Get Updates
Get notified of breaking news, exclusive insights, and must-see stories!

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ: 32 ಸಾವಿರ ಮರಕ್ಕೆ ಕೊಡಲಿ

ಬೆಂಗಳೂರು, ಏಪ್ರಿಲ್ 28: ನಮ್ಮ ಮೆಟ್ರೋ ಬಳಿಕ ಬೆಂಗಳೂರು ಉಪ ನಗರ ರೈಲು (ಸಬ್ ಅರ್ಬನ್) ಯೋಜನೆ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟು 4 ಕಾರಿಡಾರ್‌ಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ.

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗಾಗಿ 32,572 ಮರಗಳನ್ನು ಗುರುತಿಸಲಾಗಿದೆ. ಈಗಾಗಲೇ ನಮ್ಮ ಮೆಟ್ರೋ ಯೋಜನೆಗಾಗಿ ಬೆಂಗಳೂರು ನಗರದಲ್ಲಿ 6,600 ಮರಗಳನ್ನು ಕಡಿಯಲಾಗಿದೆ. ಈಗ ಮತ್ತೆ ಮರಗಳನ್ನು ಕಡಿಯಬೇಕಿದೆ.

Bengaluru Suburban Rail Project 35 527 Trees Identified For Removal

ಯಾವ ಕಾರಿಡಾರ್‌ನಲ್ಲಿ ಎಷ್ಟು?; ಸಬ್ ಅರ್ಬನ್ ರೈಲು ಯೋಜನೆಯ ಕೆಎಸ್ಆರ್ ಬೆಂಗಳೂರು-ಯಲಹಂಕ-ದೇವನಹಳ್ಳಿ ಮಾರ್ಗಕ್ಕಾಗಿ 7,198. ಬೈಯಪ್ಪನಹಳ್ಳಿ-ಚಿಕ್ಕಬಣಾವರ ಮಾರ್ಗಕ್ಕಾಗಿ 3,469, ಕೆಂಗೇರಿ-ಕಂಟೋನ್ಮೆಂಟ್-ವೈಟ್‌ಫೀಲ್ಡ್ ಮಾರ್ಗಕ್ಕಾಗಿ 2072 ಮತ್ತು ಹೀಗಲಿಗೆ-ರಾಜನಕುಂಟೆ ಮಾರ್ಗಕ್ಕಾಗಿ 2,306 ಮರಗಳನ್ನು ಗುರುತಿಸಲಾಗಿದೆ.

ಸಬ್ ಅರ್ಬನ್ ರೈಲು ಮಾರ್ಗಕ್ಕಾಗಿ 15,045 ಮರಗಳು. ಡಿಪೋಗಳಿಗಾಗಿ 17,505 ಮರಗಳನ್ನು ಕಡಿಯಲಾಗುತ್ತದೆ. ಕೆಲವು ಮರಗಳು ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿವೆ. ಕೆಲವು ಖಾಸಗಿ ಜಮೀನು ಮತ್ತು ಕೆಲವು ಬಿಬಿಎಂಪಿ ಪ್ರದೇಶಕ್ಕೆ ಒಳಪಡುತ್ತವೆ.

ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಭವಿಷ್ಯದಲ್ಲಿ ಸಬ್ ಅರ್ಬನ್ ರೈಲು ಯೋಜನೆ ಸಹಕಾರಿ ಎಂದು ಅಂದಾಜಿಸಲಾಗಿದೆ. ಆದರೆ ಈ ಯೋಜನೆಗಾಗಿ ಉದ್ಯಾನ ನಗರಿಯ 32,572 ಮರಗಳನ್ನು ಕಡಿಯುವುದಕ್ಕೆ ಪರಿಸರವಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸಾರ್ವಜನಿಕ ಸಾರಿಗೆ ಉತ್ತಮಪಡಿಸಲು ಸಬ್ ಅರ್ಬನ್ ರೈಲು ಯೋಜನೆ ಅಗತ್ಯವಿದೆ. ಆದರೆ ಇಷ್ಟು ಮರಗಳನ್ನು ಕಡಿದರೆ ಜೀವ ವೈವಿದ್ಯತೆ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆಯೂ ಆಲೋಚಿಸಬೇಕು. ಮಾಲಿನ್ಯದಿಂದ ನಗರವನ್ನು ರಕ್ಷಣೆ ಮಾಡಿ, ಆಮ್ಲಜನಕ ನೀಡುವಲ್ಲಿ ಮರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪರಿಸರವಾದಿಗಳು ಹೇಳಿದ್ದಾರೆ.

ಒಂದು ಮರ ಕಡಿದರೆ ಅದಕ್ಕೆ ಬದಲಾಗಿ 10 ಗಿಡಗಳನ್ನು ನಡೆಬೇಕು ಎಂದು ನಿಯಮವಿದೆ. ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಅನುಷ್ಠಾನಗೊಳಿಸುತ್ತಿರುವ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಬಳಿ ಇದಕ್ಕಾಗಿಯೇ ಅನುದಾನವಿದೆ.

ಮರಗಳನ್ನು ಕಡಿಯುವುದು ಮಾತ್ರವಲ್ಲ ಹೊಸ ಗಿಡಗಳನ್ನು ನೆಡುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ. ನಗರದ ಜೀವವೈವಿದ್ಯತೆ ಉಳಿಸಲು ಎಲ್ಲಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಲಾಗಿದೆ.

ಉದ್ಯಾನ ನಗರಿಯ ಸಂಚಾರ ದಟ್ಟಣೆಗೆ ಪರಿಹಾರ ಎಂದು ಅಂದಾಜಿಸಿರುವ ಸಬ್ ಅರ್ಬನ್ ರೈಲು ಯೋಜನೆ ನಗರದ ಜನರ 4 ದಶಕಗಳ ಕನಸು. 1983ರಲ್ಲಿಯೇ ಉಪ ನಗರ ಸಂಪರ್ಕ ಯೋಜನೆ ಪ್ರಸ್ತಾವನೆ ಸಿದ್ಧವಾಗಿತ್ತು. 2019ರಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಇದನ್ನು ಪ್ರಸ್ತಾಪಿಸಿತು.

2021ರಲ್ಲಿ ರೈಲ್ವೆ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿತು. 2022ರ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. 2022ರ ಡಿಸೆಂಬರ್‌ನಲ್ಲಿ ನೈಋತ್ಯ ರೈಲ್ವೆ ಕೆ-ರೈಡ್‌ಗೆ ಯೋಜನೆಗಾಗಿ 157 ಎಕರೆ ಭೂಮಿ ಹಸ್ತಾಂತರ ಮಾಡಿತ್ತು. ಬಳಿಕ ಕಾಮಗಾರಿ ಆರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಯಿತು.

2023ರ ಜನವರಿಯಲ್ಲಿ ಸಬ್ ಅರ್ಬನ್ ರೈಲು ಯೋಜನೆಯ 2ನೇ ಕಾರಿಡಾರ್ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. ಸಬ್ ಅರ್ಬನ್ ರೈಲು ಯೋಜನೆ ಕಾರಿಡಾರ್-1 ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ, ಕಾರಿಡಾರ್-2 ಬೈಯಪ್ಪನಹಳ್ಳಿ-ಚಿಕ್ಕಬಣಾವರ, ಕಾರಿಡಾರ್-3 ಕೆಂಗೇರಿ-ವೈಟ್‌ಫೀಲ್ಡ್‌ ಮತ್ತು ಕಾರಿಡಾರ್-4 ಹೀಲಲಿಗೆ-ರಾಜನಕುಂಟೆ ನಡುವೆ ಸಂಪರ್ಕ ಕಲ್ಪಿಸುತ್ತದೆ. 2026ಕ್ಕೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+