ತಮಿಳುನಾಡಿನಲ್ಲಿ ಬೆಂಗಳೂರು ರೌಡಿ ಶೀಟರ್ ಬರ್ಬರ ಹತ್ಯೆ

ಬೆಂಗಳೂರು, ಮಾರ್ಚ್ 13: ತಮಿಳುನಾಡಿನಲ್ಲಿ ಬೆಂಗಳೂರಿನ ರೌಡಿ ಶೀಟರ್‌ ಇಸ್ಮಾಯಿಲ್ ನನ್ನು ಬರ್ಬರವಾಗಿ ಹತ್ಯೆಮಾಡಲಾಗಿದೆ.

ತಮಿಳುನಾಡಿನ ಡೆಂಕನಿಕೋಟೆಯಲ್ಲಿ ಈ ಘಟನೆ ನಡೆದಿದೆ. ಇಸ್ಮಾಯಿಲ್ ವಿರುದ್ಧ ಬೊಮ್ಮನಹಳ್ಳಿ ಬಂಡೆಪಾಳ್ಯ ಹಾಗೂ ಮಡಿವಾಳದಲ್ಲಿ ಮೂರು ಕೊಲೆ ಪ್ರಕರಣ ದಾಖಲಾಗಿವೆ.

ಇಸ್ಮಾಯಿಲ್ ತನ್ನ ಸ್ನೇಹಿತನ ಮನೆಗೆ ತೆರಳಿದಾಗ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಏಳು ಬಂದಿಯ ಗ್ಯಾಂಗ್ ಸ್ನೇಹಿತಬ ಮನೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಆತನನ್ನು ಕೊಲೆ ಮಾಡಿದ್ದಾರೆ.

Bengaluru rowdy sheeter murder in Tamil Nadu

ಸುಮಾರು ಏಳು ಬಂದಿಯ ಗುಂಪೊಂದು ಮುಖಕ್ಕೆ ಮಂಕಿ ಕ್ಯಾಪ್ ಧರಿಸಿ ಬಂದಿದ್ದರು. ಇಸ್ಮಾಯಿಲ್ ಕೊಲೆಗೆ ಹಲವು ದಿನಗಳಿಂದ ಸಂಚು ರೂಪಿಸಿದ್ದರು ಎನ್ನಲಾಗಿದೆ. ಕೊಲೆಯ ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಮಾರಕಾಸ್ತ್ರಗಳು ದೊರೆತಿವೆ.

ಡೆಂಕನಿಕೋಟೆ ಪೊಲೀಸರು, ಸ್ಥಳವನ್ನು ಮಹಜರು ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಲ್ಲಿ ರೌಡಿ ಶೀಟರ್ ಲಕ್ಷ್ಮಣನ ಬರ್ಬರ ಹತ್ಯೆ ನಡೆದಿತ್ತು ಆ ಹತ್ಯೆಯ ಹಿಂದೆ ಯುವತಿ ಕೈವಾಡವಿದೆ ಎನ್ನುವ ವಿಷಯ ಈಗ ಬಹಿರಂಗಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+