ಆರು ವರ್ಷದ ಮೊಮ್ಮಗಳ ಮೇಲೆ ತಾತನಿಂದ ಅತ್ಯಾಚಾರ! ಆರೋಪಿ ಪಾರಾರಿಗೆ ತಂದೆ ಸಹಾಯ!
ಬೆಂಗಳೂರು ಜೂನ್ 27: ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ತಾತನೊಬ್ಬ ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಯಿ ಕೆಲಸಕ್ಕೆ ಹೋದ ಸಮಯದಲ್ಲಿ ಅಜ್ಜ ತನ್ನ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಈ ವಿಷಯ ಯಾರಿಗೂ ಹೇಳದಂತೆ ಅಜ್ಜ ಮಗುವಿನ ತಾಯಿ (ಸೊಸೆ)ಗೆ ಆಮಿಷ ಒಡ್ಡಿದ್ದಾನೆ. ಆದರೆ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಬಾಲಕಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಸ್ತುತ ಈ ಕುಟುಂಬ ಹುಳಿಮಾವಿನ ವೇಣುಗೋಪಾಲ ನಗರದಲ್ಲಿ ವಾಸವಿದೆ. ಬಾಲಕಿಯ ತಂದೆ ರಂಜಿತ್ ಕುಮಾರ್ (35) ನನ್ನು ಪೊಲೀಸರು ಬಂಧಿಸಿದ್ದಾರೆ. ರಂಜಿತ್ ಕುಮಾರ್ ತಂದೆ ಚಕ್ರವರ್ತಿ (60), ಅತ್ತೆ ವಿಜಯಮ್ಮ (50) ಹಾಗೂ ಇಬ್ಬರು ಸಹೋದರರು ತಲೆಮರೆಸಿಕೊಂಡಿದ್ದಾರೆ.
ವಿಚಾರ ಗೊತ್ತಾಗುತ್ತಿದ್ದಂತೆ ಆರೋಪಿ ಅಜ್ಜ ಚಕ್ರವರ್ತಿ ಮನೆಯಿಂದ ಎಸ್ಕೇಪ್ ಆಗಿದ್ದಾನೆ. ಈ ಹೇಯ ಕೃತ್ಯ ಮಗುವಿನ ಅಜ್ಜನಿಂದಾಗಿದೆ ಎಂದು ತಿಳಿದು ಕೂಡ ಮಗುವಿನ ತಂದೆ ತನ್ನ ತಂದೆಗೆ (ಚಕ್ರವರ್ತಿ) ಪಾರಾರಿಯಾಗಲು ಸಹಾಯ ಮಾಡಿದ್ದಾನೆ. ಬಂಗಾರದ ಆಸೆಗೆ ಮಗುವಿನ ತಂದೆ ಈ ವಿಷಯವನ್ನು ಎಲ್ಲೂ ಕೂಡ ಬಾಯಿ ಬಿಟ್ಟಿಲ್ಲ. ಮಗುವಿನ ತಾಯಿ ಆಸ್ಪತ್ರೆಗೆ ಮಗುವನ್ನು ಕರೆತಂದಾಗ ಈ ವಿಷಯ ಬೆಳಕಿಗೆ ಬಂದಿದೆ.
ಆರು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೋಷಕರಿಗೆ ಗೊತ್ತಾಗಿದೆ. ಆದರೂ ಅಜ್ಜ ತನ್ನ ಆಸ್ತಿಯನ್ನು ಬರೆದುಕೊಡುವುದಾಗಿ ಹೇಳಿ, ಆಮಿಷ ಒಡ್ಡಿ ಬಾಯಿ ಮುಚ್ಚಿಸಿದ್ದಾನೆ. ಮಗುವಿನ ತಂದೆಗೆ ತನ್ನ ಸ್ವಂತ ಕಂದಮ್ಮನ ಮೇಲೆ ಇಂತಹ ಹೇಯ ಕೃತ್ಯ ಎಸಗಿರುವುದು ಗೊತ್ತಾದರೂ ಹಣ ಹಾಗೂ ಆಸ್ತಿ ಆಸೆಗೆ ಸುಮ್ಮನಾಗಿದ್ದಾನೆ.

ಆದರೆ ತಾಯಿ ಹೃದಯ ಇದನ್ನು ಸಹಿಸಿಲ್ಲ. ಕೂಡಲೆ ತಾನು ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾಳೆ. ಆಗ ಈ ಘಟನೆ ಬಹಿರಂಗವಾಗಿದ್ದು ಮನುಕುಲವೇ ತಲೆ ತಗ್ಗಿಸಿದೆ.
ಮಗುವಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಹೋದಾಗ ಮಗುವಿನ ಸ್ಥಿತಿ ಕಂಡು ಆಸ್ಪತ್ರೆ ವೈದ್ಯರಿಗೆ ಅನುಮಾನ ಬಂದಿದೆ. ಅವರು ಜೋರಾಗಿ ಪೋಷಕರಿಗೆ ಪ್ರಶ್ನೆ ಮಾಡಿದಾಗ ತಾಯಿ ಧೈರ್ಯ ಮಾಡಿ ಎಲ್ಲಾ ವಿಷಯವನ್ನು ಹೇಳಿಕೊಂಡಿದ್ದಾಳೆ. ಅಲ್ಲದೆ ಮಗುವನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ ಕೂಡಲೇ ಸ್ಥಳೀಯ ಅಕ್ಕಪಕ್ಕದವರ ಸಹಾಯ ಪಡೆದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ದೂರು ದಾಖಲಿಸಿಕೊಂಡಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ಆರೋಪಿ ಕುಟುಂಬಸ್ಥರು ಮೂಲತ: ತಮಿಳುನಾಡು ಮೂಲದವರು. ಬಾಲಕಿ ತಾಯಿ ನೀಡಿದ ದೂರಿನ ಆಧಾರದ ಮೇಲೆ ಮಗುವಿನ ತಂದೆ ಹಾಗೂ ಅಜ್ಜನ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಇನ್ನು ಮೊಮ್ಮಗಳ ಮೇಲೆ ಅತ್ಯಾಚಾರ ಎಸೆಗಿದ ತಾತ ಸಹಾಯ ಮಾಡಿದ ಅಜ್ಜಿ ಹಾಗೂ ಮನೆಯಲ್ಲಿದ್ದ ಚಿಕ್ಕಂಪ್ಪದಿರು ತಲೆ ಮರೆಸಿಕೊಳ್ಳಲು ಬಾಲಕಿಯ ತಂದೆಯೇ ಸಹಾಯ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.












Click it and Unblock the Notifications