ತಿಂಗಳಿಗೆ 3.5 ಲಕ್ಷ ರೂ. ಸಂಬಳವಿದ್ದರೂ ಉಳಿತಾಯ ಕೇವಲ 50 ಸಾವಿರ! ಬೆಂಗಳೂರು ಟೆಕ್ಕಿಯ ಕಥೆ ವೈರಲ್

ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳಿಗೆ ಕೈತುಂಬಾ ಸಂಬಳ ಸಿಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಐಷಾರಾಮಿ ಜೀವನ, ದೊಡ್ಡ ದೊಡ್ಡ ಮನೆ, ಕಾರು ಇದೆಲ್ಲವನ್ನು ನೋಡಿ ಇದ್ರೆ ಐಟಿ ಮಂದಿ ತರ ಇರಬೇಕು ಎಂದು ಹೊರಗಿನವರು ಅಂದುಕೊಳ್ಳುತ್ತಾರೆ. ಆದರೆ, ಈ ಐಟಿ ಮಂದಿಗೆ ಲಕ್ಷ ಲಕ್ಷ ಆದಾಯವಿದ್ದರೂ ತಿಂಗಳಾಂತ್ಯಕ್ಕೆ ಅವರ ಜೇಬು ಖಾಲಿಯಾಗುತ್ತದೆ ಎಂಬ ವಾಸ್ತವವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.

ಇದೀಗ ಬೆಂಗಳೂರಿನ 34 ವರ್ಷದ ಸಾಫ್ಟ್‌ವೇರ್ ವೃತ್ತಿಪರರೊಬ್ಬರು ಹಂಚಿಕೊಂಡಿರುವ ತಮ್ಮ ಆರ್ಥಿಕ ಸಂಕಷ್ಟದ ಕಥೆ ಆನ್‌ಲೈನ್‌ನಲ್ಲಿ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ. ತಿಂಗಳಿಗೆ ಬರೋಬ್ಬರಿ 3.5 ಲಕ್ಷ ರೂಪಾಯಿ ಸ್ಯಾಲರಿ ಪಡೆಯುತ್ತಿರುವ ಈ ಟೆಕ್ಕಿ, ತನಗೆ ಏನನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೆಡ್ಡಿಟ್‌ನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Bengaluru Techie

ಬೆಂಗಳೂರಿನಲ್ಲಿ ಜೀವನ ವೆಚ್ಚವೇ ದುಬಾರಿ

ಬೆಂಗಳೂರಿನಂತಹ ಮಹಾನಗರಗಳಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದ್ದು, ಅಂದುಕೊಂಡಂತೆ ಗುಣಮಟ್ಟದ ಜೀವನ ಸಾಗಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ರೆಡ್ಡಿಟ್‌ನಲ್ಲಿ ತಮ್ಮ ಕಥೆ ಹಂಚಿಕೊಂಡಿರುವ ಈ ಟೆಕ್ಕಿಗೆ ನಾಲ್ಕು ವರ್ಷದ ಅವಳಿ ಹೆಣ್ಣು ಮಕ್ಕಳಿದ್ದಾರೆ. ಇವರ ವಾರ್ಷಿಕ ಸ್ಯಾಲರಿ ಪ್ಯಾಕೇಜ್ ಬರೋಬ್ಬರಿ 96 ಲಕ್ಷ ರೂಪಾಯಿಗಳು! ಆದರೆ, ಇದರಲ್ಲಿ 35 ಲಕ್ಷ ರೂಪಾಯಿಗಳು ಸ್ಟಾರ್ಟ್‌ಅಪ್ ಕಂಪನಿಯ ಇಎಸ್‌ಒಪಿ ರೂಪದಲ್ಲಿದ್ದು, ಅದನ್ನು ದಿನನಿತ್ಯದ ಆದಾಯ ಎಂದು ಹೇಳಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಸ್ಯಾಲರಿಯಲ್ಲಿ ಎಲ್ಲಾ ಕಡಿತವಾಗಿ ನಂತರ ಇವರ ಕೈಗೆ ತಿಂಗಳಿಗೆ 3.5 ಲಕ್ಷ ರೂ. ನಗದು ಸಂಬಳ ಸಿಗುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಸ್ಯಾಲರಿ ಇದ್ದರೂ, ಮನೆ ಖರ್ಚು, ಮಕ್ಕಳ ಪಾಲನೆ ಮತ್ತು ಇಎಂಐ ಕಟ್ಟಿದ ನಂತರ ಇವರ ಬಳಿ ಉಳಿಯುವುದು ಕೇವಲ 45 ರಿಂದ 50 ಸಾವಿರ ರೂಪಾಯಿ ಮಾತ್ರ.

ಐಟಿ ಉದ್ಯೋಗಿಯ ಹಣಕಾಸು ನಿರ್ವಹಣೆ ಮತ್ತು ಖರ್ಚಿನ ಲೆಕ್ಕಾಚಾರ

ಸಂಬಳ ಹೆಚ್ಚಾದಂತೆ ಜನರ ಜೀವನಶೈಲಿಯೂ ಬದಲಾಗುತ್ತದೆ ಎಂಬುದಕ್ಕೆ ಈ ಟೆಕ್ಕಿ ಹಂಚಿಕೊಂಡಿರುವ ತಿಂಗಳ ಖರ್ಚಿನ ವಿವರವೇ ಸಾಕ್ಷಿ. ಇವರ ಒಟ್ಟು ಆದಾಯದಲ್ಲಿ ಮನೆ ಸಾಲದ ಇಎಂಐಗೆ 80,000 ಹಾಗೂ ಕಾರಿನ ಸಾಲಕ್ಕೆ 30,000 ಖರ್ಚಾಗುತ್ತಿದೆ.
ದಂಪತಿಗಳಿಬ್ಬರೂ ಕೆಲಸಕ್ಕೆ ಹೋಗುವುದರಿಂದ ಮಕ್ಕಳನ್ನು ನೋಡಿಕೊಳ್ಳುವ ಆಯಾಗೆ 40,000 ಮತ್ತು ಪ್ರಿಸ್ಕೂಲ್ ಹಾಗೂ ಡೇ-ಕೇರ್‌ಗಾಗಿ 50,000 ನೀಡುತ್ತಿದ್ದಾರೆ. ಹೀಗಾಗಿ, ಇವರ ತಿಂಗಳ ಬಜೆಟ್‌ನ ಬಹುದೊಡ್ಡ ಭಾಗ ಸಾಲದ ಮರುಪಾವತಿ ಮತ್ತು ಮಕ್ಕಳ ಪಾಲನೆಗೇ ವೆಚ್ಚವಾಗುತ್ತಿದೆ.

ಇನ್ನು ದಿನಸಿ, ಮನೆಗೆಲಸದವರ ಸಂಬಳ, ವಿದ್ಯುತ್-ನೀರಿನ ಬಿಲ್, ಫಿಟ್‌ನೆಸ್ ಹಾಗೂ ಕುಟುಂಬದ ವಾರಾಂತ್ಯದ ಪ್ರವಾಸದಂತಹ ಇತರ ಖರ್ಚುಗಳೂ ಇವೆ. ಅವರ ಒಟ್ಟು ಆಸ್ತಿಯ ಮೌಲ್ಯ ಸರಿಸುಮಾರು 3 ಕೋಟಿ ರೂ.ಗಳಷ್ಟಿದ್ದರೂ, ಭವಿಷ್ಯದ ಆರ್ಥಿಕ ಭದ್ರತೆ ಮತ್ತು ಉದ್ಯೋಗದ ಭದ್ರತೆಯ ಬಗ್ಗೆ ಅವರಿಗೆ ತೀವ್ರ ಆತಂಕವಿದೆ.

ನೆಟ್ಟಿಗರಿಂದ ಕಮೆಂಟ್‌ಗಳ ಸುರಿಮಳೆ

ಟೆಕ್ಕಿಯ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ. ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಸಾಕುವುದು ಮತ್ತು ದೊಡ್ಡ ಸಾಲಗಳನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂಬುದನ್ನು ಅರ್ಥಮಾಡಿಕೊಂಡ ಹಲವರು ಇವರ ಪರಿಸ್ಥಿತಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಇತರರು ಬೇರೆಯದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮನೆ ಸಾಲದ ಹಣವು ಭವಿಷ್ಯದ ಆಸ್ತಿಯಾಗಿ ಬದಲಾಗುವುದರಿಂದ ಅದನ್ನು ಕೇವಲ "ಖರ್ಚು" ಎನ್ನಲು ಬರಲ್ಲ ಎಂದು ಅವರು ವಾದಿಸಿದ್ದಾರೆ. ಅಲ್ಲದೆ, ಸ್ವಂತ ಮನೆ ಹೊಂದಿ, ಇಷ್ಟೆಲ್ಲಾ ವೆಚ್ಚಗಳ ನಡುವೆಯೂ ತಿಂಗಳಿಗೆ 50,000 ರೂ. ಉಳಿತಾಯ ಮಾಡುತ್ತಿರುವುದು ಅವರ ಆರ್ಥಿಕ ಸ್ಥಿತಿಯನ್ನು ತೋರಿಸುತ್ತದೆ; ಇದು ಎಷ್ಟೋ ಸಾಮಾನ್ಯ ಕುಟುಂಬಗಳಿಗಿಂತ ಉತ್ತಮವಾದ ಪರಿಸ್ಥಿತಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಬೆಂಗಳೂರಿನಂತಹ ನಗರಗಳಲ್ಲಿ ಶಿಕ್ಷಣ, ವಸತಿ ಮತ್ತು ಜೀವನಶೈಲಿಯ ವೆಚ್ಚಗಳು ಗಗನಕ್ಕೇರುತ್ತಿವೆ. ವೇತನ ಎಷ್ಟೇ ಇದ್ದರೂ, ನಿರೀಕ್ಷೆಗಳು ಮತ್ತು ಜವಾಬ್ದಾರಿಗಳು ಹೆಚ್ಚಾದಾಗ ಆರ್ಥಿಕ ಒತ್ತಡ ತಪ್ಪಿದ್ದಲ್ಲ ಎಂಬುದನ್ನು ಈ ಘಟನೆ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+