ಡಿಸಿಪಿ ಅಣ್ಣಾಮಲೈಗೆ ಮನಸಾರೆ ಅಭಿನಂದಿಸಿದ ಪೊಲೀಸ್ ಸಿಬ್ಬಂದಿಗಳು

ಬೆಂಗಳೂರು, ನ 1: ಗೋರಿಯನ್ನು ರಕ್ಷಿಸುವುದು ಎಷ್ಟು ಮುಖ್ಯನೋ, ಅದಕ್ಕಿಂತ ಮುಖ್ಯ ನನ್ನ ಇಲಾಖೆಯ ಸಿಬ್ಬಂದಿಗಳ ರಕ್ಷಣೆ ಎಂದು ಚಿಕ್ಕಮಗಳೂರಿನಲ್ಲಿ ಖಡಕ್ಕಾಗಿ ಹೇಳಿ, ಇಲಾಖೆಯ ಸಿಬ್ಬಂದಿಗಳ ಪ್ರೀತಿಗೆ ಪಾತ್ರವಾಗಿದ್ದ, ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಅಣ್ಣಾಮಲೈ ಮತ್ತೊಂದು ಸಿಬ್ಬಂದಿಗಳು ಮೆಚ್ಚುವ ಆದೇಶವನ್ನು ಹೊರಡಿಸಿದ್ದಾರೆ.

ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಶ್ರೇಣಿಯ ಪೊಲೀಸ್ ಸಿಬ್ಬಂದಿಗಳಿಗೆ ವಾರದ ರಜೆಯನ್ನು ಕಡ್ಡಾಯಗೊಳಿಸಿ ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ. ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೊರಟರೆ, ರಾತ್ರಿ ವಾಪಸ್ ಹೋಗಿದ್ದೇ ಸಮಯ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ, ಡಿಸಿಪಿ ಆದೇಶ ಭಾರೀ ಖುಷಿಯನ್ನು ತಂದಿದೆ.

ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳಿಗೆ ವಿಶ್ರಾಂತಿ ಮತ್ತು ಕುಟುಂಬದ ಜೊತೆ ಸಮಯ ಕಳೆಯುವ ಅವಶ್ಯಕತೆಯಿದೆ. ಸಿಬ್ಬಂದಿಗಳಿಗೆ ವಾರದ ರಜೆಯೂ ಸಿಗುತ್ತಿರಲಿಲ್ಲ, ಹೀಗಾಗಿ ವಾರದ ರಜೆ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಡಿಸಿಪಿ ಕಚೇರಿ ಹೇಳಿದೆ.

Bengaluru South DCP Annamalai made compulsory to take weekly off for his colleagues

ಇದರ ಜೊತೆಗೆ, ವರ್ಷದ ಹದಿನೈದು ಸಾಂದರ್ಭಿಕ ರಜೆ ತೆಗೆದುಕೊಳ್ಳುವುದಕ್ಕೂ ಅನುಮತಿ ನೀಡಲಾಗಿದೆ. ಇದಲ್ಲದೇ, 15ಕ್ಕಿಂತ ಹೆಚ್ಚು ರಜೆಗಳು ಬೇಕಾಗಿದ್ದರೆ, ಸಂಬಂಧಪಟ್ಟ ಠಾಣೆಯ ಬದಲು, ನೇರವಾಗಿ ಡಿಸಿಪಿ ಕಚೇರಿ ಸಂಪರ್ಕಿಸಲು ಡಿಸಿಪಿ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.

ಒಂದು ಮಹಿಳಾ ಪೊಲೀಸ್ ಸ್ಟೇಷನ್ ಸೇರಿದಂತೆ, ಹದಿನೇಳು ಪೊಲೀಸ್ ಠಾಣೆಗಳು ಬೆಂಗಳೂರು ದಕ್ಷಿಣ ಡಿಸಿಪಿ ಅಣ್ಣಾಮಲೈ ವ್ಯಾಪ್ತಿಗೆ ಬರುತ್ತದೆ.

ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಗೃಹ ಸಚಿವ ಪರಮೇಶ್ವರ್ ಅವರಿಗೆ ಕೆಲವು ದಿನಗಳ ಹಿಂದೆ ಎಚ್ಚರಿಕೆಯ ಪತ್ರವನ್ನು ರವಾನಿಸಿತ್ತು. ಏಕರೂಪ ಪೊಲೀಸ್ ವ್ಯವಸ್ಥಾ ಪದ್ದತಿ ಸೇರಿದಂತೆ, ತಾವು ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಇದ್ದರೆ ಮುಂದಾಗುವ ಪರಿಣಾಮಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಸಂಘವು ಎಚ್ಚರಿಕೆ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+