ಬೆಂಗಳೂರು-ತಿರುಪತಿ ಪ್ಯಾಕೇಜ್ ಮತ್ತೆ ಆರಂಭ; ದರಪಟ್ಟಿ
ಬೆಂಗಳೂರು, ಜುಲೈ 13; ಕೋವಿಡ್ ಪ್ರಕರಣಗಳು ಕಡಿಮೆಯಾಗಿ ಲಾಕ್‌ಡೌನ್ ಪೂರ್ಣಗೊಂಡಿದೆ. ಜನಜೀವನ ಸಹಜ ಸ್ಥಿತಿಗೆ ಬಂದಿದೆ. ದೇವಾಲಯಗಳು ಸಹ ಬಾಗಿಲು ತೆರೆದಿದ್ದು, ಭಕ್ತರು ದರ್ಶನ ಪಡೆಯಲು ತೆರಳುತ್ತಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು- ತಿರುಪತಿ ಪ್ಯಾಕೇಜ್ ಘೋಷಣೆ ಮಾಡಿದೆ. ಬೆಂಗಳೂರು ಕೇಂದ್ರಿಯ ವಿಭಾಗದಿಂದ ಜನರು ಅನುಕೂಲಕ್ಕಾಗಿ ಈ ಪ್ಯಾಕೇಜ್ ಪ್ರಕಟಿಸಲಾಗಿದೆ.
ಬೆಂಗಳೂರು ನಗರದ ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣದಿಂದ ತಿರುಪತಿ ಪ್ಯಾಕೇಜ್ ಬಸ್‌ಗಳು ಸಂಚಾರ ನಡೆಸಿವೆ. ಆಸಕ್ತರು ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡು ಬಸ್‌ಗಳಲ್ಲಿ ಸಂಚಾರವನ್ನು ನಡೆಸಬಹುದಾಗಿದೆ.
ಐರಾವತಿ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸೆಲ್) ಬಸ್‌ಗಳನ್ನು ತಿರುಪತಿ ಪ್ಯಾಕೇಜ್‌ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. 16/7/2021ರಿಂದ ಈ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಈ ಬಸ್‌ಗಳಲ್ಲಿ ಸಂಚಾರ ನಡೆಸಲು ಜನರು ಭಾನುವಾರದಿಂದ ಗುರುವಾರದ ತನಕ ಒಂದು ಮಾದರಿ ದರ ನೀಡಬೇಕು. ಶುಕ್ರವಾರ ಮತ್ತು ಶನಿವಾರ ಹೊರಡುವ ಬಸ್‌ಗಳಿಗೆ ಪ್ರತ್ಯೇಕ ದರವನ್ನು ನಿಗದಿ ಮಾಡಲಾಗಿದೆ.

ಯಾವ ಮಾರ್ಗದಲ್ಲಿ ಬಸ್‌ಗಳ ಸಂಚಾರ
ಶಾಂತಿನಗರದಿಂದ ಹೊರಡುವ ಬೆಂಗಳೂರು-ತಿರುಪತಿ ಪ್ಯಾಕೇಜ್ ಬಸ್ ಶಾಂತಿನಗರ, ಜಯನಗರ 4ನೇ ಬ್ಲಾಕ್, ನಾಗಸಂದ್ರ, ಎನ್. ಆರ್. ಕಾಲೋನಿ, ಕೆಂಪೇಗೌಡ ಬಸ್ ನಿಲ್ದಾಣ, ದೊಮ್ಮಲೂರು, ಮಾರತ್‌ಹಳ್ಳಿ, ಐ. ಟಿ. ಐ. ಗೇಟ್, ಕೆ. ಆರ್. ಪುರಂ, ಹೊಸಕೋಟೆ ಮಾರ್ಗವಾಗಿ ಸಂಚಾರ ನಡೆಸಲಿವೆ.

ಸ್ಯಾಟಲೈಟ್ ಬಸ್ ನಿಲ್ದಾಣದ ಮಾರ್ಗ
ಮೈಸೂರು ರಸ್ತೆಯ ಸ್ಯಾಟಲೈನ್ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳು ವಿಜಯನಗರ ಟಿಟಿಎಂಸಿ, ನವರಂಗ್, ಮಲ್ಲೇಶ್ವರ ಸರ್ಕಲ್, ಕೆಂಪೇಗೌಡ ಬಸ್ ನಿಲ್ದಾಣ, ಐ. ಟಿ. ಐ. ಗೇಟ್, ಕೆ. ಆರ್. ಪುರಂ, ಹೊಸಕೋಟೆ ಮಾರ್ಗವಾಗಿ ಸಂಚಾರ ನಡೆಸಲಿವೆ.

ಬೆಂಗಳೂರು-ತಿರುಪತಿ ಪ್ಯಾಕೇಜ್
ಬೆಂಗಳೂರು-ತಿರುಪತಿ ಪ್ಯಾಕೇಜ್‌ನಲ್ಲಿ ಎರಡು ಮಾದರಿ ದರಗಳಿವೆ. ಭಾನುವಾರದಿಂದ ಗುರುವಾರದ ತನಕ ಒಂದು ಮಾದರಿ ದರವಿದೆ. ಶುಕ್ರವಾರ ಮತ್ತು ಶನಿವಾರ ಹೊರಡುವ ಬಸ್‌ಗಳಿಗೆ ಪ್ರತ್ಯೇಕ ದರವಿದೆ.
ವಯಸ್ಕರು ಭಾನುವಾರದಿಂದ ಗುರುವಾರದ ತನಕ 2,200 ರೂ. + ಜಿಎಸ್‌ಟಿ, ಶುಕ್ರವಾರ ಮತ್ತು ಶನಿವಾರ 2,600 ರೂ. + ಜಿಎಸ್‌ಟಿ ದರವನ್ನು ಪಾವತಿಸಬೇಕು. ಮಕ್ಕಳಿಗೆ (6 ರಿಂದ 12 ವರ್ಷ) ಭಾನುವಾರದಿಂದ ಗುರುವಾ 1800 ರೂ. + ಜಿಎಸ್‌ಟಿ ಮತ್ತು ಶುಕ್ರವಾರ ಮತ್ತು ಶನಿವಾರ 2000 ರೂ. + ಜಿಎಸ್‌ಟಿ ದರವನ್ನು ಪಾವತಿಸಬೇಕು.
Recommended Video
— KSRTC (@KSRTC_Journeys) July 13, 2021 |
ಯಾವ ನಿಲ್ದಾಣದಿಂದ ಎಷ್ಟು ದರವಿದೆ?
ಬೆಂಗಳೂರು-ತಿರುಪತಿ ಪ್ಯಾಕೇಜ್‌ನಲ್ಲಿ ಒಂದು ನಿಲ್ದಾಣದಿಂದ ಒದೊಂದು ದರವಿದೆ. ಈ ದರದ ಕುರಿತು ಟ್ವೀಟ್‌ನಲ್ಲಿ ಮಾಹಿತಿ ನೀಡಲಾಗಿದೆ.












Click it and Unblock the Notifications