Bengaluru Rent: ಬೆಂಗಳೂರಲ್ಲಿ ಬಾಡಿಗೆ ಮನೆ ವಿಚಾರದಲ್ಲಿ ಹೊಸ ಸ್ಕ್ಯಾಮ್, ಸೋಶಿಯಲ್ ಮೀಡಿಯಾದಲ್ಲಿ ರಿವೀಲ್
Bengaluru Rent: ಬೆಂಗಳೂರಿನಲ್ಲಿ ಬಾಡಿಗೆ ಮನೆದಾರರೊಬ್ಬರಿಗೆ ಮನೆಯ ಮಾಲೀಕರೊಬ್ಬರು ದೊಡ್ಡ ಮೋಸ ಮಾಡಿರುವ ವಿಚಾರವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ದುಬಾರಿ ಬಾಡಿಗೆ ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೆ ಮುಂಗಡ ಹಣವನ್ನು ಹಿಂದಿರುಗಿಸುವಾಗಲೂ ಸಹ ಹೆಚ್ಚು ಖರ್ಚು ಮಾಡಲಾಗುತ್ತಿದೆ ಎನ್ನುವ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ಚರ್ಚೆ ಆಗುತ್ತಲ್ಲೇ ಇದೆ. ಇದೀಗ ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಯಾವ ರೀತಿಯ ಸ್ಕ್ಯಾಮ್ ಆಗುತ್ತಿದೆ ಎನ್ನುವುದನ್ನು ವ್ಯಕ್ತಿಯೊಬ್ಬರು ರಿವೀಲ್ ಮಾಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಈಗೆಲ್ಲ ಬಾಡಿಗೆ ಮನೆಗಳ ವಿಚಾರದಲ್ಲಿ ಒಂದಿಲ್ಲೊಂದು ತಕರಾರುಗಳು ಮುಂದುವರಿದಿದೆ. ಬೆಂಗಳೂರಿನ ಬಾಡಿಗೆದಾರರೊಬ್ಬರು ರೆಡ್ಡಿಟ್‌ನಲ್ಲಿ ಈ ಮೋಸಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬಾಡಿಗೆ ಅವಧಿ ಮುಗಿದ ಮೇಲೆ ಮನೆಯ ಮಾಲೀಕರು ಮನೆಗೆ ಬಣ್ಣ ಬಳಿಯಲು ಹಾಗೂ ಮನೆಯ ನಿರ್ವಹಣೆ ಅಥವಾ ದುರಸ್ತಿ ವೆಚ್ಚಕ್ಕೆಂದು ಬರೋಬ್ಬರಿ 60,000 ರೂ. ಹಣವನ್ನು ಮುಂಗಡ ಹಣದಿಂದ ಕಡಿತ ಮಾಡಿದ್ದಾರೆ. ನಾನು ಈ ಬಾಡಿಗೆ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ವಾಸಿಸುತ್ತಿದ್ದೆ. ಆದರೆ, ಮನೆ ಖಾಲಿ ಮಾಡುವಾಗ ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ಹಿಡಿದುಕೊಂಡಿರುವುದು ಎಷ್ಟು ಸರಿ ಇದೊಂದು ಸ್ಕ್ಯಾಮೇ ಸರಿ ಎಂದು ಬೆಂಗಳೂರಿನಲ್ಲಿ ಬಾಡಿಗೆ ಮನೆದಾರರಿಂದ ಸಂಕಷ್ಟ ಎದುರಿಸಿದ ಬಾಡಿಗೆದಾರರೊಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಡಿಗೆ ಮನೆಯಲ್ಲಿ ಎರಡು ವರ್ಷ ವಾಸಿಸಿದ ಮೇಲೆ ಮನೆಗೆ ಬಣ್ಣ ಬಳಿಯುವುದು ಸಾಮಾನ್ಯ. ಅಲ್ಲದೆ ಸಣ್ಣಪುಟ್ಟ ದುರಸ್ತಿ ಕೆಲಸಗಳು ಇರುತ್ತವೆ. ಆದರೆ ಇಷ್ಟೊಂದು ದುಬಾರಿ ಮೊತ್ತದ ಮುಂಗಡ ಹಣವನ್ನು ತೆಗೆದುಕೊಳ್ಳುವುದು ಎಷ್ಟು ಸರಿ ಎಂದಿದ್ದಾರೆ. ನಾನು ಕಳೆದ ಎರಡು ವರ್ಷಗಳಿಂದ 3BHK ಮನೆಯಲ್ಲಿ ಬಾಡಿಗೆಗೆ ಇದ್ದೆ. ತಿಂಗಳಿಗೆ ಈ ಮನೆಯ ಬಾಡಿಗೆಯು 60,000 ಸಾವಿರ ರೂಪಾಯಿ ಇದೆ. ಆದರೆ ಮನೆಯ ಮಾಲೀಕರು ಮನೆಯ ಪೇಯಿಂಟಿಂಗ್ ಮಾಡುವುದಕ್ಕೆ ಒಂದು ತಿಂಗಳ ಪೂರ್ಣ ಬಾಡಿಗೆ ಮೊತ್ತವನ್ನು ಕಡಿತ ಮಾಡುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ ಇದರೊಂದಿಗೆ ನಿರ್ವಹಣೆ ವೆಚ್ಚವನ್ನೂ ಕೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಮನೆಯಿಂದ ಹೊರ ಬಂದ ನಂತರ ಇಷ್ಟೊಂದು ದೊಡ್ಡ ಮೊತ್ತವನ್ನು ಕಡಿತ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಮನೆಯ ದುರಸ್ತಿ ಹಾಗೂ ಬಣ್ಣ ಬಳಿಯುವುದು ಮನೆಯ ಮಾಲೀಕರ ಕೆಲಸವಲ್ಲವೇ ಕನಿಷ್ಟ ಮೊತ್ತವನ್ನು ಸಹ ಮನೆಯ ಮಾಲೀಕರು ವೆಚ್ಚ ಮಾಡದಿದ್ದರೆ ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Bengaluru Rent: ಸೋಶಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆ
ಇನ್ನು ಈ ಪೋಸ್ಟ್‌ಗೆ ರೆಡ್ಡಿಟ್‌ನಲ್ಲಿ ಪರ - ವಿರೋಧ ಚರ್ಚೆ ನಡೆದಿದೆ. ಮನೆ ಬಾಡಿಗೆಯನ್ನು ಪಡೆಯುವಾಗಲೇ ಮನೆಯ ಮಾಲೀಕರು ಹಾಗೂ ಬಾಡಿಗೆದಾರರು ಒಪ್ಪಂದ ಮಾಡಿಕೊಂಡಿರುತ್ತಾರೆ. ಬಾಡಿಗೆ ಒಪ್ಪಂದದ ಪ್ರಕಾರ ಮನೆಯನ್ನು ಖಾಲಿ ಮಾಡುವಾಗ ಮನೆಗೆ ಬಣ್ಣ ಬಳಿಯುವುದಕ್ಕೆ ಹಣ ಕಡಿತ ಮಾಡುವುದು ಸಾಮಾನ್ಯ. ಬಾಡಿಗೆದಾರರು ಮನೆಯಿಂದ ಹೊರಹೋಗುವ ಸಮಯದಲ್ಲಿ ಒಪ್ಪಿಕೊಂಡ ನಿಯಮಗಳನ್ನು ಪರಿಶೀಲಿಸಬೇಕು, ವಿಶೇಷವಾಗಿ ಆಸ್ತಿಯನ್ನು ಸ್ವೀಕರಿಸಿದ ಸ್ಥಿತಿಯಲ್ಲಿಯೇ ಹಿಂತಿರುಗಿಸಬೇಕಾದ ಷರತ್ತುಗಳನ್ನು ಪರಿಶೀಲಿಸಬೇಕು ಎಂದೂ ಕೆಲವರು ಹೇಳಿದ್ದಾರೆ.


Click it and Unblock the Notifications
