೆ ಮೆರವಣಿಗೆಯ ಸಮಯದಲ್ಲಿ ಬಾಳೆಕುಂದ್ರಿ ವೃತ್ತದಲ್ಲಿ ಡೈವರ್ಷನ್ ಪಡೆದು ಇನ್‌ಫೆಂಟ್ರಿ ರಸ್ತೆಯ ಮೂಲಕ ಮುಂದೆ ಸಂಚರಿಸಬೇಕು.
* ಅನಿಲ್ ಕುಂಬ್ಳೆ ಜಂಕ್ಷನ್‌ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಹೋಗುವ ಬಿ.ಎಂ.ಟಿ.ಸಿ ಬಸ್‌ಗಳು ಬಿ.ಆರ್.ವಿ ಜಂಕ್ಷನ್‌ನಲ್ಲಿ ಎಡ ಅಥವಾ ಬಲ ತಿರುವು ಪಡೆದು ಪ್ರಯಾಣಿಕರನ್ನು ಇಳಿಸಿ ವಾಪಸ್ಸು ತೆರಳುವುದು. ಮಣಿಪಾಲ್ ಜಂಕ್ಷನ್ ಕಡೆಯಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್‌ಗಳು ಬಿ.ಆರ್.ವಿ ಜಂಕ್ಷನ್ ಹತ್ತಿರ ಪ್ರಯಾಣಿಕರನ್ನು ಇಳಿಸಿ ನಂತರ ನೇರವಾಗಿ ಸಿ.ಟಿ.ಓ ಜಂಕ್ಷನ್ ಬಳಿ ಎಡ ತಿರುವು ಪಡೆದು ಎಂ.ಜಿ ರಸ್ತೆ ಮೂಲಕ ವಾಪಸ್ಸು ತೆರಳಬೇಕು. ಬಿ.ಎಂ.ಟಿ.ಸಿ ಬಸ್‌ಗಳನ್ನು ಹೊರತುಪಡಿಸಿ ಬಿ.ಆರ್.ವಿ ಜಂಕ್ಷನ್‌ನಿಂದ ಶಿವಾಜಿನಗರದ ಕಡೆಗೆ ಬರುವ ಇತರೆ ವಾಹನಗಳು ಸೆಲೆಕ್ಟ್ ಜಂಕ್ಷನ್‌ನಲ್ಲಿ ಎಡ ಅಥವಾ ಬಲ ತಿರುವು ಪಡೆದು ಮುಂದೆ ಸಾಗಬಹುದು.
* ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಬರುವ ವಾಹನಗಳು ಬೌರಿಂಗ್ ಆಸ್ಪತ್ರೆ ಜಂಕ್ಷನ್ ಬಳಿ ಎಡ ತಿರುವು ಪಡೆದು ನೇರವಾಗಿ ಚಲಿಸಿ ಕಬ್ಬನ್ ರಸ್ತೆಯ ಮೂಲಕ ಮುಂದೆ ಚಲಿಸಬೇಕು.
* ಇನ್ನೂ ಪುಲಕೇಶಿನಗರದ ಕಡೆಯಿಂದ ಶಿವಾಜಿನಗರದ ಕಡೆಗೆ ಸವಾರರು ಕ್ವಾಡ್ರೆಂಟ್ ವೃತ್ತದಲ್ಲಿ ಎಡ ತಿರುವು ಪಡೆದು ಡಿ.ಕೆ ಸ್ಟ್ರೀಟ್ ರಸ್ತೆ ಮೂಲಕ ಚಲಿಸಬೇಕು. ಕಮರ್ಷಿಯಲ್ ಸ್ಟ್ರೀಟ್ ಕಡೆಯಿಂದ ಶಿವಾಜಿನಗರದ ಕಡೆಗೆ ಬರುವ ವಾಹನಗಳು ಕಮರ್ಷಿಯಲ್ ಸ್ಟ್ರೀಟ್ ರಸ್ತೆಯಲ್ಲಿ ನೇರವಾಗಿ ಚಲಿಸಿ ಕಮರ್ಷಿಯಲ್ ಸ್ಟ್ರೀಟ್ ಎಕ್ಸಿಟ್‌ನಲ್ಲಿ ಎಡ ತಿರುವು ಪಡೆದು ಆಸ್ಪತ್ರೆ ರಸ್ತೆ ಮೂಲಕ ಮುಂದೆ ಸಂಚರಿಸಬಹುದಾಗಿದೆ.
* ಬಂಬೂ ಬಜಾರ್ ಕಡೆಯಿಂದ ಶಿವಾಜಿನಗರದ ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳು ಸಲೀಂ ಗ್ಯಾರೇಜ್ (ಕಾಕ್ ಬರ್ನ್ ರಸ್ತೆ ತಿಮ್ಮಯ್ಯ ರಸ್ತೆ ಜಂಕ್ಷನ್) ಬಳಿ ಬಲ ತಿರುವು ಪಡೆದು ತಿಮ್ಮಯ್ಯ ರಸ್ತೆಯ ಮೂಲಕ ಮುಂದೆ ಹೋಗಬಹುದು.
* ಹೆಚ್.ಕೆ.ಪಿ ದರ್ಗಾ ಕಡೆಯಿಂದ ಬರುವ ವಾಹನಗಳು ಸುನ್ನಿ ವೃತ್ತದ ಬಳಿ ಎಡ ತಿರುವು ಮೂಲಕ ಕಾಕ್‌ಬರ್ನ್ ರಸ್ತೆ ಮತ್ತು ಮಿರ್ ಓಬೇದುಲ್ಲಾ ರಸ್ತೆ ಮೂಲಕ ಮುಂದೆ ಸಂಚರಿಸಬಹುದು. ಮೆರವಣಿಗೆ ಸಮಯದಲ್ಲಿ ಕ್ಲೀನ್ಸ್ ರಸ್ತೆ ಕಡೆಯಿಂದ ಬರುವ ವಾಹನಗಳು ಹೆಚ್.ಕೆ.ಪಿ ದರ್ಗಾ ಬಳಿ ಎಡ ತಿರುವು ಪಡೆದು ತಿಮ್ಮಯ್ಯ ರಸ್ತೆಯ ಮೂಲಕ ಮುಂದೆ ಸಂಚರಿಸುವಂತೆ ತಿಳಿಸಲಾಗಿದೆ.
ಇಲ್ಲಿ ಪಾರ್ಕಿಂಗ್‌ಗೆ ನಿಷೇಧ
ರಸಲ್ ಮಾರ್ಕೆಟ್ ಸುತ್ತ-ಮುತ್ತ - ಬ್ರಾಡ್‌ವೇ ರಸ್ತೆ - ಮೀನಾಕ್ಷಿ ಕೋಯಿಲ್ ಸ್ಟ್ರೀಟ್ ಓ.ಪಿ.ಹೆಚ್ ರಸ್ತೆ -ಸೆಂಟ್ರಲ್ ಸ್ಟ್ರೀಟ್ ಶಿವಾಜಿ ರಸ್ತೆ - ವೆಂಕಟಸ್ವಾಮಿ ನಾಯ್ಡು ರಸ್ತೆ - ಯೂನಿಯನ್ ಸ್ಟ್ರೀಟ್ - ಇನ್‌ಫೆಂಟ್ರಿ ರಸ್ತೆ ಕಬ್ಬನ್ ರಸ್ತೆ - ಲೇಡಿ ಕರ್ಜನ್ ರಸ್ತೆ - ಪ್ಲೇನ್ ಸ್ಟ್ರೀಟ್ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ಮಾಡುವಂತಿಲ್ಲ.
ಪಾರ್ಕಿಂಗ್ ಗೆ ಪಯಾರ್ಯ ವ್ಯವಸ್ಥೆ
-ಛೋಟಾ ಮೈದಾನ ಶಿವಾಜಿನಗರ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ 1ನೇ ಮಹಡಿ ಮುಂಭಾಗ (ಮೈನ್ ಗಾರ್ಡನ್ ರಸ್ತೆ) - ರಮಡಾ ಹೊಟೇಲ್ (ಓಲ್ಡ್ ಕಾಂಗ್ರೇಸ್ ಕಛೇರಿ) ಬಳಿ ನಿಲ್ಲಿಸಬಹುದು.
ಬಿಎಂಟಿಸಿ ಬಸ್‌ಗಳ ಮಾರ್ಗ, ನಿಲ್ದಾಣಗಳು
* ಹಲಸೂರು, ಓ.ಎಂ.ರಸ್ತೆ, ದೋಮ್ಮಲೂರು, ಕೆ.ಆರ್.ಪುರ, ಮಾರತ್ತಹಳ್ಳಿ, ವರ್ತೂರು, ವೈಟ್ ಫೀಲ್ಡ್, ನೀಲಸಂದ್ರ, ವಿವೇಕನಗರ. (ಬೆಂಗಳೂರು ಪೂರ್ವ) ಮಾರ್ಗದ ಬಸ್‌ಗಳು ಕಬ್ಬನ್ ರಸ್ತೆ, ಸಿಟಿಒ ಜಂಕ್ಷನ್, ಬಿಆರ್ ವಿ ಜಂಕ್ಷನ್ ಉತ್ತರ ಭಾಗದಲ್ಲಿ ನಿಲುಗಡೆ ನೀಡಬೇಕು.
* ಜಯನಗರ, ಜೆ.ಪಿ ನಗರ, ಶ್ರೀನಗರ, ಶಾಂತಿನಗರ, ಕೆ.ಹೆಚ್.ರಸ್ತೆ, ಹೊಸೂರು ರಸ್ತೆ, ಕೋರಮಂಗಲ ಮತ್ತು ಬನ್ನೇರುಘಟ್ಟ ಮಾರ್ಗದ (ಬೆಂಗಳೂರು ದಕ್ಷಿಣ ) ಸಾರಿಗೆ ಬಸ್‌ಗಳು ಕಬ್ಬನ್‌ರಸ್ತೆ, ಬಿ.ಆರ್.ವಿ ಜಂಕ್ಷನ್ ನಿಂದ ಸಿ.ಟಿ.ಓ. ಜಂಕ್ಷನ್ ವರೆಗೆ ರಸ್ತೆ ದಕ್ಷಿಣ ಭಾಗದಲ್ಲಿ ನಿಲುಗಡೆ ನೀಡಬಹುದು.
* ಕೆಂಪೇಗೌಡ ಬಸ್ ನಿಲ್ದಾಣ, ವಿಜಯನಗರ, ಮಲೇಶ್ವರಂ, ರಾಜಾಜಿನಗರ, ಸಿಟಿ ಮಾರ್ಕೆಟ್ ಮತ್ತು ಮೈಸೂರು ರಸ್ತೆ ಕಡೆಗೆ (ಬೆಂಗಳೂರು ಪಶ್ಚಿಮ) ಬರುವ ಬಸ್‌ಗಳಿಗೆ ಕ್ಲೀನ್ಸ್ ಸರ್ಕಲ್ ಕಿಂಗ್ಸ್ ರಸ್ತೆಯಲ್ಲಿ ನಿಲುಗಡೆ ವ್ಯವಸ್ಥೆ ಇದೆ.
* ಜೆ.ಸಿ ನಗರ, ಆರ್.ಟಿ.ನಗರ, ಯಶವಂತಪುರ, ಪೀಣ್ಯ, ಮೇಖ್ರಿ ವೃತ್ತ, ಹೆಬ್ಬಾಳ, ಯಲಹಂಕ, ಜಾಲಹಳ್ಳಿ, ಟ್ಯಾನರಿ ರಸ್ತೆ. ನಾಗವಾರ, ಬಾಣಸವಾಡಿ, ಲಿಂಗರಾಜಪುರ, ರಾಮಮೂರ್ತಿನಗರ (ಬೆಂಗಳೂರು ಉತ್ತರ) ಮಾರ್ಗದ ಬಸ್‌ಗಳು ಸ್ವೀನ್ಸ್‌ರಸ್ತೆ ಬಾಳೆಕುಂದ್ರಿ ಸರ್ಕಲ್ ಟ್ರಾಫಿಕ್ ಹೆಡ್ ಕ್ವಾಟ್ರಸ್ ಜಂಕ್ಷನ್ (ಪಾರ್ಸಿ ಟೆಂಪಲ್ ಹತ್ತಿರ.) ನಿಲುಗಡೆ ನೀಡಬಹುದು.


Click it and Unblock the Notifications
