Traffic Advisory: ಬೆಂಗಳೂರಿನ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಬದಲಾವಣೆ, ಪರ್ಯಾಯ ರಸ್ತೆಗಳ ಮಾಹಿತಿ
ಬೆಂಗಳೂರು, ಆಗಸ್ಟ್ 10: ಬೆಂಗಳೂರು ನಗರದ ಕೆಆರ್ ಪುರಂ ನಲ್ಲಿ ಲೂಪ್‌ನ ಕೊನೆಯ ಸ್ಪಾನ್ ಅನ್ನು ನಾಳೆ ಭಾನುವಾರ ಆಗಸ್ಟ್ 11ರಿಂದ ಕೆಡವಲಾಗುವುದು. ಹೀಗಾಗಿ ನಾಗವಾರದಿಂದ ಕಡೆಯಿಂದ ಹೆಬ್ಬಾಳದ ಕಡೆಗೆ ನಿಧಾನಗತಿ ಸಂಚಾರ ಇರುತ್ತದೆ. ಇನ್ನೂ ಆರ್.ಟಿ ನಗರ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಕಾರಣದಿಂದ ಪ್ರಮುಖ ರಸ್ತೆಗಳ ಸಂಚಾರದಲ್ಲಿ ಬದಲಾವಣೆ ಬಗ್ಗೆ ನಗರ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಆರ್.ಟಿ ನಗರ ಮುಖ್ಯರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಸದರಿ ಕಾಮಗಾರಿಯನ್ನು ಕೈಗೊಂಡ ಸಂದರ್ಭದಲ್ಲಿ ರವೀಂದ್ರನಾಥ್ ಠಾಗೂರ್ ವೃತ್ತದಿಂದ (ಗುಂಡುರಾವ್ ಜಂಕ್ಷನ್) ಆರ್.ಟಿ ನಗರ ಮುಖ್ಯರಸ್ತೆಗೆ ಸಂಚಾರವನ್ನು ನಿರ್ಬಂದಿಸಲಾಗಿದೆ. ಆದ್ದರಿಂದ ಆರ್‌ಟಿ ನಗರದ ಈ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

ಪರ್ಯಾಯ ಸಂಚಾರ ಮಾರ್ಗಗಳ ಪಟ್ಟಿ
* ಈ ಮಾರ್ಗದಲ್ಲಿ ಓಡಾಡುವ ವಾಹನ ಸವಾರರು ಜಯಮಹಲ್ ಮುಖ್ಯ ರಸ್ತೆಯಿಂದ ಆರ್.ಟಿ ನಗರ ಮುಖ್ಯ ರಸ್ತೆ ಹಾಗೂ ಸಿಬಿಐ ಮುಖ್ಯ ರಸ್ತೆಗೆ ಚಲಿಸುವ ಬಿ.ಎಂ.ಟಿ.ಸಿ ಬಸ್ ಗಳು ಸಿ.ಕ್ಯೂ.ಎ.ಎಲ್ ಕ್ರಾಸ್‌ನಿಂದ ಮೇತ್ರಿ ಸರ್ಕಲ್‌ನಿಂದ ಬಲ ತಿರುವು ಪಡೆಯಬೇಕು.
ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಅಂಡರ್‌ಪಾಸ್ ಬಳಿ ಬಲ ತಿರುವು ಪಡೆದುಕೊಂಡು ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಸಂಚರಿಸಬಹುದಾಗಿದೆ.
* ಜಯಮಹಲ್ ಮುಖ್ಯರಸ್ತೆಯಿಂದ ಕಾವಲ್ ಬೈರಸಂದ್ರ ಹಾಗೂ ಸುಲ್ತಾನ್‌ಪಾಳ್ಯ ಕಡೆಗೆ ಚಲಿಸುವ ಬಿಎಂಟಿಸಿ ಬಸ್ ಗಳು ಹಾಗೂ ಇತರೆ ವಾಹನಗಳು ಸಿಕ್ಕೂಎಎಲ್ ಕ್ರಾಸ್ ಬಳಿ ಬಲ ತಿರುವು ಪಡೆಯಬೇಕು. ಅಲ್ಲಿಂದ ವಾಟರ್‌ಟ್ಯಾಂಕ್ ಜಂಕ್ಷನ್ ಕಡೆಯಿಂದ ದೇವೆಗೌಡ ರಸ್ತೆಯ (ಪಿ.ಆರ್.ಟಿ.ಸಿ) ಮುಖಾಂತರ ದಿಣ್ಣೂರು ಜಂಕ್ಷನ್ ಬಳಿ ಬಲ ತಿರುವು ಪಡೆದುಕೊಂಡು ಸುಲ್ತಾನ್ ಪಾಳ್ಯ ಹಾಗೂ ಕಾವಲ್ ಬೈರಸಂದ್ರದ ಕಡೆಗೆ ಚಲಿಸಲು ಅನುಕೂಲ ಮಾಡಿಕೊಡಲಾಗಿದೆ.
* ವಾಟರ್ ಟ್ಯಾಂಕ್ ಜಂಕ್ಷನ್, ರಾಧಾಕೃಷ್ಣ ಥಿಯೇಟರ್ ಹಾಗೂ ಮಠದಹಳ್ಳಿ ಕಡೆಯಿಂದ ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಚಲಿಸುವ ಇತರೆ ವಾಹನಗಳು ರವೀಂದ್ರನಾಥ್ ಠಾಗೂರ್ ವೃತ್ತದಿಂದ (ಗುಂಡುರಾವ್ ಜಂಕ್ಷನ್) ಬಳಿ ಎಡ ತಿರುವು ಪಡೆಯಬೇಕು.
ಅಲ್ಲಿಂದ ಮುಂದೆ ತರಳಬಾಳು ರಸ್ತೆ ಮೂಲಕ ಬಳ್ಳಾರಿ ಮುಖ್ಯರಸ್ತೆಗೆ ಬಂದು ಎಡ ತಿರುವು ಪಡೆದುಕೊಂಡು ನಂತರ ಮೇಖ್ರಿ ಸರ್ಕಲ್ ಬಳಿ ಯು ಟರ್ನ್ ಪಡೆದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಅಂಡರ್‌ಪಾಸ್ ಬಳಿ ಬಲ ತಿರಗಿ ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಬರಬಹುದು.

ಕೆ.ಆರ್ ಪುರಂ ವ್ಯಾಪ್ತಯ ಪರ್ಯಾಯ ಮಾರ್ಗ
ಪುರಂ ನಲ್ಲಿ ಲೂಪ್‌ನ ಕೊನೆಯ ಸ್ಪಾನ್ ಅನ್ನು ಕೆಡವುದರಿಂದ ನಾಳೆಯಿಂದಲೇ ಈ ಮಾರ್ಗದಲ್ಲಿ ಕೆಲಸ ಪ್ರಾರಂಭವಾಗುತ್ತದೆ. ಆದ್ದರಿಂದ ನಾಗವಾರದಿಂದ ಹೆಬ್ಬಾಳವರೆಗೆ ಸಂಚಾರ ದಟ್ಟಣೆಯಿಂದ ಕೂಡಿರಲಿದೆ.
* ಇನ್ನೂ ನಾಗವಾರ ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುವ ವಾಹನ ಸವಾರರು ಹೆಣ್ಣೂರು-ಬಾಗಲೂರು ರಸ್ತೆಯನ್ನು ಬದಲಿ ಮಾರ್ಗವಾಗಿ ಬಳಸುವಂತೆ ಸೂಚಿಸಲಾಗಿದೆ.
* ನಾಗವಾರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಪ್ರಯಾಣಿಸುವ ವಾಹನ ಸವಾರರು ಟ್ಯಾನರಿ ರಸ್ತೆಯನ್ನು ಬದಲಿ ಮಾರ್ಗವನ್ನಾಗಿ ಬಳಸಲು ಕೋರಿದೆ. ಕೆ.ಆರ್.ಪುರ ಲೂಪ್‌ನ ಕೊನೆಯ ಸ್ಥಾನ್ ಅನ್ನು ಕೆಡುವುವ ಕೆಲಸವು 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಸಂಚಾರಿ ಪೊಲಿಸರು ಮಾಹಿತಿ ನೀಡಿದ್ದಾರೆ.












Click it and Unblock the Notifications