Bengaluru Rent ಬೆಂಗಳೂರಲ್ಲಿ ಜೀವನ ನಡೆಸುವುದಕ್ಕೆ ತಿಂಗಳಿಗೆ ₹1 ಲಕ್ಷ ಬೇಕು, ಖರ್ಚಿನ ವಿಡಿಯೋ ವೈರಲ್‌

ಬೆಂಗಳೂರಿನಲ್ಲಿ ಬಾಡಿಗೆ ಮಾತ್ರವಲ್ಲ ಬೆಂಗಳೂರಿನಲ್ಲಿ ನಿತ್ಯ ಜೀವನ ನಡೆಸುವುದು ಸಹ ಇತ್ತೀಚಿನ ದಿನಗಳಲ್ಲಿ ಭಾರೀ ದುಬಾರಿ ಆಗಿದೆ. ಬರುವ ಸಂಬಳದ ಬಹುಪಾಲು ಖರ್ಚಿಗೆ ಮೀಸಲಾಗುತ್ತಿದ್ದು, ಸಾವಿರಾರು ರೂಪಾಯಿ ಖರ್ಚಾಗುತ್ತಿದೆ ಎಂದು ಹಲವರು ಹೇಳಿದ್ದಾರೆ. ಸಂಬಳ, ಮಾಸಿಕ ಬಜೆಟ್ ಮತ್ತು ಉಳಿತಾಯವನ್ನು ಹಂಚಿಕೊಳ್ಳುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಬೆಂಗಳೂರಿನಲ್ಲಿ ಜೀವನ ನಡೆಸುವುದು ತುಂಬಾ ದುಬಾರಿ ಎಂದು ಕೆಲವರು ವಿಡಿಯೋ ಹಂಚಿಕೊಂಡರೆ, ಇನ್ನು ಕೆಲವರು ಬೆಂಗಳೂರಿನಲ್ಲಿ ಜೀವನ ನಡೆಸುವುದು ಅಷ್ಟೊಂದು ಕಷ್ಟದ ವಿಷಯವೇನು ಅಲ್ಲ ಎಂದಿದ್ದಾರೆ. ಟೆಕ್ ಉದ್ಯೋಗಿಗಳು, ಫ್ರೀಲ್ಯಾನ್ಸರ್‌ಗಳು ಹಾಗೂ ಉದ್ಯಮಿಗಳು ಸೇರಿದಂತೆ ಹಲವರು ತಮ್ಮ ಆದಾಯ ಹಾಗೂ ಆ ಆದಾಯವನ್ನು ಹೇಗೆಲ್ಲ ಖರ್ಚು ಮಾಡುತ್ತೇವೆ ಎನ್ನುವ ಬಗ್ಗೆ ಹಂಚಿಕೊಂಡಿದ್ದಾರೆ. ಈ ರೀತಿ ಬೆಂಗಳೂರಿನ ವೆಚ್ಚಗಳ ಬಗ್ಗೆ ಹಂಚಿಕೊಳ್ಳುತ್ತಿರುವುದರಿಂದ ಉಳಿದವರಿಗೂ ಒಂದು ಅಂದಾಜು ಸಿಗಲು ಪ್ರಾರಂಭವಾಗಿದೆ. ಆದರೆ ಕೆಲವೊಬ್ಬರು ಬೆಂಗಳೂರಿನಲ್ಲಿ ಒಂದು ಲಕ್ಷ ರೂಪಾಯಿ ಇದ್ದರೂ ಸಾಕಾಗುತ್ತಿಲ್ಲ ಎನ್ನುತ್ತಿದ್ದಾರೆ.

Bengaluru Rent

Bengaluru Rent: ಬೆಂಗಳೂರಲ್ಲಿ ಯಾವುದಕ್ಕೆ ಎಷ್ಟು ವೆಚ್ಚ ?

ಇತ್ತೀಚೆಗೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ತಮ್ಮ ಮಾಸಿಕ ವೆಚ್ಚಗಳ ವಿವರವನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಯುವತಿಯೊಬ್ಬರು ಬೆಂಗಳೂರು ನಗರದಲ್ಲಿ ವಾಸಿಸಲು ಪ್ರತಿ ತಿಂಗಳು ಸುಮಾರು 1 ಲಕ್ಷ ರೂ. ಖರ್ಚು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ರುಬ್ರಿಕ್‌ನಲ್ಲಿ ಕೆಲಸ ಮಾಡುವ ಇಶಿತಾ ಚೌಧರಿ ಅವರು ಬೆಂಗಳೂರಿನಲ್ಲಿ ಮನೆ ಬಾಡಿಗೆ ಮತ್ತು ದಿನಸಿಗಳಿಂದ ಹಿಡಿದು ಶಾಪಿಂಗ್, ಪ್ರಯಾಣ ಮತ್ತು ಮನರಂಜನೆಯವರೆಗೆ ತಾವು ಮಾಸಿಕ ಎಷ್ಟು ಖರ್ಚು ಮಾಡುತ್ತಿದ್ದೇವೆ ಎನ್ನುವ ಬಗ್ಗೆ ವಿವರವಾಗಿ ಬರೆದುಕೊಂಡಿದ್ದಾರೆ. ಇದೀಗ Instagramನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಆಗುತ್ತಿದೆ.

ಇಶಿತಾ ಚೌಧರಿ ಎನ್ನುವವರ ಪ್ರಕಾರ, ಬೆಂಗಳೂರಿನಲ್ಲಿ 3BHK ಅಪಾರ್ಟ್‌ಮೆಂಟ್ ಬಾಡಿಗೆಯು 21,000 ಸಾವಿರ ರೂಪಾಯಿ. ಪಾವತಿಸುತ್ತಾರೆ. ಮನೆಯ ಪೀಠೋಪಕರಣಗಳು, ಏರ್ ಪ್ಯೂರಿಫೈಯರ್ ಮತ್ತು ವೈ-ಫೈಗಾಗಿ 500 ರೂ.ಗಳನ್ನು ಖರ್ಚು ಮಾಡುತ್ತಾರೆ. ಅವರ ಮನೆಯ ಖರ್ಚು ದಿನಸಿ ಸಾಮಾನುಗಳಿಗೆ 7,000 ರೂ., ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುವ ಅಡುಗೆಯವರಿಗೆ ಮಾಸಿಕ 2,000 ರೂ. ಮತ್ತು ಮನೆಯ ಸ್ವಚ್ಛತೆ ಹಾಗೂ ಪಾತ್ರೆ ತೊಳೆದುಕೊಡುವವರಿಗೆ 2,000 ರೂ.. ಸೇರಿವೆ.

ಝೊಮಾಟೊ ಮತ್ತು ಸ್ವಿಗ್ಗಿ ಮೂಲಕ ಫುಡ್ ಆರ್ಡರ್ ಮಾಡುವುದಕ್ಕೆ ಮಾಸಿಕ ಅಂದಾಜು 3,000 ರೂ. ಖರ್ಚು ಮಾಡುತ್ತಾರೆ. ಇದರ ಹೊರತಾಗಿ ಹೊರಗೆ ಊಟ ಮಾಡುವುದಕ್ಕೆ ತಿಂಗಳಿಗೆ 5,000 ರೂ. ಖರ್ಚು ಮಾಡುತ್ತಾರೆ. ಹವ್ಯಾಸಗಳಿಗೆ 5,000 ರೂ. ಹಾಗೂ ಬೆಂಗಳೂರು ನಗರವನ್ನು ಸುತ್ತಲು 10,000 ರೂ.. ವೆಚ್ಚವಾಗುತ್ತದೆ.

ಒಟ್ಟಿಗೆ, ಈ ವೆಚ್ಚಗಳು ತಿಂಗಳಿಗೆ ಸುಮಾರು 56,500 ರೂ. ಆಗಲಿದೆ ಎಂದಿದ್ದಾರೆ, ಉಳಿದ ಮೊತ್ತವು ಹೆಚ್ಚಾಗಿ ಲೈಫ್‌ಸ್ಟೈಲ್ ಹಾಗೂ ಎಂಜಾಯ್ ಮೆಂಟ್‌ಗೆ ಸಾಕಾಗುತ್ತದೆ. ಶಾಪಿಂಗ್‌ಗೆ 15,000 ರೂ., ಪ್ರಯಾಣ ಮತ್ತು ಪ್ರವಾಸಗಳಿಗೆ 20,000 ರೂ., ಪಾರ್ಲರ್ ಖರ್ಚು 5,000 ರೂ. ಮತ್ತು ಸ್ಪೋರ್ಟ್ಸ್‌ 3,000 ರೂ. ಖರ್ಚು ಮಾಡುತ್ತಾರೆ. ಇದು ಅವರ ಒಟ್ಟು ಮಾಸಿಕ ವೆಚ್ಚವನ್ನು ಸರಿಸುಮಾರು 1 ಲಕ್ಷ ರೂ. ಆಗಲು ಕಾರಣವಾಗಿದೆ ಎಂದು ಅವರು ವೈರಲ್‌ ವಿಡಿಯೋದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+