Bengaluru rain: ಮುಂದಿನ 48 ಗಂಟೆ ಭಾರೀ ಮಳೆ, ಸೆ.13ವರೆಗಿನ ಹವಾಮಾನ ಮಾಹಿತಿ

ಬೆಂಗಳೂರು, ಸೆಪ್ಟಂಬರ್ 07: ಉದ್ಯಾನ ನಗರಿ ಬೆಂಗಳೂರಿನಲ್ಲಿ ಕಳೆದ ಒಂದುವಾರದಿಂದ ಉತ್ತಮ ಮಳೆ ಸುರಿಯುತ್ತಿದೆ. ಇದರಿಂದ ವಾತಾವರಣವೆಲ್ಲ ತಂಪಾಗಿದ್ದು, ತಾತ್ಕಾಲಿಕವಾಗಿ ಅತ್ಯಧಿಕ ತಾಪಮಾನದ ದಿನಗಳ ನಂತರ ನಗರವಾಸಿಗಳು ಇದೀಗ ಮಳೆಗಾಲದ ದಿನಗಳನ್ನು ಅನುಭವಿಸುತ್ತಿದ್ದಾರೆ. ಈ ಜೋರು ಮಳೆ ಗುರುವಾರ ಮತ್ತು ಶುಕ್ರವಾರ ನಗರದಲ್ಲಿ ಮತ್ತಷ್ಟು ಬಿರುಸಿನಿಂದ ಕೂಡಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುನ್ಸೂಚನೆ ವರದಿ ಪ್ರಕಾರ, ಬೆಂಗಳೂರಿನಲ್ಲಿ ಸೆಪ್ಟಂಬರ್ 13ರವರೆಗೆ ವ್ಯಾಪಕ ಮಳೆ ಬರಲಿದೆ. ಇದರಲ್ಲಿ ಇಂದು ಗುರುವಾರ ಮತ್ತು ನಾಳೆ ಶುಕ್ರವಾರ ಮಾತ್ರ ಭಾರೀ ಮಳೆ ಆಗುವ ಲಕ್ಷಣಗಳು ಹೆಚ್ಚಿವೆ. ದಾಖಲೆ ಮಟ್ಟದಲ್ಲಿ ಗರಿಷ್ಠ ತಾಪಮಾನ ಕಂಡಿದ್ದ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಉತ್ತಮ ಮಳೆಗೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವೈಪರಿತ್ಯಗಳೇ ಕಾರಣ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

Bengaluru Rain: Many Parts of City Face Heavy Rain Today and Friday, Rain Continue Till Sep 13th

ಇಂದಿನಿಂದ ಮುಂದಿನ 48 ಗಂಟೆಗಳ ಕಾಲ ಮಧ್ಯಾಹ್ನ ಇಲ್ಲವೇ ಸಂಜೆಯಿಂದ ತಡರಾತ್ರಿವರೆಗೆ ಅನೇಕ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಬೀಳಲಿದೆ. ಉಳಿದಂತೆ ನಗರದ ಇನ್ನೂ ಕೆಲವು ಬಡಾವಣೆಗಳಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಆಗುವ ಸಾಧ್ಯತೆಗಳು ಹೆಚ್ಚಿದ್ದು, ಚಳಿಯ ವಾತಾವರಣ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.

ಸೆಪ್ಟಂಬರ್ 13 ರತನಕ ಮಳೆ, ಮಬ್ಬು ವಾತಾವರಣ

ನಂತರ ಸೆಪ್ಟಂಬರ್ 13ರವರೆಗೆ ತಂಪು ಮತ್ತು ಮೋಡ ಕವಿದ ವಾತಾವರಣ ನಿತ್ಯ ಸಂಜೆ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಮುಂದಿನ ಒಂದು ವಾರದ ತಾಪಮಾನ ಮಾಹಿತಿ ನೋಡುವುದಾದರೆ, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಗಳು ಇವೆ.

ಬಂಗಾಳಕೊಲ್ಲಿ ಸಮುದ್ರ ದಕ್ಷಿಣ ಭಾಗದಲ್ಲಿ ವಾಯುಭಾರ ಉಂಟಾಗಿತ್ತು. ಇಲ್ಲಿ ಸುಮಾರು 7ಕಿಲೋ ಮೀಟರ್‌ಗಿಂತಲೂ ಅತ್ಯಧಿಕ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿಯೊಂದು ಸೃಷ್ಟಿಯಾಗಿದೆ. ಇದರ ಪ್ರಭಾವದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಉತ್ತಮ ಮಳೆ ದಾಖಲಾಗುತ್ತಿದೆ.

Bengaluru Rain: Many Parts of City Face Heavy Rain Today and Friday, Rain Continue Till Sep 13th

ಬುಧವಾರ ಎಲ್ಲೆಲ್ಲಿ ಎಷ್ಟು ಮಳೆ ಆಯಿತು?

ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಅಧಿಕ 16.5 ಮಿಲಿ ಮೀಟರ್ ಮಳೆ ಬಿದ್ದಿದೆ. ಉಳಿದಂತೆ ಬೆಳ್ಳಂದೂರು 14 ಮಿ.ಮೀ, ಕೆಂಗೇರಿಯಲ್ಲಿ 13 ಮಿ.ಮೀ, ಸಿಂಗಸಂದ್ರ 13 ಮಿ.ಮೀ, ಬಿಟಿಎಂ ಬಡಾವಣೆ 11.5 ಮಿ.ಮೀ, ಎಚ್‌ಎಸ್‌ಆರ್‌ ಬಡಾವಣೆ 11 ಮಿ.ಮೀ, ರಾಜರಾಜೇಶ್ವರಿ ನಗರ, ಬೆಳ್ಳಂದೂರು (1) ಮತ್ತು ವಿದ್ಯಾಪೀಠದಲ್ಲಿ ತಲಾ 10ಮಿ.ಮೀ. ಮಳೆ ದಾಖಲಾಗಿದೆ. ಇನ್ನಿತರ ಕಡೆಗಳಲ್ಲಿ ಹಗುರ ಮಳೆ ಆಯಿತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+