ಬೆಂಗಳೂರಿನ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ: ಈ ಆಸ್ತಿಗಳಿಗೆ ಡಿಮ್ಯಾಂಡ್!
ಬೆಂಗಳೂರಿನಲ್ಲಿ ಮೂಲಸೌಕರ್ಯ ಸಮಸ್ಯೆ ಹಾಗೂ ಕೆಲವೊಂದು ಅಪಪ್ರಚಾರಗಳ ನಡುವೆಯೂ ಭೂಮಿಗೆ ಬಂಗಾರದ ಬೆಲೆ ಬರುವುದು ಮುಂದುವರಿದಿದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಿನದಿಂದ ದಿನಕ್ಕೆ ಬೂಸ್ಟ್ ಆಗುತ್ತಿದೆ. ಬೆಂಗಳೂರಿನಲ್ಲಿ ಭೂಮಿಗೆ ಒಳ್ಳೆಯ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಐದು ವರ್ಷ ಭೂಮಿ / ಮನೆ ಅಥವಾ ರಿಯಲ್ ಎಸ್ಟೇಟ್ ಮೇಲೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗುತ್ತಿದ್ದು, ಜನ ಈ ಎರಡರ ಬೆಲೆಯು ಗಗನಮುಖಿಯಾಗಿದೆ. ಇದೀಗ ಬೆಂಗಳೂರಿನ ವಸತಿ ಪ್ರದೇಶಕ್ಕೆ ಭರ್ಜರಿ ಬೇಡಿಕೆ ಬರುತ್ತಿದೆ ಎಂದು ಪ್ರಾಪ್‌ಈಕ್ವಿಟಿ (PropEquity) ವರದಿ ಮಾಡಿದೆ.
ಬೆಂಗಳೂರಿನಲ್ಲಿ ಕಳೆದ ಮೂರು ದಶಕದ ಅವಧಿಯಲ್ಲಿ ಭೂಮಿಯ ಬೆಲೆಯು ಹಂತ ಹಂತವಾಗಿ ಹೆಚ್ಚಾಗುತ್ತಲ್ಲೇ ಇದೆ. ಇದೀಗ ಈ ವರ್ಷ ಜುಲೈ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಮನೆ ಮಾರಾಟ ಪ್ರಮಾಣವು ಬರೋಬ್ಬರಿ ಶೇ.21% ರಷ್ಟು ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಮನೆಗಳ ಮಾರಾಟ ಹಾಗೂ ಖರೀದಿ ಪ್ರಕ್ರಿಯೆಯು ಜೋರಾಗಿದೆ. ವಸತಿ ಪ್ರದೇಶಗಳ ರಿಯಲ್ ಎಸ್ಟೇಟ್ ಪ್ರಕ್ರಿಯೆಯು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಮಾರಾಟವು 13,966 ಯೂನಿಟ್‌ಗಳಷ್ಟಿತ್ತು ಎಂದು ಸಂಸ್ಥೆ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಈ ವರ್ಷ ಪ್ರಾರಂಭದಿಂದಲೂ ಒಂದಿಲ್ಲೊಂದು ನೆಗೆಟಿವ್ ವಿಚಾರಕ್ಕೆ ಹೆಚ್ಚು ಚರ್ಚೆ ಆಗುತ್ತಿತ್ತು. ಅದರಲ್ಲಿ ಮುಖ್ಯವಾಗಿ ಅನ್ಯಭಾಷಿಕರು ಹಾಗೂ ಕನ್ನಡಿಗರೊಂದಿಗೆ ಭಾಷಾ ವಿವಾದ, ರಸ್ತೆ ಗುಂಡಿ ಸಮಸ್ಯೆ ಹಾಗೂ ಬೆಂಗಳೂರು ಮೂಲಸೌಕರ್ಯದ ವಿಷಯಗಳು ಹೆಚ್ಚು ಚರ್ಚೆ ಆಗುತ್ತಿತ್ತು. ಅಲ್ಲದೇ ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಹಲವರು ಮುಖ್ಯವಾಗಿ ಕೆಲವೊಂದು ಐಟಿ - ಬಿಟಿ ಕಂಪನಿಗಳು ಬೆಂಗಳೂರು ಬಿಡಲಿವೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು ಈ ರೀತಿ ಇರುವಾಗಲೇ ರಿಯಲ್ ಎಸ್ಟೇಟ್ ಬೂಸ್ಟ್ ಆಗಿದೆ. ಈ ವಿಚಾರಗಳು ಬೆಂಗಳೂರಿನ ಮೇಲಾಗಲಿ ಅಥವಾ ಬೆಂಗಳೂರಿನ ರಿಯಲ್ ಎಸ್ಟೇಟ್‌ನ ಮೇಲಾಗಲಿ ಯಾವುದೇ ಪರಿಣಾಮ ಬೀರಿಲ್ಲ ಎನ್ನುವ ಅಂಶವನ್ನು ಅಂಕಿ - ಅಂಶಗಳು ದೃಢಪಡಿಸಿವೆ.
2025ನೇ ಸಾಲಿನ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ಕಳೆದ ವರ್ಷಕ್ಕಿಂತಲೂ ವಸತಿ ಆಸ್ತಿಗಳ ಮಾರಾಟ ಬೂಸ್ಟ್ ಆಗಿದೆ. ಬೆಂಗಳೂರಿನಲ್ಲಿ ವಸತಿ ಬೇಡಿಕೆ ಹೆಚ್ಚಾಗುವುದಕ್ಕೆ ಮುಖ್ಯವಾಗಿ ಐಟಿ ಮತ್ತು ಸ್ಟಾರ್ಟ್ ಅಪ್‌ಗಳ ಪ್ರಾರಂಭವೂ ಕಾರಣವಾಗಿದೆ. ಇದರೊಂದಿಗೆ ಹವಾಮಾನ ಸ್ಥಿರತೆಯೂ ಪ್ಲಸ್ ಪಾಯಿಂಟ್ಸ್ ಆಗಿದೆ ಎಂದು ಹೇಳಲಾಗಿದೆ.
ಭೂಮಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ: ಇನ್ನು ಮುಂದಿನ ದಿನಗಳಲ್ಲಿ ಭೂಮಿ ಬೆಲೆ ಬೆಂಗಳೂರಿನಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರಿನಲ್ಲಿ ಹಲವು ಪ್ರಮುಖ ಪ್ರಾಜೆಕ್ಟ್ ಜಾರಿಯಾಗುತ್ತಿದ್ದು, ಇದರಿಂದ ಭೂಮಿ ಬೆಲೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.












Click it and Unblock the Notifications