ಕೆಲಸ ಹೋದರೆ ಕ್ಷಣಾರ್ಧದಲ್ಲಿ ಡೇಟಾ ಡಿಲೀಟ್: ವೈರಲ್ ಆಗುತ್ತಿದೆ ಬೆಂಗಳೂರು ಟೆಕ್ಕಿಯ ‘I GOT FIRED’ ಬಟನ್

ಬೆಂಗಳೂರು: ಟೆಕ್ ಉದ್ಯಮದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ)ಯಿಂದಾಗಿ ಲೇಆಫ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆ, ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಸಿದ್ಧಪಡಿಸಿರುವ "ಐ ಗಾಟ್ ಫೈರ್ಡ್" (I GOT FIRED) ಎಂಬ ವಿಶಿಷ್ಟ ಬಟನ್ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಡಿಜಿಟಲ್ ಲೋಕದಲ್ಲಿ ಕ್ಷಣಾರ್ಧದಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸುವ ಈ ಬಟನ್ ಅನ್ನು ಕೇವಲ ತಮಾಷೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪಂಕಜ್ ತನ್ವಾರ್ ಎಂಬುವವರು ಈ ವಿಶಿಷ್ಟ ಆವಿಷ್ಕಾರವನ್ನು ಮಾಡಿದ್ದು, ಎಕ್ಸ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ವಿಚಿತ್ರ ಹಾಗೂ ಹಾಸ್ಯಮಯ ಟೆಕ್ ಆವಿಷ್ಕಾರಗಳಿಗೆ ಆನ್‌ಲೈನ್‌ನಲ್ಲಿ ಹೆಸರಾಗಿರುವ ಪಂಕಜ್, ಪ್ರಸ್ತುತ ಟೆಕ್ ಉದ್ಯಮದಲ್ಲಿರುವ ಅನಿಶ್ಚಿತತೆಯ ವಾತಾವರಣಕ್ಕೆ ಕನ್ನಡಿ ಹಿಡಿಯುವಂತೆ ಈ ಬಟನ್ ರೂಪಿಸಿದ್ದಾರೆ.

Bengaluru Techie

ತಮ್ಮ ಪೋಸ್ಟ್‌ನಲ್ಲಿ ಆಟೊಮೇಷನ್ ಯುಗದಲ್ಲಿ ಉದ್ಯೋಗದ ಅಭದ್ರತೆಯ ಬಗ್ಗೆ ವ್ಯಂಗ್ಯವಾಡಿರುವ ಅವರು, "ಎಐ ಲೇಆಫ್‌ಗಳು ಮಿತಿಮೀರುತ್ತಿವೆ, ಹೀಗಾಗಿ ನಾನು 'I GOT FIRED' ಬಟನ್ ಅನ್ನು ನಿರ್ಮಿಸಿದ್ದೇನೆ. ಇದರ ಮೇಲೆ ಒಂದು ಕ್ಲಿಕ್ ಮಾಡಿದರೆ ಸಾಕು, ಅದು ಕಂಪನಿಯ ಇಡೀ ಕೋಡ್‌ಬೇಸ್ ಅನ್ನು ಸಾರ್ವಜನಿಕಗೊಳಿಸುತ್ತದೆ, .env ಸೀಕ್ರೆಟ್‌ಗಳನ್ನು ಪಬ್ಲಿಕ್ ರೆಪೊಸಿಟರಿಗೆ ಪುಶ್ ಮಾಡುತ್ತದೆ, ಸ್ಟೇಜಿಂಗ್ ಡೇಟಾಬೇಸ್ ಅನ್ನು ಡಿಲೀಟ್ ಮಾಡುತ್ತದೆ ಮತ್ತು ಅಂತಿಮವಾಗಿ ನನ್ನ ವಕೀಲರಿಗೆ ನೋಟಿಫಿಕೇಶನ್ ಕಳುಹಿಸುತ್ತದೆ," ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಪೋಸ್ಟ್‌ನ ಕೊನೆಯಲ್ಲಿ "ನನಗೆ ಇದರ ಅಗತ್ಯ ಎಂದಿಗೂ ಬೀಳದಿರಲಿ ಎಂದು ಭಾವಿಸುತ್ತೇನೆ, ಆದರೆ ಇದು ಸಿದ್ಧವಾಗಿದೆ," ಎಂದು ಅವರು ಹಾಸ್ಯಭರಿತ ಎಚ್ಚರಿಕೆ ನೀಡಿದ್ದಾರೆ. ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾದ ಚಿತ್ರಗಳಲ್ಲಿ, ಲ್ಯಾಪ್‌ಟಾಪ್‌ನ ಪಕ್ಕದಲ್ಲಿ ಒಂದು ಸಣ್ಣ ಹಾರ್ಡ್‌ವೇರ್ ಡಿವೈಸ್ ಇದ್ದು, ಅದರ ಮೇಲೆ ಬೆರಳು ಇಟ್ಟಿರುವ ದೃಶ್ಯವಿದೆ. ಈ ಡಿವೈಸ್‌ನಲ್ಲಿ "ಗ್ಯಾಸ್‌ಲೈಟ್ ದೆಮ್" (Gaslight Them) ಮತ್ತು "ಡಿಕೋಡ್ ಕಾರ್ಪೊರೇಟ್ ಬಿಎಸ್" (Decode Corporate BS) ಎಂಬ ಇತರ ಬಟನ್‌ಗಳೂ ಇವೆ. ಆದರೆ, ಕೆಂಪು ಬಣ್ಣದಲ್ಲಿ ಹೈಲೈಟ್ ಆಗಿರುವ 'I GOT FIRED' ಬಟನ್ ಎಲ್ಲರ ಗಮನ ಸೆಳೆದಿದೆ.

ಇದರ ಜೊತೆಗೆ ಪರದೆಯ ಮೇಲೆ "ಔಟ್ ಆಫ್ ಆಫೀಸ್: ಪರ್ಮನೆಂಟ್ಲಿ. ಕಾಂಟ್ಯಾಕ್ಟ್ ಮೈ ಲಾಯರ್" (ಶಾಶ್ವತವಾಗಿ ರಜೆಯಲ್ಲಿದ್ದೇನೆ, ನನ್ನ ವಕೀಲರನ್ನು ಸಂಪರ್ಕಿಸಿ) ಎಂಬ ಎಚ್ಚರಿಕೆಯ ಸಂದೇಶ ಮೂಡಿಬಂದಿರುವ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಳ್ಳಲಾಗಿದೆ. ಈ ಸೆಟಪ್ ನೋಡಲು ಹಾಲಿವುಡ್‌ನ ಟೆಕ್ ಥ್ರಿಲ್ಲರ್ ಸಿನಿಮಾದ ದೃಶ್ಯದಂತಿದ್ದು, ಹತಾಶೆಗೊಂಡ ಉದ್ಯೋಗಿಯ ಪ್ರತೀಕಾರದ ಕಲ್ಪನೆಯಂತೆ ಭಾಸವಾಗುತ್ತದೆ.

ಈ ಪೋಸ್ಟ್ ಕೇವಲ ವಿಡಂಬನೆ ಎಂದು ಹೆಚ್ಚಿನ ವೀಕ್ಷಕರಿಗೆ ಅರ್ಥವಾದರೂ, ಇದು ಟೆಕ್ ಉದ್ಯಮದಲ್ಲಿ ಹೆಚ್ಚುತ್ತಿರುವ ಕೆಲಸದ ಒತ್ತಡ, ಲೇಆಫ್‌ಗಳು ಹಾಗೂ ಆತಂಕದ ಕುರಿತು ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಆಟೊಮೇಷನ್ ಹೆಚ್ಚಾದಂತೆ, ಉದ್ಯೋಗಿಗಳನ್ನು ಸುಲಭವಾಗಿ ತೆಗೆದುಹಾಕುವ ಪ್ರವೃತ್ತಿ ಬೆಳೆಯುತ್ತಿರುವುದು ಆತಂಕಕಾರಿ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಮಂದಿ ಇದಕ್ಕೆ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದು, ಅಸ್ಥಿರ ಉದ್ಯೋಗ ಮಾರುಕಟ್ಟೆಯಲ್ಲಿ ಸಿಲುಕಿರುವ ಟೆಕ್ ಉದ್ಯೋಗಿಗಳ ಪಾಲಿನ 'ಡೆಡ್ ಮ್ಯಾನ್ಸ್ ಸ್ವಿಚ್' ಎಂದು ಬಣ್ಣಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+