Bengaluru real estate: ಶೇ.70ರಷ್ಟು ಆಸ್ತಿ ಒಪ್ಪಂದದಡಿ ಅಭಿವೃದ್ಧಿ: ಆಸ್ತಿ ಮಾರಾಟ ಮೌಲ್ಯ ಹೆಚ್ಚಾಗಿದ್ದೆಷ್ಟು? ಮಾಹಿತಿ
ಬೆಂಗಳೂರು, ಫೆಬ್ರವರಿ 09: ಬೆಂಗಳೂರಿನ ವಸತಿ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಶೇಕಡಾ 70 ಪ್ರತಿಶತದಷ್ಟು ರಿಯಲ್ ಎಸ್ಟೇಟ್ ಆಸ್ತಿಗಳನ್ನು ಜಂಟಿ ಒಪ್ಪಂದಗಳ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಈ ಕುರಿತು ರಿಯಲ್ ಎಸ್ಟೇಟ್ ಸಂಶೋಧನೆ, ಸಲಹಾ ಮತ್ತು ವಹಿವಾಟು ಸಂಸ್ಥೆ ಮೆರಾಕಿ ವರದಿಯು ಅಧಿಕೃತ ಮಾಹಿತಿ ತಿಳಿಸಿದೆ.
ಬೆಂಗಳೂರಿನಲ್ಲಿ ಈ ಹಿಂದಿನ ಮೂರು ವರ್ಷಗಳಲ್ಲಿ ಮುಂಬೈ, ಚೆನ್ನೈ, ಅಹಮದಾಬಾದ್,ನವದೆಹಲಿ (ಎನ್‌ಸಿಆರ್), ಪುಣೆ, ಕೋಲ್ಕತ್ತಾ ಹಾಗೂ ಹೈದರಾಬಾದ್ ಜೊತೆಗೆ ಬೆಂಗಳೂರಿನಲ್ಲಿ ಭೂಮಿಯ ಬೆಲೆಗಳು ಗಗನಕ್ಕೇರಿವೆ. ಐಟಿ ಹಬ್ ಆಗಿರುವ ರಾಜಧಾನಿಯಲ್ಲಿ ಇದೀಗ ಭೂಮಿಯ ಮೌಲ್ಯಗಳು ಶೇಕಡಾ 20ರಿಂದ 30ರಷ್ಟು ಏರಿಕೆ ಆಗಿವೆ ಎಂಬುದು ಈ ವರದಿಯಿಂದ ಸಾಬೀತಾಗಿದೆ.

ಯೋಜನೆ ರೂಪಿಸಲು ಸಹಕಾರಿ
ಐಟಿ ಕಂಪನಿಗಳು ಮತ್ತು ಸ್ಟಾರ್ಟ್-ಅಪ್‌ಗಳು ಮತ್ತು ನಿರಂತರ ಮೂಲಸೌಕರ್ಯ ಅಭಿವೃದ್ಧಿ ಹೊಂದಿರುವ ಬೆಂಗಳೂರಿನಲ್ಲಿ ಆಸ್ತಿ ಮೌಲ್ಯ ಹೆಚ್ಚಳ ಸಹಜ ಎಂಬಂತಾಗಿದೆ. ಇದು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ದೃಢ ಬೆಳವಣಿಗೆಯ ಅವಕಾಶ ಮಾಡಿಕೊಡುತ್ತದೆ. ಅಲ್ಲದೇ ನಗರದಲ್ಲಿ ವಾಣಿಜ್ಯ ಯೋಜನೆಗಳು ರೂಪಿಸಲು ಸಹಕಾರಿಯಾಗುತ್ತವೆ ಎನ್ನಲಾಗಿದೆ.
ಜಂಟಿ ಅಭಿವೃದ್ಧಿ ಒಪ್ಪಂದಗಳು ಭಾರತದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸುತ್ತದೆ. ಆಸ್ತಿ ದರ ಏರಿಕೆಯು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮಹತ್ತರ ಕೊಡುಗೆ ನೀಡುತ್ತದೆ. ಅಲ್ಲದೇ ಇದು ಭೂಮಾಲೀಕರ ಕಾರ್ಯತಂತ್ರದ ದಿಕ್ಸೂಚಿಯು ಆಗಿದೆ.

ಜೆಡಿಎ: ಭೂಮಾಲೀಕರಿಗೆ ಅಧಿಕ ಲಾಭ
ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ಟ್ರೆಂಡ್‌ಗಳನ್ನು ನಿರ್ವಹಿಸಲು ಅಗತ್ಯ ಜ್ಞಾನ ಸಹ ಒದಗಿಸುತ್ತದೆ. ಭೂಮಾಲೀಕರು ಹೆಚ್ಚಾಗಿ ಜೆಡಿಎ ಗಳು ಮತ್ತು ಅಭಿವೃದ್ಧಿ ನಿರ್ವಹಣಾ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಎಂದು ಮೆರಾಕಿಯ ವ್ಯವಸ್ಥಾಪಕ ನಿರ್ದೇಶಕ ಗೋರಖ್ ಜುಂಜುನ್‌ವಾಲಾ ಮಾಹಿತಿ ನೀಡಿದ್ದಾರೆ.
ಜಂಟಿ ಅಭಿವೃದ್ಧಿ ಒಪ್ಪಂದ (JDA), ರಿಯಲ್ ಎಸ್ಟೇಟ್ ಯೋಜನೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಭೂಮಾಲೀಕ ಮತ್ತು ಡೆವಲಪರ್ ನಡುವಿನ ಒಪ್ಪಂದಗಳು ಮಾರ್ಪಾಡುಗುತ್ತಿರುತ್ತವೆ. ಮತ್ತೊಂದೆಡೆ JDA ಇದು ಆಸ್ತಿಯ ಮಾಲೀಕತ್ವದ ಹಕ್ಕುಗಳನ್ನು ಕಳೆದುಕೊಳ್ಳದೆ ತಮ್ಮ ಭೂಮಿಯನ್ನು ಹಣಗಳಿಸಲು ಭೂ ಮಾಲೀಕರಿಗೆ ಮಾರಾಟಕ್ಕೆ ಅವಕಾಶ ಸಹ ನೀಡುತ್ತದೆ.
ಬೆಂಗಳೂರಿನ ಹಲವಾರು ಭೂಮಾಲೀಕರು ವಸತಿ ಮತ್ತು ವಾಣಿಜ್ಯ ಯೋಜನೆಗಳ ಮಾರಾಟ ಮಾಡುವ ವೇಳೆ ಜೆಡಿಯುಗೆ ಆದ್ಯತೆ ನೀಡುತ್ತಾರೆ. ಈ ಒಪ್ಪಂದವು ಆಸ್ತಿ ವಹಿವಾಟುಗಳು ಸಂಪೂರ್ಣ ವಹಿವಾಟಿಗಿಂತ 2 ರಿಂದ 2.5 ಪಟ್ಟು ಹೆಚ್ಚಿನ ಆದಾಯ ತಂದು ಕೊಡುತ್ತವೆ ಎಂದು ಮಾಲೀಕರು ನಂಬಿದ್ದಾರೆ ಎಂದು ಅವರು ತಿಳಿಸಿದರು.
ಬೆಂಗಳೂರಿಗೆ ಹೆಚ್ಚು ಕೈಗಾರಿಕೆಗಳು ಬರುತ್ತವೆ. ಅಲ್ಲದೇ ಐಟಿ ಹಬ್ ಆಗಿರುವ ಕಾರಣ, ಬೆಳೆಯುತ್ತಿರುವ ನಗರವಾಗಿದೆ. ಇದು ಸಹ ಆಸ್ತಿ ಮೌಲ್ಯ ಹೆಚ್ಚಳಕ್ಕೆ ಕಾರಣವಾಗಿದೆ.












Click it and Unblock the Notifications