ಬೆಂಗಳೂರು: ಈ ವರ್ಷ 12,615 ಸೈಬರ್ ಕೇಸ್: ವಂಚನೆ ಆಗುತ್ತಿದ್ದ ₹201 ಕೋಟಿಗೆ ಖಾಕಿ ಬ್ರೇಕ್: ಬಿ.ದಯಾನಂದ್
ಬೆಂಗಳೂರು, ಅಕ್ಟೋಬರ್ 10: ಆನ್‌ಲೈನ್ ಯುಗದಲ್ಲಿರುವ ನಾವು ಸಾಕಷ್ಟು ಸೈಪರ್ ಅಪರಾಧಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಳಗಾಗುತ್ತಿವೆ. ಇದರಿಂದ ಅಪಾರ ಹಣ ವಂಚಕೆ ಕೈಸೇರಿ ಬಿಡುತ್ತಿದೆ. ಇದರ ವಿರುದ್ಧ ಸತತ ಕಾರ್ಯ ಪ್ರವೃತ್ತವಾಗಿರುವ ಪೊಲೀಸರು ಕೋಟಿ ಕೋಟಿ ಹಣ ವಂಚಕರ ಕೈಸೇರದಂತೆ ತಡೆ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ಈ ವರ್ಷ 2023ರ ಜನವರಿಯಿಂದ ಸೆಪ್ಟಂಬರ್ ವರೆಗೆ ಐಟಿ ಹಬ್ ಬೆಂಗಳೂರಿನಲ್ಲಿ ಒಟ್ಟು 12,615 ಸೈಬರ್ ಅಪರಾಧಗಳು (Cyber Crime) ಪ್ರಕರಣಗಳು ವರದಿ ಆಗಿವೆ. ಇದರ ವಿರುದ್ಧ ಕಾರ್ಯಾಚರಣೆಗೆ ಇಳಿದ ನಮ್ಮ ಪೊಲೀಸರು ನೂರಾರು ಕೋಟಿ ರೂಪಾಯಿ ವಂಚಕರ ಕೈ ಸೇರಿದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಖದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಸೈಬರ್ ಅಪರಾಧದ ಒಟ್ಟು 12,615 ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲಾಖೆ ತ್ವರಿತ ಕ್ರಮಗಳನ್ನು ತೆಗೆದುಕೊಂಡಿದೆ.
ತನಿಖಾಧಿಕಾರಿಗಳು ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು ಬರೊಬ್ಬರಿ ₹201,83,28,534 ಹಣವನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
₹27 ಕೋಟಿ ಹಿಂತಿರುಗಿಸಿದ ಖಾಕಿ
ಆ ಒಟ್ಟು ಹಣದಲ್ಲಿ ₹27,68,72,273 ಮೊತ್ತದ ಹಣವನ್ನು ಸಂಬಂಧಪಟ್ಟ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ನ್ಯಾಯ ದೊರಕಿಸುವಲ್ಲಿ ಹಾಗೂ ಸೈಬರ್ ಅಪರಾಧಗಳ ತಡೆಗಾಗಿ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.

ಇನ್ನೂ ಕಳ್ಳತನಕ್ಕೆ ಸಂಬಂಧಪಟ್ಟ ಇನ್ನೊಂದು ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ರಾಜಸ್ಥಾನದಲ್ಲಿ 4 ಜನರ ಗುಂಪನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆದಿನಾಥ್ ಜೈನ ಮಂದಿರದಿಂದ ಕಳ್ಳತನವಾಗಿದ್ದ ಸುಮಾರು 9.75 ಲಕ್ಷ ಮೌಲ್ಯದ 14 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಬಸ್ ನಿಲ್ದಾಣದ ಹಲವು ವಸ್ತುಗಳು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರು, ಅದು ಕಳ್ಳತನವಾಗಿಲ್ಲ, ಬದಲಿಗೆ ಸಾರ್ವಜನಿಕರ ಸುರಕ್ಷತೆಗಾಗಿ ಬಿಬಿಎಂಪಿ ಮೂಲಕ ತೆಗೆದು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ
ನೀವು ಆನ್‌ಲೈನ್ ವಂಚನೆ, ಸೈಬರ್ ಅಪರಾಧ ಕೃತ್ಯಕ್ಕೆ ಒಳಗಾಗದಂತೆ ಎಚ್ಚರ ವಹಿಸುವಂತೆ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಯಾವುದೇ ಅನುಮಾನಾಸ್ಪದ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬಾರದು. ಒಂದು ವೇಳೆ ನೀವು ಯಾವುದೇ ಬಗೆಯ ಹಣಕಾಸಿನ ಸೈಬರ್ ವಂಚನೆಗೆ ಒಳಗಾದಲ್ಲಿ, ನಮ್ಮ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ, ಸಂಬಂಧಿತ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications