ಬೆಂಗಳೂರು ಪಾಲಿಕೆಗೊಂದು ಪ್ರಾಣಿ ಚಿತಾಗಾರ ನಿರ್ಮಾಣ: ಸಚಿವರು ಹೇಳಿದ್ದೇನು?

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸತ್ತ ಪ್ರಾಣಿಗಳ ಕಳೇಬರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಸುಸಜ್ಜಿತ ಪ್ರಾಣಿ ಚಿತಾಗಾರವನ್ನು ಶೀಘ್ರವೇ ಸ್ಥಾಪಿಸಲು ಸಚಿವ ಕೃಷ್ಣ ಬೈರೇಗೌಡರು ಸೂಚಿಸಿದ್ದಾರೆ. ಈ ಸಂಬಂಧ ಪಾಲಿಕೆ ವತಿಯಿಂದ ತುರ್ತುಗಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ಹೇಳಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 05 ನಗರ ಪಾಲಿಕೆಗಳಲ್ಲಿ, ಪಾಲಿಕೆಗೊಂದರಂತೆ ಸತ್ತ ಪ್ರಾಣಿಗಳ ಕಳೇಬರವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪ್ರಾಣಿಗಳ ಚಿತಾಗಾರಗಳನ್ನು ಸ್ಥಾಪಿಸುವಂತೆ ಗ್ರೇಟರ್ ಬೆಂಗಳೂರು ಸಚಿವರಾದ ಕೃಷ್ಣ ಬೈರೇಗೌಡ ರವರು ನೀಡಿದ್ದ ಸೂಚನೆ ಮೇರೆಗೆ, ಪಾಲಿಕೆ ವ್ಯಾಪ್ತಿಯಲ್ಲಿ ನೂತನ ಚಿತಾಗಾರ ಸ್ಥಾಪನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

Animal Crematorium

ತಜ್ಞರು, ಅನುಭವಿ ಸಂಸ್ಥೆಗಳ ಜತೆ ಸಮಾಲೋಚನೆ

ಯೋಜನೆಯ ಅನುಷ್ಠಾನದ ಕುರಿತು ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು. ಈಗಾಗಲೇ ಪ್ರಾಣಿ ಚಿತಾಗಾರಗಳನ್ನು ಸ್ಥಾಪಿಸಿ ನಿರ್ವಹಿಸುತ್ತಿರುವ ಅನುಭವವುಳ್ಳ ಸಂಸ್ಥೆಗಳು ಹಾಗೂ ತಜ್ಞರೊಂದಿಗೆ ಚರ್ಚೆ ನಡೆಸಲಾಯಿತು. ಚಿತಾಗಾರಕ್ಕೆ ಬೇಕಾಗುವ ಜಾಗದ ವಿಸ್ತೀರ್ಣ, ನಕ್ಷೆ, ವಿದ್ಯುತ್, ಎಲ್‌ಪಿಜಿ, ಸಿಎನ್‌ಜಿ ಅಥವಾ ಹೈಬ್ರಿಡ್ ಇಂಧನ ವ್ಯವಸ್ಥೆ, ನಿರ್ಮಾಣದ ಅಂದಾಜು ವೆಚ್ಚ ಹಾಗೂ ಕಾಲಮಿತಿ, ಪ್ರತಿ ಕಳೇಬರದ ದಹನಕ್ಕೆ ತಗಲುವ ವೆಚ್ಚ, ದಿನವೊಂದಕ್ಕೆ ದಹನ ಮಾಡಬಹುದಾದ ಪ್ರಾಣಿಗಳ ಸಂಖ್ಯೆ ಮತ್ತು ಸಂಬಂಧಿತ ಇಲಾಖೆಗಳಿಂದ ಪಡೆಯಬೇಕಾದ ಶಾಸನಬದ್ಧ ಅನುಮೋದನೆಗಳ ಕುರಿತು ವಿಸ್ತೃತವಾಗಿ ಆಯುಕ್ತರು ಪರಿಶೀಲನೆ ನಡೆಸಿದರು.

ಎಸ್. ಬಿಂಗೀಪುರ ಬಳಿ ಸ್ಥಳ ಗುರುತು

ಜಿಗಣಿ ಹೋಬಳಿಯ ಎಸ್. ಬಿಂಗಿಪುರದಲ್ಲಿನ ಬೇಗೂರು-ಕೊಪ್ಪ ಮುಖ್ಯರಸ್ತೆಯಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ನೂತನ ಪ್ರಾಣಿ ಚಿತಾಗಾರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ 2026-27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅಗತ್ಯ ವೆಚ್ಚದ ಹಣವನ್ನು ಕಾಯ್ದಿರಿಸಲಾಗಿದೆ ಎಂದು ಮಾಹಿತಿ ಕೊಟ್ಟರು.

ತ್ವರಿತವಾಗಿ ಟೆಂಡರ್ ಪ್ರಕ್ರಿಯೆಗೆ ಆಯುಕ್ತರ ಸೂಚನೆ

ಸಾರ್ವಜನಿಕರಿಂದ ಹಾಗೂ ಪ್ರಾಣಿ ಪ್ರಿಯರಿಂದ ಈ ಭಾಗದಲ್ಲಿ ಪ್ರಾಣಿ ಚಿತಾಗಾರ ಸ್ಥಾಪನೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವುದರಿಂದ, ಯಾವುದೇ ವಿಳಂಬವಿಲ್ಲದೆ ತ್ವರಿತಗತಿಯಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.

ರಸ್ತೆಗಳ ಸ್ಥಿತಿಗತಿ ಬಗ್ಗೆ ಎಐ ಸರ್ವೇ

ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ, ನಗರ ಪಾಲಿಕೆ ವ್ಯಾಪ್ತಿಯ 7 ವಿಭಾಗಗಳ 72 ವಾರ್ಡ್‌ಗಳಲ್ಲಿ ಒಟ್ಟು 2,493.5 ಕಿ.ಮೀ. ರಸ್ತೆಗಳ ಸ್ಥಿತಿಗತಿಯನ್ನು ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಬಳಸಿ ಸಮಗ್ರವಾಗಿ ಸಮೀಕ್ಷೆ ನಡೆಸಲಾಗಿದೆ. ಡ್ಯಾಶ್‌ಕ್ಯಾಮ್ ಮೂಲಕ ಸಂಗ್ರಹಿಸಲಾದ ನೈಜ ರಸ್ತೆ ಚಿತ್ರಗಳನ್ನು ಆಧರಿಸಿ, ರಸ್ತೆ ಮೇಲ್ಮೈಯ ಸ್ಥಿತಿ, ರಸ್ತೆ ಗುಂಡಿಗಳು, ದುರಸ್ತಿ ಅಗತ್ಯವಿರುವ ಸ್ಥಳಗಳು ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳಿಂದ ಉಂಟಾದ ರಸ್ತೆ ಹಾನಿ ಸೇರಿದಂತೆ ವಿವಿಧ ಅಂಶಗಳ ಮಾಹಿತಿ ಸಂಗ್ರಹಿಸಲಾಗಿದೆ.

ಪಾಲಿಕೆ ವ್ಯಾಪ್ತಿಯ ರಸ್ತೆ ಜಾಲದ ಪ್ರಸ್ತುತ ಸ್ಥಿತಿಯನ್ನು ಸಮಗ್ರವಾಗಿ ಗುರುತಿಸುವುದರ ಜೊತೆಗೆ, ಯಾವ ಪ್ರದೇಶಗಳಲ್ಲಿ ರಸ್ತೆ ನಿರ್ವಹಣೆ, ದುರಸ್ತಿ, ಪುನಃಸ್ಥಾಪನೆ ಅಥವಾ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬುದನ್ನು ಗುರುತಿಸಲು ತಂತ್ರಜ್ಞಾನ ಬಳಸಲಾಗಿದೆ ಎಂದರು.

ಶೇ.82.1ರಷ್ಟು ರಸ್ತೆಗಳು ಸ್ಥಿತಿ ಉತ್ತಮ

ಸಮೀಕ್ಷೆಯ ಫಲಿತಾಂಶದ ಪ್ರಕಾರ, ಒಟ್ಟು 2,493.5 ಕಿ.ಮೀ. ರಸ್ತೆ ಉದ್ದದಲ್ಲಿ 1,426.8 ಕಿ.ಮೀ. ರಸ್ತೆ ಉತ್ತಮ ಸ್ಥಿತಿಯಲ್ಲಿದ್ದು, 607.1 ಕಿ.ಮೀ. ರಸ್ತೆಗಳಲ್ಲಿ ಸಣ್ಣ ಪ್ರಮಾಣದ ಮೇಲ್ಮೈ ದೋಷಗಳು ಕಂಡುಬಂದಿವೆ. ಈ ಎರಡು ವರ್ಗಗಳನ್ನು ಒಟ್ಟುಗೂಡಿಸಿದಾಗ, ಸಮೀಕ್ಷೆಗೊಳಪಡಿಸಿದ ರಸ್ತೆ ಉದ್ದದ ಶೇ.82.1ರಷ್ಟು ಭಾಗವು ಉತ್ತಮದಿಂದ ಸಮರ್ಪಕ ಸ್ಥಿತಿಯಲ್ಲಿವೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+