Bengaluru Traffic:ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ AI ಪರಿಹಾರ: ಹ್ಯಾಕಥಾನ್‌ನಲ್ಲಿ 33,600 ಮಂದಿ, 1,100 AI ಮಾದರಿ

ಬೆಂಗಳೂರು: ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಬೆಂಗಳೂರಿನ ನಗರ ಸಂಚಾರ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆದ Gridlock Hackathon 2.0 ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ.

ಹ್ಯಾಕಥಾನ್‌ನಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳು, ಡೆವಲಪರ್‌ಗಳು ಹಾಗೂ ಉದ್ಯೋಗಿಗಳು ಸೇರಿದಂತೆ ಬರೋಬ್ಬರಿ 33,600 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಫ್ಲಿಪ್‌ಕಾರ್ಟ್‌ ಮತ್ತು ಬೆಂಗಳೂರು ಸಂಚಾರ ಪೊಲೀಸರು ಆಯೋಜಿಸಿದ್ದ ಈ ಹ್ಯಾಕಥಾನ್‌ಗೆ MapmyIndia, Arcadis ಹಾಗೂ HackerEarth ಸಹಯೋಗ ನೀಡಿದ್ದವು.

Bengaluru Traffic AI Hackathon 33 600 Participants Develop 1 100 Prototypes to Solve Traffic Problem

Bengaluru Traffic:ತಂತ್ರಜ್ಞಾನ ಆಧಾರಿತ ಪರಿಹಾರ

ಭಾಗವಹಿಸಿದ್ದವರು ಬೆಂಗಳೂರಿನ ಸಂಚಾರ ಪೊಲೀಸರ ASTraM ಪ್ಲಾಟ್‌ಫಾರ್ಮ್‌ನ ಅನಾಮಧೇಯಗೊಳಿಸಿದ ನೈಜ ಸಂಚಾರ ದತ್ತಾಂಶವನ್ನು ಬಳಸಿಕೊಂಡು ನಗರ ಸಂಚಾರ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಿದ್ದಾರೆ.

Bengaluru Traffic:1,100ಕ್ಕೂ ಹೆಚ್ಚು AI-ML ಪ್ರೋಟೋಟೈಪ್‌ಗಳು

ಹ್ಯಾಕಥಾನ್‌ನಲ್ಲಿ ಭಾಗವಹಿಸಿದ ತಂಡಗಳು 1,100ಕ್ಕೂ ಹೆಚ್ಚು ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಪ್ರೋಟೋಟೈಪ್‌ಗಳನ್ನು ಅಭಿವೃದ್ಧಿಪಡಿಸಿವೆ. ಸಂಚಾರ ದಟ್ಟಣೆಯನ್ನು ಮುಂಚಿತವಾಗಿ ಊಹಿಸುವುದು, ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚುವುದು, ವಾಹನಗಳ ಚಲನೆಯ ಮಾದರಿಗಳನ್ನು ವಿಶ್ಲೇಷಿಸುವುದು ಸೇರಿದಂತೆ ಹಲವು ಕ್ಷೇತ್ರಗಳಿಗೆ ಪರಿಹಾರಗಳನ್ನು ರೂಪಿಸಲಾಗಿದೆ. ‌

ಇದರ ಜೊತೆಗೆ ಪಾರ್ಕಿಂಗ್‌ ವ್ಯವಸ್ಥೆಯ ಬುದ್ಧಿವಂತ ನಿರ್ವಹಣೆ, ಸಂಚಾರ ಸಂಪನ್ಮೂಲಗಳ ನಿರ್ವಹಣೆ ಸೇರಿದಂತೆ ಬೆಂಗಳೂರಿನ ನಗರ ಸಂಚಾರವನ್ನು ಸುಧಾರಿಸಲು ನೆರವಾಗುವ ಹಲವು ತಂತ್ರಜ್ಞಾನ ಮಾದರಿಗಳನ್ನು ರೂಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಚಾರ ದಟ್ಟಣೆಗೆ ತಂತ್ರಜ್ಞಾನವೇ ಪರಿಹಾರ?

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಪೀಕ್‌ ಅವಧಿಯ ಟ್ರಾಫಿಕ್‌ ದಟ್ಟಣೆಯಿಂದಾಗಿ ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೈಜ ಸಂಚಾರ ದತ್ತಾಂಶವನ್ನು ಆಧರಿಸಿ AI ತಂತ್ರಜ್ಞಾನ ಬಳಸಿ ಸಮಸ್ಯೆಗಳನ್ನು ಗುರುತಿಸಿ, ಮುಂಚಿತವಾಗಿ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಹ್ಯಾಕಥಾನ್ ವೇದಿಕೆ ಕಲ್ಪಿಸಿದೆ. ‌

ಹ್ಯಾಕಥಾನ್‌ನಲ್ಲಿ ಮೂಡಿಬಂದಿರುವ ಈ AI ಆಧಾರಿತ ಪರಿಹಾರಗಳು ಭವಿಷ್ಯದಲ್ಲಿ ಬೆಂಗಳೂರಿನ ಸಂಚಾರ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವಲ್ಲಿ ನೆರವಾಗುವ ನಿರೀಕ್ಷೆಯಿದೆ. ಈ ಹ್ಯಾಕಥಾನ್‌ನಲ್ಲಿ ಅಭಿವೃದ್ಧಿಪಡಿಸಲಾದ ಹಲವು ಮಾದರಿಗಳು ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಹೆಚ್ಚು ಮುನ್ಸೂಚನಾ ಆಧಾರಿತವಾಗಿಸುವ ಗುರಿ ಹೊಂದಿವೆ.

ಇನ್ನೂ ಯಾವ ಪ್ರದೇಶದಲ್ಲಿ ಯಾವ ಸಮಯದಲ್ಲಿ ಟ್ರಾಫಿಕ್‌ ದಟ್ಟಣೆ ಹೆಚ್ಚಾಗಬಹುದು ಎಂಬುದನ್ನು ಮುಂಚಿತವಾಗಿ ಅಂದಾಜಿಸುವುದು, ವಾಹನಗಳ ಚಲನೆಯ ಮಾದರಿಗಳನ್ನು ವಿಶ್ಲೇಷಿಸುವುದು ಹಾಗೂ ಸಂಚಾರ ನಿಯಮ ಉಲ್ಲಂಘನೆಗಳನ್ನು ತ್ವರಿತವಾಗಿ ಗುರುತಿಸುವಂತಹ ಪರಿಹಾರಗಳನ್ನು ಭಾಗವಹಿಸುವವರು ರೂಪಿಸಿದ್ದಾರೆ. ಇದರಿಂದ ಟ್ರಾಫಿಕ್‌ ನಿರ್ವಹಣಾ ತಂಡಗಳು ಸಮಸ್ಯೆ ಎದುರಾದ ಬಳಿಕ ಕ್ರಮ ಕೈಗೊಳ್ಳುವ ಬದಲು, ಮುಂಚಿತವಾಗಿಯೇ ಅಗತ್ಯ ಕ್ರಮ ಕೈಗೊಳ್ಳಲು ನೆರವಾಗಬಹುದು.

ಪಾರ್ಕಿಂಗ್‌ ಸಮಸ್ಯೆಗೂ ಹ್ಯಾಕಥಾನ್‌ನಲ್ಲಿ ವಿಶೇಷ ಗಮನ ನೀಡಲಾಗಿದೆ. ಲಭ್ಯವಿರುವ ಪಾರ್ಕಿಂಗ್ ಸ್ಥಳಗಳ ಮಾಹಿತಿ, ವಾಹನಗಳ ಸಂಚಾರ ಮತ್ತು ರಸ್ತೆ ಬಳಕೆಯ ದತ್ತಾಂಶವನ್ನು ವಿಶ್ಲೇಷಿಸುವ ಮೂಲಕ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿದೆ. ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ AI ಮತ್ತು ಡೇಟಾ ಆಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಪ್ರಯಾಣದ ಸಮಯ ಉಳಿಸುವುದು ಹಾಗೂ ರಸ್ತೆ ಮೂಲಸೌಕರ್ಯದ ಪರಿಣಾಮಕಾರಿ ಬಳಕೆಗೆ ಉತ್ತೇಜನ ನೀಡುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+