85 ಲಕ್ಷ ರೂ. ಪ್ಯಾಕೇಜ್‌ನ ಉದ್ಯೋಗಕ್ಕೆ ಗುಡ್‌ಬೈ! ಕಂಟೆಂಟ್ ಕ್ರಿಯೇಟರ್ ಆದ ಬೆಂಗಳೂರು ಟೆಕ್ಕಿ

ಬೆಂಗಳೂರು ಮೂಲದ ದಂಪತಿ ಹಣಕ್ಕಿಂತ ಹೆಚ್ಚಾಗಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಒಳ್ಳೆಯ ಅನುಭವಗಳೇ ಮುಖ್ಯ ಎನ್ನುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಾರ್ಷಿಕ ಬರೋಬ್ಬರಿ 85 ಲಕ್ಷ ರೂಪಾಯಿ ಪ್ಯಾಕೇಜ್ ಹೊಂದಿದ್ದ ಬೆಂಗಳೂರು ಟೆಕ್ಕಿ ಸಕ್ಷಮ್ ರಾಜ್ ಸೇಥ್ ಎಂಬುವವರು ತಮ್ಮ ಸಾಫ್ಟ್‌ವೇರ್ ಉದ್ಯೋಗವನ್ನ ಬಿಟ್ಟು, ಪೂರ್ಣಾವಧಿ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಆಗಿ ಹೊಸ ಜೀವನ ಆರಂಭಿಸಿದ್ದಾರೆ.

ಸಕ್ಷಮ್ ಅವರ ಈ ದಿಟ್ಟ ನಿರ್ಧಾರಕ್ಕೆ ಅವರ ಸಂಗಾತಿ ಸ್ಮೃತಿ ಸಿಡಾನಾ ಸಂಪೂರ್ಣ ಬೆಂಬಲ ನೀಡಿದ್ದಾರೆ. ಸ್ಮೃತಿ ಅವರು ಪ್ರಸ್ತುತ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮುಂದುವರಿಸಿದ್ದು, ತಿಂಗಳಿಗೆ 1.5 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್ ಮೂಲದ ಸಕ್ಷಮ್ ಹಾಗೂ ಹರಿಯಾಣದ ಪಾಣಿಪತ್ ಮೂಲದ ಸ್ಮೃತಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸಕ್ಷಮ್ ತಮ್ಮ ಕನಸಿನ ಬೆನ್ನೇರಿ ಹೊರಟಿದ್ದರೆ, ಅವರ ಆರ್ಥಿಕ ಭದ್ರತೆಗೆ ಸ್ಮೃತಿ ಆಧಾರ ಸ್ತಂಭವಾಗಿ ನಿಂತಿದ್ದಾರೆ.

Bengaluru Techie

85 ಲಕ್ಷ ರೂ. ಐಟಿ ಉದ್ಯೋಗ ಬಿಟ್ಟಿದ್ದೇಕೆ?

ಕೆಲಸದ ಬಗ್ಗೆ ಅಸಮಾಧಾನವಿದ್ದ ಕಾರಣಕ್ಕೆ ತಾವು ಉದ್ಯೋಗ ಬಿಟ್ಟಿಲ್ಲ ಎಂಬುದನ್ನು ಸಕ್ಷಮ್ ಸ್ಪಷ್ಟಪಡಿಸಿದ್ದಾರೆ ನೋಡಿ. "ಕೆಲಸದ ಒತ್ತಡ ಹಾಗೂ ಯಾವುದೇ ಹೊಸತನ ಇಲ್ಲದ ಜೀವನದಲ್ಲಿ ನನಗೆ ಸ್ವಾತಂತ್ರ್ಯವೇ ಇಲ್ಲದಂತಾಗಿತ್ತು. ಕೈತುಂಬಾ ಹಣ ಸಂಪಾದಿಸುತ್ತಿದ್ದರೂ, ಅದನ್ನು ಅನುಭವಿಸಲು ಸಮಯವಿರಲಿಲ್ಲ. ಹಾಗಾಗಿ, ಹಣಕ್ಕಿಂತ ಸ್ವಾತಂತ್ರ್ಯ ಮತ್ತು ಹೊಸ ಅನುಭವಗಳು ಮುಖ್ಯವೆನಿಸಿತು. ನಾವು ಈ ಹಿಂದೆಯೇ ಟ್ರಾವೆಲ್ ವಿಡಿಯೋಗಳನ್ನ ಮಾಡುತ್ತಿದ್ದೆವು. ಇದೀಗ ಅದನ್ನೇ ಫುಲ್‌ ಟೈಮ್‌ ವೃತ್ತಿಯನ್ನಾಗಿಸಿಕೊಳ್ಳುವ ರಿಸ್ಕ್ ತೆಗೆದುಕೊಂಡಿದ್ದೇನೆ" ಎನ್ನುತ್ತಾರೆ ಸಕ್ಷಮ್.

ತಿಂಗಳಾಂತ್ಯಕ್ಕೆ ಸಂಬಳ ಬರುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗವನ್ನ ಬಿಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪ್ರಸ್ತುತ ಕಂಟೆಂಟ್ ಕ್ರಿಯೇಷನ್ ಮೂಲಕ ಬರುತ್ತಿರುವ ಆದಾಯ ಅವರ ಹಿಂದಿನ ಸಂಬಳದ ಹತ್ತಿರಕ್ಕೂ ಇಲ್ಲ. "ಇದೊಂದು ದೊಡ್ಡ ಆರ್ಥಿಕ ಸವಾಲು. ಇಲ್ಲಿ ಯಾವುದೇ ನಿಶ್ಚಿತ ವೇತನವಿಲ್ಲ, ಖಚಿತ ಬೆಳವಣಿಗೆಯ ಭರವಸೆಯೂ ಇಲ್ಲ. ನಿರಂತರವಾಗಿ ವಿಡಿಯೋಗಳನ್ನ ಚಿತ್ರೀಕರಿಸುವುದು, ಎಡಿಟಿಂಗ್ ಮಾಡುವುದು ಹಾಗೂ ಬ್ರ್ಯಾಂಡ್‌ಗಳ ಜೊತೆ ವ್ಯವಹರಿಸುವುದು ನಿಜಕ್ಕೂ ಶ್ರಮದಾಯಕ ಕೆಲಸ" ಎಂದು ಅವರು ತಮ್ಮ ಸವಾಲುಗಳನ್ನ ಬಿಚ್ಚಿಟ್ಟಿದ್ದಾರೆ.

ಕೇವಲ ಪ್ರವಾಸ ಮಾಡುವುದಷ್ಟೇ ಅಲ್ಲದೆ, ಅದನ್ನು ಸುಸ್ಥಿರ ವೃತ್ತಿಯನ್ನಾಗಿ ರೂಪಿಸಿಕೊಳ್ಳುವುದು ಅವರ ಮುಂದಿರುವ ದೊಡ್ಡ ಗುರಿ.

ತಮ್ಮ ಈ ನಡೆ ಎಲ್ಲರಿಗೂ ಮಾದರಿಯಲ್ಲ ಎಂಬುದನ್ನೂ ಈ ದಂಪತಿ ಒಪ್ಪಿಕೊಳ್ಳುತ್ತಾರೆ. ಆರ್ಥಿಕ ಭದ್ರತೆ ಇಲ್ಲದೆ ದಿಢೀರ್ ಎಂದು ಉದ್ಯೋಗ ಬಿಡುವುದು ಸರಿಯಾದ ನಿರ್ಧಾರವಲ್ಲ ಎಂದು ಅವರು ಎಚ್ಚರಿಸಿದ್ದಾರೆ. "ನಮ್ಮ ಬಳಿ ಆರ್ಥಿಕವಾಗಿ ರಿಸ್ಕ್ ತೆಗೆದುಕೊಳ್ಳುವ ಅವಕಾಶವಿತ್ತು. ಕೈತುಂಬಾ ಸಂಬಳ ಬರುವುದು ಮಾತ್ರವೇ ಯಶಸ್ವಿ ಜೀವನವಲ್ಲ. ನಮ್ಮಿಷ್ಟದಂತೆ ಬದುಕಲು ನಮಗೆ ಸಮಯ ಸಿಗುತ್ತಿದೆಯೇ ಎಂಬುದು ಮುಖ್ಯ. ಹಣ ಕಡಿಮೆ ಬಂದರೂ ಪರವಾಗಿಲ್ಲ, ನಾವು ಆಯ್ದುಕೊಂಡಿರುವ ಈ ಹಾದಿಯಲ್ಲಿ ಸಂತೋಷ ಕಂಡುಕೊಳ್ಳುತ್ತಿದ್ದೇವೆ" ಎಂದು ಈ ದಂಪತಿ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+