ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ಸಿದ್ಧ

ಬೆಂಗಳೂರು, ಜನವರಿ 25: ಅಪಘಾತ ವಲಯ ಎಂದು ಕುಖ್ಯಾತಿ ಪಡೆದುಕೊಂಡಿದ್ದ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಸ್ಕೈ ವಾಕ್ ನಿರ್ಮಾಣವಾಗಿದ್ದು ಜನರ ಬಳಕೆಗೆ ಕೆಲವೇ ದಿನಗಳಲ್ಲಿ ಮುಕ್ತವಾಗಲಿದೆ.

ಹೊರ ವರ್ತುಲ ರಸ್ತೆಯಲ್ಲಿನ ಮೊದಲ ಸ್ಕೈ ವಾಕ್ ಎಂಬ ಶ್ರೇಯವನ್ನು ಇದು ಪಡೆದುಕೊಳ್ಳಲಿದೆ. ಟೆಕ್ಕಿಗಳಿಗೆ ಇದು ಅನುಕೂಲವಾಗಲಿದ್ದು ಸದಾ ಸಂಚಾರ ದಟ್ಟಣೆ ಎದುರಿಸುವಲ್ಲಿ ಪಾದಚಾರಿಗಳಿಗೆ ಕೊಂಚ ಮಟ್ಟಿನ ಸಮಾಧಾನ ತಂದಿದೆ.[ಮಾನ್ಯತಾ ಟೆಕ್ ಪಾರ್ಕ್ ವಿರುದ್ಧ ಕ್ರಿಮಿನಲ್ ಪ್ರಕರಣ?]

bengaluru-skywalk-ready-use-at-manyata-tech-park

ಸಂಚಾರ ದಟ್ಟಣೆ ಹೆಚ್ಚಾಗಿದ್ದು , ಅಪಘಾತಗಳು ಸಾಮಾನ್ಯ ಎಂಬಂತಾಗಿದೆ. ಸರ್ಕಾರ ಮತ್ತು ಬೆಂಗಳೂರು ಆಡಳಿತ ಈ ಬಗ್ಗೆ ಸೂಕ್ತ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿದಿನ ಭಾಗದಲ್ಲಿ ಸಂಚರಿಸುವವರು ಮನವಿ ಮಾಡಿಕೊಂಡಿದ್ದರು.

ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುವ ಇಬ್ಬರು ಟೆಕ್ಕಿ ಗಳು ಆನ್ ಲೈನ್ ಅಭಿಯಾನವನ್ನು ಆರಂಭಿಸಿದ್ದರು. ಇದೀಗ ಬಿಡಿಎ ನೇತೃತ್ವದಲ್ಲಿ ಸ್ಕೈ ವಾಕ್ ಸಿದ್ಧವಾಗಿದೆ. ಈ ಭಾಗದಲ್ಲಿ ನಡೆದ ಅಪಘಾತಗಳು ಜೀವಗಳನ್ನು ಬಲಿ ತೆಗೆದುಕೊಂಡಿದ್ದವು. ಮಾಧ್ಯಮಗಳಲ್ಲಿಯೂ ದೊಡ್ಡ ಸುದ್ದಿಯಾಗಿತ್ತು. ಕಳೆದ ನವೆಮಬರ್ ನಲ್ಲೇ ಸ್ಕೈ ವಾಕ್ ನಿರ್ಮಾಣಕ್ಕೆ ಸಕಲ ಸಿದ್ಧತೆ ಆರಂಭವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+