Heavy Rainfall: ಕಳೆದ 24 ಗಂಟೆಗಳಲ್ಲಿ ಹಂಪಿನಗರದಲ್ಲಿ ಗರಿಷ್ಠ ಮಳೆ ದಾಖಲು, 03 ದಿನ ಭಾರೀ ಮಳೆ ಎಚ್ಚರಿಕೆ

ಬೆಂಗಳೂರು, ಅಕ್ಟೋಬರ್ 23: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹಿಂಗಾರು ಮಳೆ ಸಕ್ರಿಯವಾಗಿದ್ದು, ಬಿಟ್ಟು ಬಿಡದೇ ಸುರಿಯುತ್ತಿದೆ. ಇಷ್ಟು ದಿನ ಸಂಜೆ ನಂತರ ಬರುತ್ತಿದ್ದ ಮಳೆರಾಯ, ನೆನ್ನೆ ಮಂಗಳವಾರ ಅ.22ರಂದು ಮಧ್ಯಾಹ್ನವೇ ಸುರಿಯಲಾರಂಭಿಸಿದ್ದ. ಈ ಮಳೆಗೆ ಹಂಪಿನಗರದಲ್ಲಿ ಅತ್ಯಧಿಕ ಮಳೆ (63.50mm) ದಾಖಲಾಗಿದೆ. ಉಳಿದ ಪ್ರದೇಶಗಳಲ್ಲೂ ಧಾರಾಕಾರ ಮಳೆ ಆಗಿದೆ. ಈ ಮಹಾಮಳೆ ಮುಂದಿನ 03 ದಿನ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಮುನ್ಸೂಚನೆ ಪ್ರಕಾರ, ನಗರದಲ್ಲಿ ಮುಂದಿನ ಮೂರು ದಿನವು ಮಳೆ ಅಬ್ಬರಿಸಲಿದೆ. ಗುಡಗು ಮಿಂಚು ಆಗಾಗ ಜೋರು ಗಾಳಿ ಸಹಿತ ಮಳೆ ಅಬ್ಬರಿಸಲಿದೆ. ಮಧ್ಯಾಹ್ನ ಇಲ್ಲವೇ, ಸಂಜೆ ಹೊತ್ತಿಗೆ ನಗರದಲ್ಲಿ ಮಳೆ ಜಮೆ ಆಗಲಿದೆ. ನೋಡ ನೋಡುತ್ತಿದ್ದಂತೆ ಮಬ್ಬು ವಾತಾವರಣ ಸೃಷ್ಟಿಯಾಗಿದೆ ಎಲ್ಲಡೆ ಮಳೆ ಆವರಿಸಿಕೊಳ್ಳುವ ಎಲ್ಲ ಲಕ್ಷಣಗಳು ಇವೆ ಎಂದು ಉಸ್ತುವಾರಿ ಕೇಂದ್ರ ಅಂದಾಜಿಸಿದೆ.

Bengaluru Rains Heavy Rainfall Recorded in Hampi Nagar and Other Areas Check Full Forecast

ಈ ಮುನ್ಸೂಚನೆಯಿಂದಾಗಿ ನಗರದ ವಿವಿಧಡೆ ಈಗಾಗಲೇ ಪ್ರವಾಸ ಸ್ಥಿತಿ ಎದುರಿಸುತ್ತಿರುವ ಯಲಹಂಕ, ಮಹಾದೇವಪುರ ಸೇರಿದಂತೆ ವಿವಿಧ ಎಂಟು ವಲಯಗಳ ತಗ್ಗು ಪ್ರದೇಶಗಳ ನಿವಾಸಿಗಳು ಜೀವ ಭಯದಲ್ಲಿ ಬದುಕುವಂತಾಗಿದೆ. ಮಳೆ ನೀರು ಹೊರ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

ಬುಧವಾರ ಸಹ ವ್ಯಾಪಕ ಮಳೆ

ರಾಜಧಾನಿ ಬೆಂಗಳೂರಲ್ಲಿ ಬೆಳಗ್ಗೆ ಹವಾಮಾನ ಸಜಹ ಎಂಬಂತೆ ಕಂಡು ಬರುತ್ತಿದೆ. ಆದರೆ ಮಧ್ಯಾಹ್ನದ ಹೊತ್ತಿಗೆ ನಗರದ ಒಂದಲ್ಲಾ ಒಂಡು ಕಡೆ ಸುರಿಯುವ ಮಳೆ, ನಗರಾದ್ಯಂತ ವಿಸ್ತರಣೆಗೊಳ್ಳುತ್ತದೇ. ಇದೇ ರೀತಿ ಇಂದು ಬುಧವಾರ ಸಹ ನಗರದಲ್ಲಿ ವ್ಯಾಪಕ ಮಳೆ ಆಗುವ ನಿರೀಕ್ಷೆಗಳು ಇವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Bengaluru Rains Heavy Rainfall Recorded in Hampi Nagar and Other Areas Check Full Forecast

ನೆನ್ನೆ ಮಂಗಳವಾರ ನಗರದ ವಿವಿಧೆಡೆ ಭರ್ಜರಿ ಮಳೆ

ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಬೆಳಗ್ಗೆ 8.30 ಗಂಟೆ ಹೊತ್ತಿಗೆ ಹಂಪಿನಗರದಲ್ಲಿ ಬರೋಬ್ಬರಿ 63.5 ಮಿ.ಮೀ. ಮಳೆದಾಖಲಾಗಿದೆ. ಉಳಿದಂತೆ ಮಾರುತಿ ಮಂದಿರ 57ಮಿ.ಮೀ., ಕೆಂಗೇರಿ 52.5ಮಿ.ಮೀ., ಆರ್‌.ಆರ್‌ ನಗರ 51ಮಿ.ಮೀ., ಹಗದೂರು 50ಮಿ.ಮೀ., ಬಸವೇಶ್ವರ ನಗರ 41.5ಮಿ.ಮೀ., ಕಾಡುಗೋಡಿ 40ಮಿ.ಮೀ., ವಿ.ನಾಗೇನಹಳ್ಳಿ 37ಮಿ.ಮೀ., ಬಾಣಸವಾಡಿ ಪೂರ್ವ 37ಮಿ.ಮೀ., ಬಾಗಲಗುಂಟೆ 36ಮಿ.ಮೀ. ಮತ್ತು ನಾಗಪುರದಲ್ಲಿ 34.5ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇವುಗಳನ್ನು ಹೊರತುಪಡಿಸಿದರೆ ಬೇರೆ ಕಡೆಗಳಲ್ಲಿ ಆಗಾಗ ಜೋರು ಮತ್ತು ಸಾಧಾರಣ ಮಳೆ ಸುರಿದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಮಳೆಯಿಂದ ಅವಾಂತರಗಳ ಪರಿಹಾರ ಕಾರ್ಯದಲ್ಲಿ ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ನಿರತರಾಗಿದ್ದಾರೆ. ಅಗತ್ಯ ಕ್ರಮ ವಹಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+