Bengaluru Rains: ಇಂದು ಬೆಳ್ಳಂಬೆಳಗ್ಗೆ ಭಾರೀ ಮಳೆ ಆರ್ಭಟ, 135 ಮಿಮೀ ಮಳೆ, ಮುನ್ಸೂಚನೆ ಏನಿದೆ?

ಬೆಂಗಳೂರು, ಮೇ 20: ಬೆಂಗಳೂರಿನಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ತಣ್ಣಗಾಗಿಲ್ಲ. ಕಳೆದ ನಾಲ್ಕು ದಿನಗಳಿಂದ ಚುರುಕಾಗಿರುವ ಮಳೆ ಗುಡುಗು, ಮಿಂಚು ಸಹಿತ ಸುರಿಯುತ್ತಿದೆ. ಮೊನ್ನೆ ಸುರಿದ ಮಳೆಯ ಅವಾಂತರ, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅದಾಗಲೇ ಮಂಗಳವಾರ ಬೆಳ್ಳಂಬೆಳ್ಳಗ್ಗೆ (07.19 ಗಂಟೆ ವರೆಗೆ) ನಗರದಲ್ಲಿ ಬರೋಬ್ಬರಿ 135 ಮಿಲಿ ಮೀಟರ್ ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ. ಹಾಗಾದರೆ ಎಲ್ಲೆಲ್ಲೆ ಎಷ್ಟು ಮಳೆ ಆಗಿದೆ. ಮುನ್ಸೂಚನೆ ಏನಿದೆ ಎಂಬ ಮಾಹಿತಿ ಇಲ್ಲಿದೆ.

ತಮಿಳುನಾಡು ಕರಾವಳಿ ಭಾಗದ ಸಮೀಪ ಹವಾಮಾನ ವೈಪರೀತ್ಯ ಉಂಟಾಗಿದೆ. ಇತ್ತ ಅರಬ್ಬಿ ಸಮುದ್ರಲ್ಲೂ ಇದೇ ರೀತಿಯವಾತಾವರಣ ಉಂಟಾಗಿದೆ. ಸಮುದ್ರೇ ಮೇಲ್ಮೈನಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದೆ. ಈ ಕಾರಣದಿಂದ ಬೆಂಗಳೂರು ಮಾತ್ರವಲದಲೇ, ರಾಜ್ಯಾದ್ಯಂತ ಮಳೆ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದೆ.

Bengaluru Recorded Heavy Rain from Today Early Morning Yellow Alert Weather forecast

ನಗರಾದ್ಯಂತ ಇಂದು ಬೆಳಗ್ಗೆ ಸುರಿದ ಮಳೆ ವಿವರ

ಮಂಗಳವಾರ ಬೆಂಗಳೂರಿನಲ್ಲಿ ರಾಜರಾಜೇಶ್ವರಿ ನಗರ ಒಂದರಲ್ಲೇ ಬರೋಬ್ಬರಿ 135 ಮಿಲಿ ಮೀಟರ್ ಮಳೆ ಆಗಿದೆ. ಉಳಿದಂತೆ ಕೆಂಗೇರಿ 134.5 ಮಿ.ಮೀ, ನಾಯಂಡಹಳ್ಳಿ 115 ಮಿ.ಮೀ, ವಿದ್ಯಾಪೀಠ 110 ಮಿ.ಮೀ, ಆರ್‌ಆರ್‌ ನಗರ ಕೆಂಗೇರಿ 80.5ಮಿ.ಮೀ, ಹಂಪಿನಗರ 80.5 ಮಿ.ಮೀ, ರಾಜರಾಜೇಶ್ವರಿ ನಗರ 02 77 ಮಿ.ಮೀ, ಎಚ್‌ ಗೊಲ್ಲಹಳ್ಳಿ 70.5 ಮಿ.ಮೀ, ದೊರೆಸಾನಿಪಾಳ್ಯ 70.5 ಮಿ.ಮೀ, ಬಿಳೆಕಹಳ್ಳಿ 70 ಮಿ.ಮೀ, ಹೆಮ್ಮಿಗೆಪುರ 62.5 ಮಿ.ಮೀ, ಹೆಮ್ಮಿಗೆಪುರ-2 61 ಮಿ.ಮೀ, ಹೆರೋಹಳ್ಳಿ 61 ಮಿ.ಮೀ, ಅರಕೆರೆ 46.5 ಮಿ.ಮೀ, ಪಟ್ಟಾಭಿರಾಮನಗರ 44 ಮಿ.ಮೀ, ಬಸವೇಶ್ವರ ನಗರ 43ಮಿ.ಮೀ, ಕೋರಮಂಗಲ 33 ಮಿ.ಮೀ, ನಾಗಪುರ 27 ಮಿ.ಮೀ. ಮಳೆ ದಾಖಲಾಗಿದೆ.

ಬೆಂಗಳೂರಿನ ವಿವಿಧೆಡೆ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಈ ಮಧ್ಯೆ ಮೂವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಳೆ ಹಾನಿ ಪ್ರದೇಶಗಳಲ್ಲಿ ಎಸ್‌ಡಿಆರ್‌ಎಫ್ ಹಾಗೂ ಬಿಬಿಎಂಪಿ ಸಿಬ್ಬಂದಿ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದಾರೆ.

ಬೆಂಗಳೂರು ಮಳೆ ಮುನ್ಸೂಚನೆ ಏನಿದೆ?

ರಾಜಧಾನಿ ಬೆಂಗಳೂರಿಗೆ ಚೆಂಡಮಾರುತದ ಸ್ಪಷ್ಟ ಪ್ರಭಾವ ಇದೆ. ಹೀಗಾಗಿ ಇಂದು ಮತ್ತು ನಾಳೆ (ಮೇ 20, 21) ರಂದು ಎರಡು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಗುಡುಗು ಮಿಂಚು ಸಹಿತ ನಿರೀಕ್ಷೆಯಂತೆ ಇಂದು ಮಂಗಳವಾರ ಬೆಳಗ್ಗೆ ಧಾರಾಕಾರ ಮಳೆ ಆಗುತ್ತಿದೆ. ಮುಂದಿನ 48 ಗಂಟೆಯು ಇದೇ ರೀತಿ ಮಳೆ ಸುರಿಯಲಿದೆ.

ಹವಾಮಾನ ಇಲಾಕೆ ಪ್ರಕಾರ, ಮೇ 25ರವರೆಗೆ ನಗರದಲ್ಲಿ ಪೂರ್ವ ಮುಂಗಾರು ಚುರುಕಾಗಿರಲಿದೆ. ಈ ವೇಳೆಗೆ ಗರಿಷ್ಠ ತಾಪಮಾನ 28-30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 19-20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ತಾಪಮಾನದಲ್ಲಿ ತೀವ್ರ ಬದಲಾವನೆ ಆಗಿದ್ದು, ಬೇಸಿಗೆ ಸದ್ಯಕ್ಕೆ ಮರೆಯಾಗಿದೆ.

ಸಂಚಾರ ದಟ್ಟಣೆ, ಬದಲಿ ಮಾರ್ಗಕ್ಕೆ ಸೂಚನೆ

ಬೆಂಗಳೂರಿನ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ಅಂಡರ್ ಪಾಸ್ ನಲ್ಲಿ ಮಳೆ ಬಂದಿದ್ದರಿಂದ ವಾಟರ್ ಲಾಗಿಂಗ್ ಆಗಿದ್ದು, ಹೊಸೂರು ಮುಖ್ಯರಸ್ತೆಯಲ್ಲಿ ನಗರದಿಂದ ಹೊರಭಾಗಕ್ಕೆ ಹೋಗುವ ಮತ್ತು ನಗರದ ಒಳಭಾಗಕ್ಕೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದ್ದು ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಳೆ ಬೀಳುತ್ತಿರುವುದರಿಂದ ರೂಪೇನ ಅಗ್ರಹಾರದ ಬಳಿ ವಾಟರ್ ಲಾಗಿಂಗ್ ಸಮಸ್ಯೆ ಉಂಟಾಗಿದೆ. ಹೊಸೂರು ಮುಖ್ಯ ರಸ್ತೆ ಮೂಲಕ ನಗರದ ಒಳ ಭಾಗಕ್ಕೆ ಬರುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ವಾಹನ ಸವಾರರು ಬದಲಿ ರಸ್ತೆಗಳನ್ನು ಬಳಸುವಂತೆ ಸಲಹೆ ನಿಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+