ಬೆಂಗಳೂರು ಗ್ರಾ. ಗೆಲ್ಲೋದು ಯಾರು? ಡಿ.ಕೆ. ಬ್ರದರ್ ಪ್ಲ್ಯಾನ್ ಏನು?

ಗೆಲ್ಲಬೇಕು.. ಗೆಲ್ಲಲೇಬೇಕು.. ಇದು 2024 ರ ಲೋಕಸಭೆ ಚುನಾವಣೆಯ ಒನ್‌ಲೈನ್ ಅಜೆಂಡಾ ಆಗಿದೆ. ಹೀಗಾಗಿಯೇ ಕಾಂಗ್ರೆಸ್ & ಬಿಜೆಪಿ ನಾಯಕರು ಪಕ್ಕಾ ಫೈಟ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಗೆಲುವಿಗೆ ಚೆಕ್‌ಮೇಟ್ ಹೇಳಿದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಡಿಕೆ ಬ್ರದರ್ಸ್ ಹೊಸ ರಣತಂತ್ರ ರೂಪಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬೇರೆಯದ್ದೇ ಆಟ ಈಗ ಶುರುವಾಗಿದೆ.

ನಿಮಗೆಲ್ಲಾ ಗೊತ್ತಿರುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಪ್ರತಿ ಬಾರಿಯೂ ಕುತೂಹಲದ ಕೇಂದ್ರ ಬಿಂದು. ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಜೆಡಿಎಸ್ & ಬಿಜೆಪಿಯ ಅಭ್ಯರ್ಥಿಗಳು ಈ ಹಿಂದಿನಿಂದಲೂ ಮಾಡಿರುವ ಪ್ರಯತ್ನ ಪಕ್ಕಾ ಫ್ಲಾಪ್ ಆಗುತ್ತಿದೆ. ಆದರೆ ಈ ಬಾರಿ ಬೇರೆಯದ್ದೇ ಆಟ ಶುರುವಾಗಿದೆ. ರಾಮನಗರ ಜಿಲ್ಲೆಯಲ್ಲಿ ತಮಗೆ ಎದುರಾಗಿರುವ ಭೀಕರ ಸೋಲಿಗೆ ಸೇಡು ತೀರಿಸಿಕೊಳ್ಳುವ ರೀತಿ ಇದೀಗ ಮಾಜಿ ಸಿಎಂ ಎಚ್‌ಡಿಕೆ ಅವರಿಂದ ಹೊಸ ರಣತಂತ್ರ ಸಿದ್ಧವಾದಂತೆ ಕಾಣುತ್ತಿದೆ. ಆದರೆ ಡಿ.ಕೆ. ಬ್ರದರ್ಸ್ ಕೂಡ ಹೊಸದಾಗಿ, ರಣತಂತ್ರ ರೆಡಿ ಮಾಡುತ್ತಿದ್ದಾರೆ.

Bengaluru Rural Lok Sabha Constituency Become High Voltage In 2024 Lok Sabha Election

ಡಿಕೆ ಬ್ರದರ್ಸ್ VS ಎಚ್‌ಡಿ ಕುಮಾರಸ್ವಾಮಿ?

ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಒಂದು ಬಲವಾದ ಹಿಡಿತ ಹೊಂದಿದೆ. ಅದ್ರಲ್ಲೂ ಜಿಲ್ಲೆ ಆಗಿ ರಾಮನಗರ ರೂಪುಗೊಳ್ಳಲು ಎಚ್.ಡಿ. ಕುಮಾರಸ್ವಾಮಿ ಅವರ ಪಾತ್ರ ದೊಡ್ಡದಾಗಿದೆ. ಹೀಗಿದ್ರೂ ಈಗ ಜೆಡಿಎಸ್ ಪಕ್ಷದ ನಾಯಕರಿಗೆ ರಾಮನಗರ ರಾಜಕೀಯದ ಗ್ರಿಪ್ ತಪ್ಪುತ್ತಿದೆ, ಈ ಮೂಲಕ ಕಾಂಗ್ರೆಸ್ ಬಲವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಅದರಲ್ಲೂ ಡಿಕೆ ಬ್ರದರ್ಸ್ ಈ ಭಾಗದಲ್ಲಿ ಬಲವಾಗಿ ಬೆಳೆದು ನಿಂತಿದ್ದು, ಈ ಬಾರಿಯ ಲೋಕಸಭೆ ಎಲೆಕ್ಷನ್ ವೇಳೆ ಹೇಗಾದ್ರೂ ಮಾಡಿ ಹಾಲಿ ಸಂಸದ ಡಿ.ಕೆ. ಸುರೇಶ್ ಅವರಿಗೆ ಸೋಲುಣಿಸಲು ಹೊಸ ಪ್ಲಾನ್ ಮಾಡಿರುವಂತೆ ಕಾಣುತ್ತಿದೆ ಜೆಡಿಎಸ್ & ಬಿಜೆಪಿ. ಆದ್ರೆ ಈ ತಂತ್ರಕ್ಕೆ ಪ್ರತಿತಂತ್ರ ರೆಡಿ ಮಾಡಿದ್ದಾರೆ ಡಿಕೆ ಬ್ರದರ್ಸ್.

ಬೆಂಗಳೂರು ಗ್ರಾ. ಕ್ಷೇತ್ರ ರಂಗೇರಿದೆ!

ಇನ್ನು ತಮ್ಮ ವಿರುದ್ಧ ಬಿಜೆಪಿ & ಜೆಡಿಎಸ್ ನಾಯಕರು ಒಂದಾಗಿರುವ ಮುನ್ಸೂಚನೆ ಸಿಕ್ಕ ತಕ್ಷಣವೇ ಕಾಂಗ್ರೆಸ್ ನಾಯಕರು ಹಾಗೂ ಡಿಕೆ ಬ್ರದರ್ಸ್ ಹೊಸ ರಣತಂತ್ರ ರೂಪಿಸಿದ್ದಾರೆ. ಇದೇ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಾಲು ಸಾಲು ಕಾರ್ಯಕ್ರಮ ಮತ್ತು ಸಭೆಗಳನ್ನ ಆಯೋಜನೆ ಮಾಡಲಾಗುತ್ತಿದೆ. ಈ ಮೂಲಕ 2024ರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ ಭರ್ಜರಿ ಐಡಿಯಾ ರೆಡಿಯಾದಂತೆ ಕಾಣುತ್ತಿದೆ. ಸ್ಥಳೀಯ ಜನರ ಕಷ್ಟಗಳನ್ನ ಆಲಿಸಲು ಇಂದು ಡಿ.ಕೆ. ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಭೆಗಳನ್ನ ಆಯೋಜನೆ ಮಾಡಿದ್ದಾರೆ.

Bengaluru Rural Lok Sabha Constituency Become High Voltage In 2024 Lok Sabha Election

ಡಿಕೆ ಸುರೇಶ್ ಕ್ಷೇತ್ರ ಬದಲಾವಣೆ?

ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಕರ್ನಾಟಕ ಹಾಲಿ ಡಿಸಿಎಂ ಅವರ ತಮ್ಮ, ಅಂದ್ರೆ ಡಿ.ಕೆ. ಶಿವಕುಮಾರ್‌ರ ಸಹೋದರ ಡಿಕೆ ಸುರೇಶ್ ಕ್ಷೇತ್ರ ಬದಲಾವಣೆ ಮಾಡ್ತಾರಾ? ಅಂತಾನೂ ಚರ್ಚೆ ಶುರುವಾಗಿದೆ. ಈಗಿನ ಮಾತುಗಳ ಪ್ರಕಾರ, ಡಿ.ಕೆ. ಸುರೇಶ್ ಬೆಂಗಳೂರು ಗ್ರಾಮಾಂತರ ಬಿಟ್ಟು ಬೆಂಗಳೂರು ಉತ್ತರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ ಡಿ.ಕೆ. ಸುರೇಶ್. ಹಿಗಿದ್ದರೂ ಈ ಬಾರಿ ಡಿ.ಕೆ. ಸುರೇಶ್ ಸೋಲಿಸಲು ಬಿಜೆಪಿ & ಜೆಡಿಎಸ್ ನಾಯಕರು ಬೇರೆಯದ್ದೇ ತಂತ್ರ ರೂಪಿಸಿರುವಂತೆ ಕಾಣುತ್ತಿದೆ. ಆದರೆ ಇದೆಲ್ಲಾ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ..? ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+