Double Decker Flyover: ಬೆಂಗಳೂರಿನ ಅತೀ ಉದ್ದದ ಡಬಲ್ ಡೆಕ್ಕರ್ ಫ್ಲೈಓರ್ ಹೇಗಿರಲಿದೆ? 2030ಕ್ಕೆ ರೆಡಿ...
ಬೆಂಗಳೂರು, ನವೆಂಬರ್ 15: ಬೆಂಗಳೂರು ನಮ್ಮ ಮೆಟ್ರೋ ಜಾಲ ವಿಸ್ತರಣೆ ಜೊತೆ ಜೊತೆಗೆ ರಾಜ್ಯ ಸರ್ಕಾರವು ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ ಇರುವಂತೆ ನಗರದಲ್ಲಿ ಅತೀ ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ 2030ರ ಹೊತ್ತಿಗೆ ಸಾಕಾರಗೊಳ್ಳಲಿದೆ. ಇದು ಹೇಗಿರಲಿದೆ, ಎಷ್ಟು ಉದ್ದ, ಯಾವೆಲ್ಲ ಪ್ರದೇಶಗಳಲ್ಲಿ ಅನುಕೂಲವೆಂಬ ಅಪ್ಡೇಟ್ ಮಾಹಿತಿ ಇಲ್ಲಿದೆ.
ನಮ್ಮ ಮೆಟ್ರೋದ 3ನೇ ಹಂತದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ ಬರುವ ಡಬಲ್ ಡೆಕ್ಕರ್ ಫ್ಲೈಓವರ್ ಉದ್ದಕ್ಕೂ ಒಟ್ಟು ಐದು ಸ್ಥಳಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಇಳಿಜಾರು ವ್ಯವಸ್ಥೆ ಹೊಂದಿರುತ್ತದೆ. ಸ್ಥಳೀಯ ಸಂಚಾರ ಅನುಕೂಲವಾಗುವಂತೆ ಪ್ಲಾನ್ ಮಾಡಲಾಗಿದೆ. ಒಂಬತ್ತು ಸ್ಥಳಗಳಲ್ಲಿ ಡೌನ್ ರಾಂಪ್ ಬರಲಿವೆ. ಮೆಟ್ರೋ ಮಾರ್ಗದೊಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಒಟ್ಟು 37.121 ಕಿಲೋ ಮೀಟರ್ ಉದ್ದ ನಿರ್ಮಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೋ ಕಾರಿಡಾರ್ ಸಂಪರ್ಕಗಳ ಮಾಹಿತಿ
ನಮ್ಮ ಮೆಟ್ರೋ ಮೂರನೇ ಹಂತದಡಿ ಸದ್ಯ ಎರಡು ಕಾರಿಡಾರ್ ನಿಮಾರ್ಣಗೊಳ್ಳಲಿವೆ. ಜೆ.ಪಿ. ನಗರ 4ನೇ ಹಂತ- ಕೆಂಪಾಪುರ ಹೊರ ವರ್ತುಲ ರಸ್ತೆಯ ಪಶ್ಚಿಮದವರೆಗೆ ಒಂಡು ಮೆಟ್ರೋ ಕಾರಿಡಾರ್ ನಿರ್ಮಾಣಗೊಳ್ಳಲಿದೆ. ಡೆಲ್ಮಿಯಾ ವೃತ್ತದಿಂದ ಹೆಬ್ಬಾಳ ತನಕ 28.486 ಕಿಲೋ ಮೀಟರ್ ಡಬಲ್ ಡೆಕ್ಕರ್ ಮಾರ್ಗ ಹೊಂದಿರಲಿದೆ. ಇದು ಬೆಂಗಳೂರಿನ ಅತಿ ಉದ್ದದ ಫ್ಲೈಓವರ್ ಆಗಲಿದೆ.
ವಿವಿಧೆಡೆ ಡೌನ್‌ರಾಂಪ್ ನಿರ್ಮಾಣ
ಅಸ್ತಿತ್ವದಲ್ಲಿರುವ ಫ್ಲೈಓವರ್ ತೆಗೆದು, ಹೊಸದಾಗಿ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಇಲ್ಲಿ 631 ಮೀಟರ್ ಡೌನ್‌ರಾಂಪ್ ಅನ್ನು ನಿರ್ಮಿಸುವುದು ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಹೆಬ್ಬಾಳದಿಂದ ಫ್ಲೈಓವರ್ ಮೂಲಕ ವಿಮಾನ ನಿಲ್ದಾಣದ ಕಡೆಗೆ ತೆರಳಲು ಅನುಕೂಲವಾಗುವಂತೆ ಡೌನ್‌ರಾಂಪ್ ಸ್ಥಾಪಿಸಲಾಗುತ್ತದೆ.
ಇನ್ನು ಎರಡನೇ ಕಾರಿಡಾರ್ ಹೊಸಹಳ್ಳಿ- ಕಡಬಗೆರೆವರೆಗೆ ಮಾಗಡಿ ರಸ್ತೆ ಉದ್ದಕ್ಕು ನಿರ್ಮಿಸಲು ಯೋಜಿಸಲಾಗಿದೆ. ಇದರಲ್ಲಿ ಕೆಎಚ್‌ಬಿ ಕಾಲೋನಿಯಿಂದ ಕಡಬಗೆರೆವರೆಗಿನ 8.635 ಕಿಮೀ ಡಬಲ್-ಡೆಕ್ಕರ್ ತಲೆ ಎತ್ತಲಿದೆ. ಇಲ್ಲಿ ಬರುವ ಪ್ರಮುಖ ಪ್ರದೇಶಗಳಾದ ಕೆಎಚ್‌ಬಿ ಕಾಲೋನಿ, ಸುಂಕದಕಟ್ಟೆ ಮತ್ತು ಕಡಬಗೆರೆಗಳಲ್ಲಿ ಡೌನ್‌ರಾಂಪ್ ನಿರ್ಮಿಸಲಾಗುತ್ತದೆ. ಸುಂಕದಕಟ್ಟೆಯಲ್ಲಿ, ಡಿಪೋದ ಎರಡೂ ಬದಿಗಳಲ್ಲಿ ಇಳಿಜಾರುಗಳು ವಯಾಡಕ್ಟ್ ಎತ್ತರವನ್ನು ಕಡಿಮೆ ಮಾಡಿ ಸ್ಥಳೀಯರ ಸಂಚಾರಕ್ಕೆ ಅವಕಾಶ ಒದಗಿಸುವುದು ಈ ಪ್ಲಾನ್‌ನಲ್ಲಿದೆ.
ಮೆಟ್ರೋ ಕಾರಿಡಾರ್ ಪೈಕಿ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ವ್ಯಾಪ್ತಿಯಲ್ಲಿ ನೈಸ್ ರಸ್ತೆ, ಮೈಸೂರು ರಸ್ತೆ, ಸಾರಕ್ಕಿ ಜಂಕ್ಷನ್, ವಿನಾಯಕ ಬಡಾವಣೆ, ಸುಮನಹಳ್ಳಿ, ಗೊರಗುಂಟೆಪಾಳ್ಯ ಮತ್ತು ಹೆಬ್ಬಾಳ ಸೇರಿದಂತೆ ಏಳು ಸ್ಥಳಗಳಲ್ಲಿ ಸುಮಾರು 5.565 ಕಿ.ಮೀ ಡೌನ್ ಲ್ಯಾಂಪ್ ಬರಲಿದೆ. ಅದೇ ರೀತಿ ಕಾರಿಡಾರ್ 2 ರಲ್ಲಿ ನೈಸ್ ರಸ್ತೆ, ಸುಮನಹಳ್ಳಿಯಲ್ಲಿ 3.19 ಕಿಲೋ ಮೀಟರ್ ಡೌನ್‌ಲೋಪ್ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಲಾಗಿದೆ. ಇದು ಒಟ್ಟು ಅಂದಾಜು 9,692.33 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಯೋಜನೆಗೆ ರಾಜ್ಯ ಸರ್ಕಾರವೇ ಹಣ ನೀಡುತ್ತಿದೆ.












Click it and Unblock the Notifications