Bengaluru Sustainable City: ಸುಸ್ಥಿರ ನಗರಗಳ ಜಾಗತಿಕ ಸ್ಪರ್ಧೆಯಲ್ಲಿ 'ಬೆಂಗಳೂರು' ಆಯ್ಕೆ
ಬೆಂಗಳೂರು, ನವೆಂಬರ್ 10: ಟೊಯೋಟಾ ಮೊಬಿಲಿಟಿ ಫೌಂಡೇಶನ್ ಜಾಗತಿಕವಾಗಿ ನಡೆಸಿದ ಸುಸ್ಥಿರ ನಗರಗಳ ಸ್ಪರ್ಧೆಯಲ್ಲಿ ಬೆಂಗಳೂರು ನಗರ ಆಯ್ಕೆಯಾಗಿರುವುದು ನಮಗೆಲ್ಲ ಹೆಮ್ಮೆ ತರಿಸಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಾಹಿತಿ ನೀಡಿದೆ.
ಜಾಗತಿಕವಾಗಿ ಒಟ್ಟು 46 ವಿವಿಧ ದೇಶಗಳ 150 ನಗರಗಳು ಈ ಸುಸ್ಥಿರ ನಗರಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅದರಲ್ಲಿ ಬೆಂಗಳೂರು ಸೇರಿದಂತೆ 10 ನಗರಗಳನ್ನು ಈ ಸುಸ್ಥಿರ ನಗರಗಳ ಸ್ಪರ್ಧೆ ಯಲ್ಲಿ ಆಯ್ಕೆ ಮಾಡಲಾಗಿದೆ. ಪ್ರಪಚಂದಾದ್ಯಂತ ಲಕ್ಷಾಂತರ ಜನರ ಜೀವನ ಪರಿವರ್ತಿಸುವ ಸಾಮರ್ಥ್ಯ ಈ ನಗರಗಳಿಗೆ ಇವೆ ಎಂದು ಹೇಳಲಾಗಿದೆ.

ಸಂಚಾರ ದಟ್ಟಣೆ ನಿರ್ವಹಣೆ, ಮೂಲಭೂತ ಸೌಕರ್ಯಗಳ ಆಧುನೀಕರಣ, ಅಪಘಾತಗಳ ತಡೆಗಟ್ಟುವ ಸಲುವಾಗಿ ಬ್ರ್ಯಾಂಡ್ ಬೆಂಗಳೂರು-ಸುಗಮ ಸಂಚಾರ ಬೆಂಗಳೂರು ವರದಿಯಂತೆ ಬೆಂಗಳೂರಿನ ಸಂಚಾರ ವ್ಯವಸ್ಥೆಯ ಆಧುನೀಕರಣಕ್ಕೆ ಟೊಯೋಟಾ ಮೊಬಿಲಿಟಿ ಫೌಂಡೇಶನ್ ಮುಂದಿನ 5 ವರ್ಷಗಳವರೆಗೆ ಸಹಾಯ ಮಾಡಲಿದೆ.
ಪಾದಚಾರಿಗಳಿಗೆ, ಸೈಕಲ್ ಬಳಕೆದಾರರಿಗೆ ಸುರಕ್ಷತೆ ಒದಗಿಸುವುದು ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಹೊಸ ವ್ಯವಸ್ಥೆ ಮಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಸರ್ಕಾರ ತಿಳಿಸಿದೆ.
ಆಯ್ಕೆ ಆದ 10 ನಗರಗಳ ಮಾಹಿತಿ
ವಾಣಿಜ್ಯ ಸರಕು ಸಾಗಾಣೆಗೆ ಸುವ್ಯವಸ್ಥೆ ಜಾಲ, ಆರೋಗ್ಯ ಮತ್ತು ಪರಿಸರ ಕಾಳಜಿ, ಜಾಗತಿಕ ವ್ಯಾಪಾರ ವಿಸ್ತಾರ, ವಾಣಿಜ್ಯ ಕೇಂದ್ರಗಳಾಗಿ ಬೆಳವಣಿಗೆ, ಪಾರಂಪರಿಕೆ ತಾಣಗಳ ಅಭಿವೃದ್ಧಿ, ಮೂಲ ಸೌಕರ್ಯದಲ್ಲಿ ಸೂಕ್ತ ಮಾರ್ಪಾಡು, ಅಭಿವೃದ್ಧಿ ಸವಾಲುಗಳ ನಿರ್ವಹಣೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಸುಸ್ಥಿರತೆ ಕಾಯ್ದುಕೊಂಡ ನಗರಗಳನ್ನು ಸ್ಫರ್ಧೆಯಲ್ಲಿ ಆಯ್ಕೆ ಮಾಡಲಾಗಿದೆ.
* ಡೆಟ್ರಾಯಿಟ್, ಯುನೈಟೆಡ್ ಸ್ಟೇಟ್ಸ್
* ಫೋರ್ಟಲೆಜಾ, ಬ್ರೆಜಿಲ್
* ಮೆಡೆಲಿನ್, ಕೊಲಂಬಿಯಾ
* ಮೆಕ್ಸಿಕೋ ಸಿಟಿ, ಮೆಕ್ಸಿಕೋ
* ನ್ಯೂ ಓರ್ಲಿಯನ್ಸ್, ಯುನೈಟೆಡ್ ಸ್ಟೇಟ್ಸ್
* ಸೆಬೆರಾಂಗ್ ಪೆರೈ, ಮಲೇಷ್ಯಾ
* ವಾರಣಾಸಿ, ಭಾರತ
* ವೆನಿಸ್, ಇಟಲಿ
* ಯಾರ್ಕ್, ಯುನೈಟೆಡ್ ಕಿಂಗ್ಡಮ್
* ಬೆಂಗಳೂರು












Click it and Unblock the Notifications