Benglauru Highway Toll: ಹೆದ್ದಾರಿ ಟೋಲ್‌ನಲ್ಲಿ ವ್ಯಕ್ತಿಯನ್ನು 50 ಮೀ. ಎಳೆದೊಯ್ದ ಕಾರು: Road Rage Viral
ಬೆಂಗಳೂರು, ಫೆಬ್ರವರಿ 17: ಬೆಂಗಳೂರಿನಲ್ಲಿನ ಹಾಡಹಗಲೇ ರೋಡ್ ರೇಜ್ ಘಟನೆ ನಡೆದಿದೆ. ಟೋಲ್ ಪ್ಲಾಜಾದಲ್ಲಿ ಈ ಘಟನೆ ನೋಡಿದ ಅಕ್ಕಪಕ್ಕದವರು ಅರೆಕ್ಷಣ ಭಯಭೀತರಾದ ದೃಶ್ಯ ಅಲ್ಲಿನ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ನೋಡ ನೋಡುತ್ತಿದ್ದಂತೆ ಕಾರೊಂದು ವ್ಯಕ್ತಿಯೊಬ್ಬನನ್ನು 50 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಘಟನೆ ಹಿಂದೆ ನಡೆದದ್ದು ಏನು ಎಂಬ ಮಾಹಿತಿ ಇಲ್ಲಿದೆ.
ನೆಲಮಂಗಲ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಎಂದಿನಂತೆ ವಾಹನಗಳು ಸಾಲುಗಟ್ಟಿ ಬರತೊಡಗಿದ್ದವು. ಆದರೆ ಒಂದು ಕಾರು ಮಾತ್ರ ಟೋಲ್ ಕಟ್ಟುವ ಸ್ಥಳಲ್ಲಿ ನಿಂತಿತ್ತು. ಟೋಲ್ ಗೇಟ್ ಓಪನ್ ಆಗುತ್ತಿದ್ದಂತೆ ಕಾರಿನ ಪಕ್ಕ ವಾಗ್ವಾದ ಮಾಡುತ್ತ ನಿಂತಿದ್ದ ವ್ಯಕ್ತಿಯನ್ನು ಕಾರು ಸುಮಾರುಮಾರು 50 ಮೀಟರ್‌ಗಳಷ್ಟು ಎಳೆದೊಯ್ದಿದೆ. ಇದು ನೆಲಮಂಗಲ ಹೆದ್ದಾರಿಯ ಯೆಂಟಗನಹಳ್ಳಿ ಬಳಿಯ ಲ್ಯಾಂಕೊ ದೇವನಹಳ್ಳಿ ಟೋಲ್‌ನಲ್ಲಿ ನಡೆದಿದೆ.

ಓವರ್ ಟೇಕಿಂಗ್ ಕುರಿತು ನಡೆದ ವಾಗ್ವಾದವೇ ಘರ್ಷಣೆಗೆ ಕಾರಣವಾಯ್ತು ಎಂದು ಹೇಳಲಾಗುತ್ತಿದೆ. ಆದರೆ ಈ ಅಮಾನವೀಯ ಘಟನೆಗೆ ಖಂಡನೆಯು ವ್ಯಕ್ತವಾಗುತ್ತಿದೆ.
ಟೋಲ್ ಪ್ಲಾಜಾದಲ್ಲಿ ಸಾಲು ಗಟ್ಟಿ ನಿಲ್ಲುವ ಮೊದಲು ಓವರ್‌ಟೇಕಿಂಗ್ ವಿಚಾರವಾಗಿ ಕಾರಿನ ಮಾಲೀಕ ಹಾಗೂ ಮತ್ತೊಂದು ವಾಹನದ ವ್ಯಕ್ತಿಯ ಜೊತೆಗೆ ಜಗಳ ಶುರುವಾಗಿದೆ. ವಾಹನಗಳು ಟೋಲ್ ಬೂತ್ ಸಮೀಪಿಸುತ್ತಿದ್ದಂತೆ, ಲೈನ್ ಪ್ರಕಾರ ಬರಬೇಕು. ಈ ವೇಳೆ ಕಾರು ಓವರ್ ಟೆಕ್ ಮಾಡಿದ್ದಕ್ಕೆ ಮತ್ತೊಂದು ವಾಹನದ ವ್ಯಕ್ತಿ ಚಕಾರವೆತ್ತಿದ್ದಾರೆ.
ಎಳೆದೊಯ್ದ ಕಾರಿನ ಚಾಲಕನ ಶರ್ಟ್ ಹಿಡಿದು ವ್ಯಕ್ತಿ ಜಗಳ ಆಡುತ್ತಿದ್ದ. ವಾಗ್ವಾದ ನಡೆದಿತ್ತು. ಇದೆಲ್ಲವು ಟೋಲ್ ಹತ್ತಿರ ಬಂದು ವಾಹನ ನಿಧಾನವಾಗುತ್ತಿದ್ದಂತೆ ನಡೆದಿದೆ. ಬಳಿಕ ಟೋಲ್ ಬ್ಯಾರಿಕೇಡ್ ಮೇಲಕ್ಕೆ ಎತ್ತಿದಾಗ, ಕಾರಲಿಲ್ಲ ಚಾಲಕ ಕಾರನ್ನು ಓಡಿಸಿದ್ದಾರೆ. ಚಾಲಕ ಕಾಲರ್ ಹಿಡಿದ್ದ ವ್ಯಕ್ತಿಯು ಆ ಕಾರಿನ ಜೊತೆಗೆ ಸುಮಾರು 50 ಮೀಟರ್‌ಗಳಷ್ಟು ದೂರು ಹೋಗಿ ಬಿದ್ದಿದ್ದಾನೆ. ಬಳಿಕ ತಪ್ಪಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದಾರೆ.
ಅಮಾನವೀಯ ಘಟನೆ: ಪ್ರಕರಣ ದಾಖಲು
ಇದೆಲ್ಲ ಆಘಾತಕಾರಿ ಪ್ರಸಂಗಗಳು ಸಿಸಿಟಿಯಲ್ಲಿ ಸೆರೆಯಾಗಿದೆ. ಸದ್ಯ ಸಂಚಾರಿ ಪೊಲೀಸರು, ಅಧಿಕಾರಿಗಳು ಮಾಹಿತಿ, ಸಾಕ್ಷಿ ಕಲೆ ಹಾಕುತ್ತಿದ್ದಾರೆ. ಕಾರಿನಿಂದ ಎಳೆದೊಯ್ದು ರಸ್ತೆ ಬಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿಲ್ಲ. ಇಂತಹ ಘಟನೆ ಅಮಾನವೀಯ ಎಂಬ ಮಾತುಗಳು ಕೇಳಿ ಬಂದಿವೆ.
ಪ್ರಕರಣವನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ವಿಡಿಯೋಗಳನ್ನು ಪರಿಶೀಲಿಸುತ್ತಿದ್ದಾರೆ. ಈ ರೋಡ್ ರೇಜ್ ಘಟನೆಯಲ್ಲಿ ಭಾಗಿಯಾದವರ ಗುರುತು ಪತ್ತೆ ಮಾಡುತ್ತಿದ್ದಾರೆ. ಆರ್‌ಟಿಒ ಜೊತೆಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಟೋಲ್ ಪ್ಲಾಜಾ ಸಿಬ್ಬಂದಿ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications