Namma Metro: ಮೆಟ್ರೋ ನಿಲ್ದಾಣದಲ್ಲೇ 4 ಅಂತಸ್ತಿನ ವಾಣಿಜ್ಯ ಕೇಂದ್ರ, ಓಪನ್ ಯಾವಾಗ? ಒಳಗೆ ಏನೇನಿದೆ...
ಬೆಂಗಳೂರು, ನವೆಂಬರ್ 22: ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಕಾಳೇನ ಅಗ್ರಹಾರ-ನಾಗವಾರವರೆಗೆ ಗುಲಾಬಿ ಮಾರ್ಗ (Namma Metro Pink Line) ಎರಡು ಹಂತಗಳಲ್ಲಿ ನಿರ್ಮಾಣಗೊಂಡಿದೆ. ಈ ಮಾರ್ಗದಲ್ಲಿ ವಾಣಿಜ್ಯ ಕಟ್ಟಡ ಸಹಿ ಬೃಹತ್ ಮೆಟ್ರೋ ನಿಲ್ದಾಣ ನಿರ್ಮಾಣವಾಗಿದೆ. ನಾಲ್ಕು ಅಂತಸ್ತರಿನ ಸಂಕೀರ್ಣ ಯೋಜನೆಯನ್ನು ನಿಗಮ ಅನಾವರಣಗೊಳಿಸಿದೆ. ಇದು ಮೊದಲ ಸಾರಿಗೆ ಸಂಬಂಧಿತ ರಿಯಲ್ ಎಸ್ಟೇಟ್ ಯೋಜನೆ ಎನ್ನಲಾಗಿದೆ. ಈ ಕಟ್ಟಡದಲ್ಲಿ ಏನೆಲ್ಲ ಇರಲಿದೆ, ಹೇಗಿದೆ? ವಿಸ್ತೀರ್ಣ, ಒಳಗೆ ವ್ಯವಸ್ಥೆ ಹಾಗೂ BMRCL ಆಹ್ವಾನ ಯಾರಿಗೆಲ್ಲ ನೀಡಿದೆ ಎಂಬ ಮಾಹಿತಿ ಇಲ್ಲಿದೆ.
ಬೃಹತ್ ಕಟ್ಟಡ ಒಳಗೊಂಡ ನಾಗವಾರ ಮೆಟ್ರೋ ನಿಲ್ದಾಣ ಬೆಂಗಳೂರಿನ ಮುಂದಿನ ಪ್ರಮುಖ ವಾಣಿಜ್ಯ ಕೇಂದ್ರವಾಗಲಿದೆ. ಮೆಟ್ರೋ ನಿಲ್ದಾಣದ ಮೇಲೆ ನಾಲ್ಕು ಕಟ್ಟಡಗಳು ಬರಲಿವೆ. ಭೂಗತದಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ. ಅಲ್ಲಿಂದ ನೀವು ಮೇಲೆ ನೇರವಾಗಿ ಇತರ ಅಂತಸ್ತುಗಳಿಗೆ ಹತ್ತುವಂತೆ ನಿರ್ಮಿಸಲಾಗುತ್ತಿದೆ.

ಈ ಕಟ್ಟಡವು ಮುಂದಿನ ವರ್ಷ 2026ರಲ್ಲಿ ಪೂರ್ಣಗೊಂಡ ಲೋಕಾರ್ಪಣೆಗೊಳ್ಳಲಿದೆ. ಈ ಸಂಕೀರ್ಣದಲ್ಲಿ ಗ್ರೇಡ್ ಎ ಕಚೇರಿಗಳು, ಸಹ-ಕೆಲಸದ ಕೇಂದ್ರಗಳು ಅಥವಾ ಪ್ರೀಮಿಯಂ ಚಿಲ್ಲರೆ ವ್ಯಾಪಾರ ಮತ್ತು ಮಾಲ್ ಗಳನ್ನು ತೆರೆಯಲು ಸೂಕ್ತವಾಗಿದ್ದು, BMRCL ಆಹ್ವಾನಿಸಿದೆ ಪತ್ರಿಕಾ ಜಾಹೀರಾತು ನೀಡಿದೆ. ಈ ನಿಲ್ದಾಣದಿಂದಲೇ ನೀವು ಪ್ಲಾಟ್‌ಫಾರ್ಮ್ ಮಟ್ಟಗಳಿಂದ ಮೀಸಲಾದ ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳ ಮೂಲಕ ಮೇಲಿನ ಅಂತಸ್ತುಗಳಿಗೆ ತೆರಳಬಹುದು. ಶಾಪಿಂಗ್ ಮುಗಿಸಿ, ಇತರ ಕಚೇರಿ ಕೆಲಸ ಮುಗಿಸಿ ಕೆಳಗೆ ಮೆಟ್ರೋ ನಿಲ್ದಾಣಕ್ಕೆ ಬಂದು ರೈಲು ಹತ್ತಬಹುದಾಗಿದೆ.
ಒಟ್ಟು ಸುಮಾರು 06 ಎಕರೆ ಪ್ರದೇಶದಲ್ಲಿನ ಈ ಕಟ್ಟವು ನಾಲ್ಕು ಮಹಡಿ ಹೊಂದಿರಲಿದೆ. 23,392.24 ಚದರ ಮೀಟರ್ (5.7 ಎಕರೆ) ಜಾಗದಲ್ಲಿ ನಿರ್ಮಿಸಲಾಗಿದೆ. ಮೆಟ್ರೋ ಭೂಗತ ನಿಲ್ದಾಣದ ಪಕ್ಕದಲ್ಲೇ 3,225.73 ಚದರ ಮೀಟರ್ ಬಹು-ಹಂತದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋಗೆ ಬರುವವರು ಮತ್ತು ವಾಣಿಜ್ಯ ಉದ್ದೇಶಗಳಿಗೆ ಬರುವವರನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಪಾರ್ಕಿಂಗ್ ಗೆ ಅವಕಾಶ ನೀಡಲಾಗಿದೆ.
ಕಾಮಗಾರಿ ಕುರಿತು ಹೇಳುವುದಾದರೆ, ಇಡೀ ಕಟ್ಟಡದಲ್ಲಿ ಮೊದಲ ಎರಡು ಮಹಡಿಗಳಲ್ಲಿನ ಕಂಬಗಳು, ಸ್ಲ್ಯಾಬ್‌ಗಳು ಸೇರಿದಂತೆ ಇತರ ಕೆಲಸಗಳೂ ಈಗಾಗಲೇ ಮುಗಿದಿದೆ. ಸಣ್ಣ ಪುಟ್ಟ ಕೆಲಸಗಳು ಇಲ್ಲಿ ಖಾಲಿ ಇವೆ. ಬಾಕಿ ಇರುವ ಎರಡು ಮಹಡಿಗಳು ಮುಂದಿನ 8-10 ತಿಂಗಳಲ್ಲಿ ಪೂರ್ಣಗೊಂಡು ಉದ್ಘಾಟನೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ನಿಗಮವು ಈ ಸ್ಥಳವು ಗ್ರೇಡ್ ಎ ಕಚೇರಿಗಳು, ಸಹ-ಕೆಲಸದ ಕೇಂದ್ರಗಳು ಅಥವಾ ಪ್ರೀಮಿಯಂ ಚಿಲ್ಲರೆ ವ್ಯಾಪಾರ ಮತ್ತು ಮಾಲ್ ಸ್ವರೂಪಗಳಿಗೆ ಸೂಕ್ತವಾಗಿದೆ ಎಂದು ಹೇಳಿದೆ. ನಿಲ್ದಾಣದ ಪ್ಲಾಟ್‌ಫಾರ್ಮ್ ಮಟ್ಟಗಳಿಂದ ಮೀಸಲಾದ ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳನ್ನು ಸಂಯೋಜಿಸಲು ಅವಕಾಶವಿದೆ ಎಂದು ವರದಿ ಮತ್ತಷ್ಟು ಸೇರಿಸಿದೆ.
ಮುಂದಿನ ವರ್ಷ ಡಿಸೆಂಬರ್ ಹೊತ್ತಿಗೆ ಈ ನಾಗವಾರ ನಿಲ್ದಾಣವು ಲೋಕಾರ್ಪಣೆಗೊಳ್ಳಲಿದೆ. ಎಂಬಸಿ, ಮಾನ್ಯತಾ ಬಿಸಿನೆಸ್ ಪಾರ್ಕ್, ಕಾರ್ಲೆ ಟೌನ್ ಸೆಂಟರ್ ಸೇರಿದಂತೆ ಪ್ರಮುಖ ಐಟಿ ಕಾರಿಡಾರ್‌ಗಳಿಗೂ ಈ ನಿಲ್ದಾಣ ಹತ್ತಿರವಾಗುತ್ತದೆ. ನೀಲಿ ಮಾರ್ಗದ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವವರು ಇದೇ ನಿಲ್ದಾಣದಲ್ಲಿ ಹತ್ತಿಳಿಯಬೇಕಿದೆ. ಏಕೆಂದರೆ ನಾಗರವಾರ ನಿಲ್ದಾಣ ಇಂಟರ್‌ಚೇಂಜ್ ನಿಲ್ದಾಣವಾಗಲಿದೆ. 2027ರ ಡಿಸೆಂಬರ್ ನಲ್ಲಿ ನೀಲಿ ಮಾರ್ಗದಲ್ಲಿ ಎತ್ತರದ ನಿಲ್ದಾಣವನ್ನು ಔಟರ್ ರಿಂಗ್ ರಸ್ತೆ ಫ್ಲೈಓವರ್‌ನ ಮೇಲೆ ನಿರ್ಮಿಸಲಾಗುತ್ತಿದೆ.
BMRCL ಇದೇ ವರ್ಷ (2025) ಕೆ.ಆರ್ ಪುರಂನಲ್ಲಿ 1.66 ಎಕರೆ ಜಾಗದಲ್ಲಿ ನೆಲಮಾಳಿಗೆಯ ಪಾರ್ಕಿಂಗ್ ಸೌಲಭ್ಯ ಸಹಿತ 11 ಅಂತಸ್ತಿನ ವಾಣಿಜ್ಯ ಗೋಪುರ, ಮೆಜೆಸ್ಟಿಕ್‌ನಲ್ಲಿ ಒಂದು ಮಿಲಿಯನ್ ಚದರ ಮೀಟರ್‌ಗಿಂತಲೂ ಹೆಚ್ಚು ವಾಣಿಜ್ಯ ಸ್ಥಳ ಮತ್ತು ನಿಲ್ದಾಣದ ಮೇಲೇ ದೊಡ್ಡ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿರುವ ಬೃಹತ್ ಯೋಜನೆ ಘೋಷಿಸಿದೆ. ಬಿಎಂಆರ್‌ಸಿಎಲ್ ವಿವಿಧ ಮೂಲಗಳಿಂದ ಶೇಕಡಾ 15ರಷ್ಟು ಆದಾಯ ಹೆಚ್ಚಿಸಲು ಪ್ಲಾನ್ ಮಾಡಿಕೊಂಡಿದೆ.
ನಾಗವಾರ ನಿಲ್ದಾಣದ ಮೇಲೆ ಯಾವೆಲ್ಲ ಕಚೇರಿ, ಮಾಲ್, ಚಿಲ್ಲರೆ ಮಾರಾಟ ಮಳಿಗೆಗಳು ಬರಲಿವೆ. ಯಾರೆಲ್ಲ ಬಿಎಂಆರ್‌ಸಿಎಲ್ ಆಹ್ವಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಶೀಘ್ರವೇ ತಿಳಿದು ಬರಲಿದೆ.












Click it and Unblock the Notifications